varthabharthi

ಕರಾವಳಿ

ಮಾರಿಪಳ್ಳ: ಗ್ಯಾಸ್ ಏಜೆನ್ಸಿ ಅಂಗಡಿಯಿಂದ ಲಕ್ಷಾಂತರ ರೂ. ದರೋಡೆ

ವಾರ್ತಾ ಭಾರತಿ : 11 Jan, 2019

ಬಂಟ್ವಾಳ, ಜ.11: ಮಾರಿಪಳ್ಳ ಗ್ಯಾಸ್ ಏಜೆನ್ಸಿಯ ಅಂಗಡಿಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ದೋಚಿದ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.

ಇಲ್ಲಿನ ಕಡೆಗೋಳಿ ಸಮೀಪದ ಮಾರಿಪಳ್ಳದಲ್ಲಿ ಪುಷ್ಪರಾಜ ಚೌಟ ಎಂಬವರ ಮಾಲಕತ್ವದಲ್ಲಿ ಕಾರ್ಯಾಚರಿಸುತ್ತಿರುವ ಚೌಟ ಇಂಡೆನ್ ಗ್ಯಾಸ್ ಏಜೆನ್ಸಿ ಅಂಗಡಿಯಿಂದ ನಗದು ಕಳವು ಮಾಡಲಾಗಿದೆ. ಅಂಗಡಿಯ ಕ್ಯಾಸ್ ಕೌಂಟರ್‌ನಲ್ಲಿದ್ದ ಸುಮಾರು 2 ಲಕ್ಷ ರೂ.ಗೂ ಅಧಿಕ ನಗದನ್ನು ಕಳವು ಮಾಡಲಾಗಿದೆ ಎಂದು ಮಾಲಕ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.

ಶ್ವಾನದಳ, ಬೆರಳಚ್ಚು ತಜ್ಞರು, ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್, ಬಂಟ್ವಾಳ ಎಸ್ಸೈ ಪ್ರಸನ್ನ, ಸಿಬ್ಬಂದಿಯಾದ ಸುರೇಶ್, ಜನಾರ್ದನ, ವರ್ಗೀಸ್ ಮತ್ತಿತರರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುರಿದಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)