varthabharthi


ಈ ದಿನ

ಅಮೆರಿಕದ ಅಧ್ಯಕ್ಷರಾಗಿ ಬರಾಕ್ ಒಬಾಮಾ

ವಾರ್ತಾ ಭಾರತಿ : 20 Jan, 2019

1921: ಆಟೊಮನ್ ಸಾಮ್ರಾಜ್ಯದ ಅವಶೇಷಗಳ ಮೇಲೆ ಟರ್ಕಿ ದೇಶದ ಗಣರಾಜ್ಯ ಘೋಷಣೆಯಾಯಿತು.

1945: ಹಂಗೇರಿಯನ್ ತಾತ್ಕಾಲಿಕ ಸರಕಾರವು ರಶ್ಯಾ, ಅಮೆರಿಕ, ಬ್ರಿಟನ್‌ಗಳೊಂದಿಗೆ ಕದನವಿರಾಮ ಒಪ್ಪಂದ ಮಾಡಿಕೊಂಡಿತು. ಅಲ್ಲದೆ ಜರ್ಮನಿ ವಿರುದ್ಧ ಯುದ್ಧಕ್ಕೆ ಕೈ ಜೋಡಿಸಿತು.

1972: ತೈಲ ರಫ್ತು ಮಾಡುವ ಆರು ರಾಷ್ಟ್ರಗಳು ಪಾಶ್ಚಿಮಾತ್ಯ ದೇಶಗಳ ತೈಲ ಕಂಪೆನಿಗಳ ಜೊತೆ ಸಭೆ ನಡೆಸಿದವು. ಈ ಸಂದರ್ಭದಲ್ಲಿ ಕಚ್ಚಾತೈಲ ದರವನ್ನು ಏರಿಸುವ ಒಪ್ಪಂದ ಏರ್ಪಟ್ಟಿತು.

1982: ಹೊಂಡುರಾಸ್ ದೇಶದ ಸಂವಿಧಾನ ಜಾರಿಗೆ ಬಂದಿತು.

1990: ಅಮೆರಿಕದ 64ನೇ ಮಾನವಸಹಿತ ಬಾಹ್ಯಾಕಾಶ ನೌಕೆ ಎಸ್‌ಟಿಎಸ್ 32 (ಕೊಲಂಬಿಯಾ 10) ಬಾಹ್ಯಾಕಾಶದಿಂದ ಮರಳಿತು.

1993: ಖ್ಯಾತ ಕವಯಿತ್ರಿ ಮಾಯಾ ಏಂಜೆಲೊ ಅಮೆರಿಕದ ಅಧ್ಯಕ್ಷ ಬಿಲ್ ಕ್ಲಿಂಟನ್ ಪ್ರಮಾಣವಚನ ಸಮಾರಂಭದಲ್ಲಿ ಕವನ ವಾಚನ ಮಾಡುವ ಮೂಲಕ, ಅಮೆರಿಕದ ಅಧ್ಯಕ್ಷರೊಬ್ಬರ ಪ್ರಮಾಣವಚನ ಸಮಾರಂಭದಲ್ಲಿ ಈ ಸಾಧನೆ ಮಾಡಿದ ಪ್ರಥಮ ಆಫ್ರಿಕನ್ ಅಮೆರಿಕನ್ ಹಾಗೂ ಮಹಿಳೆ ಎಂಬ ದಾಖಲೆಗೆ ಪಾತ್ರರಾದರು. ಕವನದ ಹೆಸರು ‘ಆನ್ ದ ಪಲ್ಸ್ ಆಫ್ ಮಾರ್ನಿಂಗ್’.

2009: ಅಮೆರಿಕದ 44ನೇ ಅಧ್ಯಕ್ಷರಾಗಿ ಬರಾಕ್ ಒಬಾಮಾ ಅಧಿಕಾರ ಸ್ವೀಕಾರ. ಅಮೆರಿಕದ ಅಧ್ಯಕ್ಷರಾದ ಪ್ರಥಮ ಆಫ್ರಿಕನ್ -ಅಮೆರಿಕನ್ ಅಧ್ಯಕ್ಷ ಎಂಬ ಖ್ಯಾತಿ ಅವರದು.

2014: ದಕ್ಷಿಣ ಕೊರಿಯದ ಸುಮಾರು 2 ಕೋಟಿ ಜನರ ಕ್ರೆಡಿಟ್ ಕಾರ್ಡ್ ಗಳು ಹ್ಯಾಕ್ ಆದ ವರದಿಯಾಗಿದೆ.

1927: ಭಾರತದ ಪ್ರಭಾವಿ ಉರ್ದು ಕಾದಂಬರಿಗಾರ್ತಿ, ಜ್ನಾನಪೀಠ ಪ್ರಶಸ್ತಿ ಪುರಸ್ಕೃತ ಪತ್ರಕರ್ತೆ ಖುರ್ರತುಲೈನ್ ಹೈದರ್ ಜನ್ಮದಿನ.

1949: ಭಾರತದ ಸ್ವಾತಂತ್ರ ಹೋರಾಟಗಾರ, ಖ್ಯಾತ ವಕೀಲ ತೇಜ್ ಬಹಾದ್ದೂರ್ ಸಫ್ರು ನಿಧನ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)