varthabharthi

ನಿಮ್ಮ ಅಂಕಣ

ಸೌರವಿದ್ಯುತ್‌ಗೆ ಪ್ರೋತ್ಸಾಹ ಸಿಗಲಿ

ವಾರ್ತಾ ಭಾರತಿ : 11 Jan, 2019
-ಶಂಕರಗೌಡ ಬಿರಾದಾರ, ದೇವರ ಹಿಪ್ಪರಗಿ

ಮಾನ್ಯರೇ,

ರಾಯಚೂರು ಉಷ್ಣವಿದ್ಯುತ್ ಸ್ಥಾವರದಲ್ಲಿ ಕಲ್ಲಿದ್ದಲು ಪೂರೈಕೆಯಲ್ಲಿನ ಕೊರತೆಯಿಂದಾಗಿ ಆಗಾಗ ವಿದ್ಯುತ್ ಉತ್ಪಾದನೆ ಕುಂಠಿತವಾಗುತ್ತಿದೆ. ಅದರ ಪರಿಣಾಮವಾಗಿ ರಾಜ್ಯದಲ್ಲಿ ವಿದ್ಯುತ್ ಕೊರತೆ ಉಂಟಾಗುತ್ತಿದೆ. ಈ ಕೊರತೆಯೇ ಈಗ ನಮಗೆ ಪರ್ಯಾಯ ಇಂಧನ ಮೂಲಗಳ ಬಳಕೆಗೆ ಒತ್ತು ನೀಡಬೇಕಾದ ಅಗತ್ಯವನ್ನು ತಿಳಿಸುತ್ತಿದೆ.

ಎಲ್ಲ ಜಿಲ್ಲೆಗಳಲ್ಲಿ ಸರ್ವಋತುಗಳಲ್ಲಿ ಸೂರ್ಯನ ಶಾಖ ಹೇರಳ ಪ್ರಮಾಣದಲ್ಲಿ ದೊರೆಯುತ್ತಿದೆ. ರಾಜ್ಯ ಸರಕಾರದ ಅಧೀನದಲ್ಲಿರುವ ಎಲ್ಲ ನೀರಾವರಿ ಕಾಲುವೆಗಳು, ಗೋಮಾಳಗಳು ಹಾಗೂ ಗುಡ್ಡಗಳ ಮೇಲೆ ಸೌರವಿದ್ಯುತ್ ಫಲಕಗಳನ್ನು ಅಳವಡಿಸಿ ಕಡಿಮೆ ದರದಲ್ಲಿ ಸೌರವಿದ್ಯುತ್ ಉತ್ಪಾದಿಸಬಹುದಾಗಿದೆ. ಜಲಾಶಯ ವ್ಯಾಪ್ತಿಯ ಕಾಲುವೆ ಮೇಲೆ ರಾಜ್ಯ ಸರಕಾರವು ಸೌರವಿದ್ಯುತ್ ಫಲಕ ಅಳವಡಿಸಿ ವಿದ್ಯುತ್ ಉತ್ಪಾದಿಸುವಲ್ಲಿ ಯಶಸ್ವಿಯಾಗಿದೆ. ಇದು ಇಷ್ಟಕ್ಕೇ ಸೀಮಿತವಾಗಬಾರದು. ಎಲ್ಲ ಕಡೆ ವಿಸ್ತರಿಸಬೇಕು. ಸೌರಶಕ್ತಿಯ ಗರಿಷ್ಠ ಬಳಕೆಗೆ ಹೆಚ್ಚಿನ ಆಸ್ಥೆ ವಹಿಸಬೇಕು. ಈ ವಿಷಯದ ಬಗ್ಗೆ ಜನಸಾಮಾನ್ಯರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಮನೆ, ಕಟ್ಟಡಗಳ ಮೇಲೆ ಸೌರವಿದ್ಯುತ್ ಫಲಕ ಅಳವಡಿಸಿಕೊಳ್ಳುವಂತೆ ಅವರನ್ನೂ ಹುರಿದುಂಬಿಸಬೇಕು. ಇಂತಹ ಪ್ರಯತ್ನಗಳನ್ನು ಮಾಡಿದರೆ ಮಾತ್ರ ರಾಜ್ಯ ವಿದ್ಯುತ್ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)