ಸೂರಲ್ಪಾಡಿ ಫ್ರೆಂಡ್ಸ್ ಅಸೋಸಿಯೇಶನ್ನ ಮಹಾಸಭೆ
ಸೌದಿ ಅರಬಿಯ, ಜ.22: ಸೂರಲ್ಪಾಡಿ ಫ್ರೆಂಡ್ಸ್ ಅಸೋಸಿಯೇಶನ್, ಸೌದಿ ಅರಬಿಯಾ ಇದರ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಅಲ್ ಜುಬೈಲ್ನಲ್ಲಿ ಜರುಗಿತು.
ಈ ಸಂದರ್ಭ ಅಸೋಸಿಯೇಶನ್ನ ನೂತನ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಜಾವೇದ್ ಅಬೂಬಕರ್, ಉಪಾಧ್ಯಕ್ಷರಾಗಿ ಸಮೀರ್ ಅಬ್ಬಾಸ್, ಕಾರ್ಯದರ್ಶಿಯಾಗಿ ಜುನೈದ್ ಫೈಝ್, ಜತೆ ಕಾರ್ಯದರ್ಶಿಯಾಗಿ ಮುಹಮ್ಮದ್ ಇಮ್ರಾನ್, ಖಜಾಂಚಿಯಾಗಿ ಮುಹಮ್ಮದ್ ಫಯಾಝ್, ಲೆಕ್ಕ ಪರಿಶೋಧಕರಾಗಿ ಅಹ್ಮದ್ ಶರೀಫ್ ಮರವೂರು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಹಸನ್ ತೌಶೀದ್, ಖಾದರ್ ಹಾಶಿಮ್, ಮುಹಮ್ಮದ್ ಫರ್ವೇಝ್, ಹಸನ್ ಅಶ್ಫಾಕ್, ಮುಹಮ್ಮದ್ ಅಜ್ಫಾನ್, ಮುಬಾರಕ್, ತೌಸೀಫ್, ಬಿ.ಕೆ.ಅಝೀಝ್ ಆಯ್ಕೆಯಾದರು.
ಸಲಹೆಗಾರರಾಗಿ ಸೌದ್, ಶರೀಫ್ ಸಾದ್, ಫಝಲ್, ಇಲ್ಯಾಸ್, ಅನ್ವರ್ ಸಾದಾತ್, ಫಯಾಝ್ ಆಲಂ ಮತ್ತು ರಹ್ಮಾನ್ ನಿಯುಕ್ತಿಗೊಂಡರು.
Next Story