varthabharthi

ಅಂತಾರಾಷ್ಟ್ರೀಯ

ಚೀನಾ ಭೇಟಿಯಿಂದ ವಾಪಸಾದ ಉ. ಕೊರಿಯ ನಾಯಕ

ವಾರ್ತಾ ಭಾರತಿ : 10 Jan, 2019

ಬೀಜಿಂಗ್, ಜ. 10: ಚೀನಾಕ್ಕೆ ಅಘೋಷಿತ ಭೇಟಿ ನೀಡಿರುವ ಉತ್ತರ ಕೊರಿಯ ನಾಯಕ ಕಿಮ್ ಜಾಂಗ್-ಉನ್ ಬುಧವಾರ ತನ್ನ ದೇಶಕ್ಕೆ ವಾಪಸಾಗಿದ್ದಾರೆ. ಆದರೆ, ಚೀನಾ ನಾಯಕತ್ವದೊಂದಿಗೆ ಅವರು ನಡೆಸಿದ ಮಾತುಕತೆಗಳ ವಿವರಗಳು ಬಹಿರಂಗವಾಗಿಲ್ಲ.

ಕಿಮ್ ಮಂಗಳವಾರ ಬೀಜಿಂಗ್‌ಗೆ ಆಗಮಿಸಿದ ಬಳಿಕ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಜೊತೆ ಮಾತುಕತೆ ನಡೆಸಿದರು ಎಂದು ದಕ್ಷಿಣ ಕೊರಿಯದ ಸುದ್ದಿ ಸಂಸ್ಥೆ ಯೊನ್‌ಹಾಪ್ ವರದಿ ಮಾಡಿದೆ. ಮುಚ್ಚಿದ ಬಾಗಿಲ ಮಾತುಕತೆಯ ಬಳಿಕ, ಕಿಮ್‌ಗಾಗಿ ಚೀನಾ ಅಧ್ಯಕ್ಷರು ಭೋಜನಕೂಟ ಏರ್ಪಡಿಸಿದರು. ಅವರ ಮಾತುಕತೆಗಳ ವಿವರಗಳನ್ನು ಚೀನಾದ ಅಧಿಕೃತ ಮಾಧ್ಯಮ ಬಹಿರಂಗಪಡಿಸಿಲ್ಲ.

ಇದು ಒಂದು ವರ್ಷದಲ್ಲಿ ಕಿಮ್ ಚೀನಾಕ್ಕೆ ನೀಡಿದ ನಾಲ್ಕನೇ ಭೇಟಿಯಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)