varthabharthi


ಈ ದಿನ

ವಿದ್ಯುತ್ ಬಲ್ಬ್ ಕಂಡುಹಿಡಿದ ಎಡಿಸನ್‌ಗೆ ಹಕ್ಕುಸ್ವಾಮ್ಯ

ವಾರ್ತಾ ಭಾರತಿ : 27 Jan, 2019

1921: ದ ಇಂಪೀರಿಯಲ್ ಬ್ಯಾಂಕ್ ಆಫ್ ಇಂಡಿಯಾ ಅಸ್ತಿತ್ವಕ್ಕೆ ಬಂದಿತು. ಭಾರತ ಸ್ವಾತಂತ್ರ ಪಡೆದ ನಂತರ ಈ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೆಸರಿನಲ್ಲಿ ಬದಲಾಯಿತು. ದೇಶದ ಪ್ರಮುಖ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಗ್ರಸ್ಥಾನದಲ್ಲಿದೆ.

 1880: ಖ್ಯಾತ ವಿಜ್ಞಾನಿ ಥಾಮಸ್ ಆಲ್ವಾ ಎಡಿಸನ್ ವಿದ್ಯುತ್ ಬಲ್ಬ್‌ಗೆ ಹಕ್ಕುಸ್ವಾಮ್ಯ ಪಡೆದರು.

 1891: ಪೆನ್ಸಿಲ್ವೇನಿಯಾದ ವೌಂಟ್ ಪ್ಲೀಸಂಟ್ ಎಂಬಲ್ಲಿ ಗಣಿ ಪ್ರದೇಶದಲ್ಲಿ ಸಂಭವಿಸಿದ ಸ್ಫೋಟವೊಂದರಲ್ಲಿ 109 ಜನ ಸಾವಿಗೀಡಾದರು.

 1926: ಕ್ವಾಂಟಂ ಮೆಕ್ಯಾನಿಕ್ಸ್‌ನಲ್ಲಿ ಸ್ಕ್ರಾಡಿಂಜರ್ ಸಮೀಕರಣ ಎಂದು ಹೆಸರಾದ ತರಂಗ ಯಂತ್ರಶಾಸ್ತ್ರದ ಸಿದ್ಧಾಂತ (ಥಿಯರಿ ಆಫ್ ವೇವ್ ಮೆಕ್ಯಾನಿಕ್ಸ್)ವನ್ನು ಆಸ್ಟ್ರಿಯದ ಭೌತಶಾಸ್ತ್ರಜ್ಞ ಇರ್ವಿನ್ ಸ್ಕ್ರಾಡಿಂಜರ್ ಪ್ರಕಟಿಸಿ, ಮಂಡಿಸಿದರು.

 1967: ಅಮೆರಿಕದ ಅಪೊಲೊ 1 ಮಾದರಿ ಬಾಹ್ಯಾಕಾಶ ನೌಕೆಯ ಪೂರ್ವಾಭ್ಯಾಸ ಉಡ್ಡಯನದ ಸಂದರ್ಭದಲ್ಲಿ ನೌಕೆಯಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ಗ್ರಿಸಮ್, ವೈಟ್, ಚಾಫ್ಫೀ ಎಂಬ ಮೂವರು ಗಗನಯಾತ್ರಿಗಳು ಸಾವನ್ನಪ್ಪಿದರು.

 1969: ಇರಾಕ್‌ನ ಬಾಗ್ದಾದ್‌ನಲ್ಲಿ 14 ಜನ ಗೂಢಚಾರರನ್ನು ಗಲ್ಲಿಗೇರಿಸಲಾಯಿತು.

 1983: ವಿಶ್ವದ ಅತ್ಯಂತ ಉದ್ದದ ಅಂತರ್ಜಲೀಯ ಸುರಂಗಮಾರ್ಗ ಜಪಾನ್‌ನ ಹೊನ್ಷುನಿಂದ ಹೊಕ್ಕಾಯಿಡ್‌ವರೆಗಿನ ಮಾರ್ಗದಲ್ಲಿ ಚಾಲನೆಗೊಂಡಿತು.

 2018: ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿ ಆ್ಯಂಬುಲೆನ್ಸ್‌ನಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ 100ಕ್ಕಿಂತ ಹೆಚ್ಚು ಜನರು ಸಾವನ್ನಪ್ಪಿದ ವರದಿಯಾಗಿದೆ.

 1969: ನಟ ಬಾಬ್ಬಿ ಡಿಯೋಲ್ ಜನ್ಮದಿನ.

 2009: ಭಾರತದ 8ನೇ ರಾಷ್ಟ್ರಪತಿ ಆರ್. ವೆಂಕಟರಾಮನ್ ನಿಧನ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)