varthabharthi

ನಿಮ್ಮ ಅಂಕಣ

ಮದುವೆ ವಯಸ್ಸು ಇಳಿಸಿ

ವಾರ್ತಾ ಭಾರತಿ : 3 Feb, 2019
ಶಂಕರಗೌಡ ಶರಣಗೌಡ ಬಿರಾದಾರ ಮುಳಸಾವಳಗಿ

ಮಾನ್ಯರೇ,

ಮದುವೆಗೆ ಕನಿಷ್ಠ ವಯೋಮಿತಿಯ ವಿಚಾರದಲ್ಲಿ ತಾರತಮ್ಯ ಇರಬಾರದು ಎಂಬ ಕಾರಣಕ್ಕೆ, ಪುರುಷರ ವಿವಾಹ ವಯೋಮಿತಿಯನ್ನು ಈಗಿರುವ 21 ವರ್ಷದಿಂದ 18 ವರ್ಷಕ್ಕೆ ಇಳಿಸುವಂತೆ ರಾಷ್ಟ್ರೀಯ ಕಾನೂನು ಆಯೋಗ ಶಿಫಾರಸು ಮಾಡಿದ್ದು ಸ್ವಾಗತಾರ್ಹ.
ಸಮಾನತೆ ಎಂಬುದು ಕಾನೂನಿನಿಂದ ಅಳೆಯುವ ವಿಷಯವಲ್ಲ. ಪ್ರಾಕೃತಿಕ, ಮಾನಸಿಕ, ದೈಹಿಕ ಹಾಗೂ ಭೌತಿಕವಾಗಿ ಗಂಡು-ಹೆಣ್ಣುಗಳಲ್ಲಿರುವ ಭೇದವನ್ನು ಸೃಷ್ಟಿಸಿದ ಭಗವಂತನ ನಿರ್ಧಾರವನ್ನು ಜಗತ್ತೇ ಒಪ್ಪತಕ್ಕದ್ದಲ್ಲವೇ? ಪ್ರಕೃತಿದತ್ತವಾದ ಕಾಮನೆಗಳಿಗೆ ವಯಸ್ಸಿನ ಕಡಿವಾಣ ಹಾಕುವುದು ಸಮಂಜಸವೇ? ಈ ಹಿನ್ನೆಲೆಯಲ್ಲಿ ಸ್ತ್ರೀಯರ ವಿವಾಹ ವಯೋಮಿತಿಯನ್ನು ಕೂಡಾ 15 ವರ್ಷಕ್ಕೆ ಇಳಿಸುವುದು ಸೂಕ್ತ. ಇದರಿಂದ ದೇಶದಲ್ಲಿ ಈಗ ದಿನನಿತ್ಯ ನಡೆಯುತ್ತಿರುವ ಅತ್ಯಾಚಾರದಂಥ ಪ್ರಕರಣಗಳೂ ಕಡಿಮೆಯಾಗಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)