ಅನುಪಮ್ ಖೇರ್ ಸೇರಿ 13 ಮಂದಿಯ ವಿರುದ್ಧ ಎಫ್ ಐಆರ್ ದಾಖಲಿಸಲು ಕೋರ್ಟ್ ಆದೇಶ
‘ದ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ಗೆ ಆ್ಯಕ್ಸಿಡೆಂಟ್
ಹೊಸದಿಲ್ಲಿ, ಜ.8: ‘ದ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಚಿತ್ರದ ವಿವಾದಕ್ಕೆ ಸಂಬಂಧಿಸಿ ಅನುಪಮ್ ಖೇರ್ ಮತ್ತು 13 ಮಂದಿಯ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಬಿಹಾರದ ಸ್ಥಳೀಯ ನ್ಯಾಯಾಲಯವೊಂದು ಆದೇಶಿಸಿದೆ.
ಸಿನೆಮಾದ ಪ್ರೋಮೋಗಳಲ್ಲಿ ‘ನೋವನ್ನುಂಟು’ ಮಾಡುವ ದೃಶ್ಯಗಳಿವೆ ಎಂದು ಚಿತ್ರದ ವಿರುದ್ಧ ಕೋರ್ಟ್ ಮೆಟ್ಟಿಲೇರಿರುವ ಅಡ್ವಕೇಟ್ ಸುಧೀರ್ ಓಜಾ ಅರ್ಜಿಯಲ್ಲಿ ತಿಳಿಸಿದ್ದರು. ಚಿತ್ರದಲ್ಲಿ ಮನಮೋಹನ್ ಸಿಂಗ್ ಪಾತ್ರ ನಿರ್ವಹಿಸಿರುವ ಅನುಪಮ್ ಖೇರ್ ಮಾತ್ರವಲ್ಲದೆ, ಅಕ್ಷಯ್ ಖನ್ನಾ ಸೇರಿ 13 ಮಂದಿಯ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಆದೇಶಿಸಲಾಗಿದೆ.
Next Story