varthabharthi

ಗಲ್ಫ್ ಸುದ್ದಿ

ಅಧ್ಯಕ್ಷರಾಗಿ ಹಂಝ ಮೈಂದಾಳ ನೇಮಕ

ಅಲ್ ಮಫಾಝ್ ಚಾರಿಟೇಬಲ್ ಟ್ರಸ್ಟ್ ರಿಯಾದ್ ಸಮಿತಿ ನೂತನ ಪದಾಧಿಕಾರಿಗಳ ಆಯ್ಕೆ

ವಾರ್ತಾ ಭಾರತಿ : 10 Jan, 2019

ರಿಯಾದ್,ಜ.10: ಅಲ್ ಮಫಾಝ್ ಚಾರಿಟೇಬಲ್ ಟ್ರಸ್ಟ್ (ರಿ) ಮೂಡುಬಿದ್ರಿ ಇದರ ರಿಯಾದ್ ಸಮಿತಿ ಸಭೆಯು ನಝೀರ್ ಕಾಶಿಪಟ್ಣರವರ ನಿವಾಸದಲ್ಲಿ ಸಮಿತಿಯ ಪೂರ್ವನಿಕಟ ಅಧ್ಯಕ್ಷ ಅಬ್ದುಲ್ ಹಮೀದ್ ಹೊಸಂಗಡಿಯವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಸಂಸ್ಥೆಯ ಸಾರಥಿ ಪಿ.ಪಿ.ಅಹ್ಮದ್ ಸಖಾಫಿಯವರ ಗಣ್ಯ ಉಪಸ್ಥಿತಿಯಲ್ಲಿ ನಡೆಯಿತು.

ರಿಯಾದ್ ನೂತನ ಸಮಿತಿಯ ಗೌರವಾಧ್ಯಕ್ಷರಾ ನಝೀರ್ ಕಾಶಿಪಟ್ಣ ಹಾಗೂ ಕರೀಮ್ ಲತೀಫಿ ಆಯ್ಕೆಯಾದರು. ಅಧ್ಯಕ್ಷರಾಗಿ ಸಂಘ ಸಂಸ್ಥೆಗಳ ಸಕ್ರಿಯ ನಾಯಕ ಹಂಝ ಮೈಂದಾಳ ಹಾಗೂ ಉಪಾಧ್ಯಕ್ಷರಾಗಿ ಅಬ್ದುಲ್ ರಹ್ಮಾನ್ ಗಂಟಲ್ಕಟ್ಟೆರವರು ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಗಳಾಗಿ ಇಕ್ಬಾಲ್ ನೀರಳಿಕೆ, ಜೊತೆ ಕಾರ್ಯದರ್ಶಿ ಅಲ್ತಾಫ್ ನೀರಳಿಕೆ, ಕೋಶಾಧಿಕಾರಿಯಾಗಿ ಅಬ್ದುಲ್ ಖಾದರ್ ಸಾಲೆತ್ತೂರು ರವರನ್ನು ಆಯ್ಕೆ ಮಾಡಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಮುಹಮ್ಮದ್ ಸಿತಾರ್, ಹಬೀಬ್ ಟಿ.ಎಚ್, ಅಶ್ರಫ್ ಕಿಲ್ಲೂರು, ಹಸನ್ ಸಾಗರ್, ನಿಝಾಮ್ ಸಾಗರ್, ಇಸ್ಮಾಯಿಲ್ ಕನ್ನಂಗಾರ್, ತಕ್ವೀದ್ ನೀರಳಿಕೆ, ಮುನೀರ್ ಬಜಾಲ್, ಶರೀಫ್ ಕೊಲ್ಪೆ, ಶಾಫಿ ಹೊಸಂಗಡಿ, ರ‌ಹೀಮ್ ಮಂಗಳೂರು ಟೂರ್ಸ್ ರವರನ್ನು ಆರಿಸಲಾಯಿತು.

ನಂತರ ಮಫಾಝ್ ರಿಯಾದ್ ಸಮಿತಿಯ ಮಾಜಿ ಅಧ್ಯಕ್ಷ ಅಬ್ದುಲ್ ಹಮೀದ್ ಹೊಸಂಗಡಿ, ನೂತನ ಅಧ್ಯಕ್ಷ ಹಂಝ ಮೈಂದಾಳ ಹಾಗೂ ಹಿರಿಯ ವಿದ್ವಾಂಸ ಪಿ.ಪಿ.ಅಹ್ಮದ್ ಸಖಾಫಿಯವರು ನೂತನ ಸಮಿತಿಗೆ ಶುಭಾಶಯ ಕೋರಿದರು. ಅಶ್ರಫ್ ಕಿಲ್ಲೂರು ಧನ್ಯವಾದ ಅರ್ಪಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)