varthabharthi

ಸಿನಿಮಾ

ತನ್ನ ಪುತ್ರಿ ನಿಕಾಬ್ ಧರಿಸಿದ್ದಕ್ಕೆ ಬಂದ ಟೀಕೆಗೆ ಎ.ಆರ್. ರಹಮಾನ್ ಪ್ರತಿಕ್ರಿಯೆ ಏನು ಗೊತ್ತೇ?

ವಾರ್ತಾ ಭಾರತಿ : 7 Feb, 2019

ಹೊಸದಿಲ್ಲಿ, ಫೆ.7: ‘ಸ್ಲಮ್ ಡಾಗ್ ಮಿಲಿಯನೇರ್’ ಚಿತ್ರದ 10ನೆ ವರ್ಷಾಚರಣೆ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರಸಿದ್ಧ ಸಂಗೀತ ನಿರ್ದೇಶಕ ಎ.ಆರ್. ರಹಮಾನ್ ರ ಪುತ್ರಿ  ಖತೀಜಾ ನಿಕಾಬ್ ಧರಿಸಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಖತೀಜಾ ವೇದಿಕೆಯಲ್ಲಿ ರಹಮಾನ್ ರಿಗೆ ಕೆಲ ಪ್ರಶ್ನೆಗಳನ್ನು ಕೇಳಿದ್ದರು.

ಆದರೆ ಟೀಕಾಕಾರರು ನಿಕಾಬ್ ವಿಷಯವನ್ನು ಮುಂದಿಟ್ಟು ಎ.ಆರ್.ರಹಮಾನ್ ರನ್ನು ಟೀಕಿಸತೊಡಗಿದರು. ರಹಮಾನ್ ಪುತ್ರಿ ಈ ರೀತಿ ವಸ್ತ್ರ ಧರಿಸುತ್ತಾರೆಂದು ನಾವು ನಿರೀಕ್ಷಿಸಿಯೂ ಇಲ್ಲ ಎಂದು ಕೆಲವರು ಹೇಳಿದರೆ, ಬಲವಂತವಾಗಿ ಈ ರೀತಿ ನಿಕಾಬ್ ಧರಿಸುವಂತೆ ಮಾಡಲಾಗುತ್ತದೆ ಎಂದು ಕೆಲವರು ಆರೋಪಿಸಿದರು.

ಇದೀಗ ಈ ಟೀಕೆಗಳಿಗೆ ರಹಮಾನ್ ಒಂದು ಫೋಟೊ ಮೂಲಕ ಉತ್ತರಿಸಿದ್ದಾರೆ. ತಮ್ಮ ಟ್ವಿಟರ್ ನಲ್ಲಿ ರಹಮಾನ್ ತನ್ನ ಪತ್ನಿ ಹಾಗು ಇಬ್ಬರು ಪುತ್ರಿಯರು ನೀತಾ ಅಂಬಾನಿ ಜೊತೆಗಿರುವ ಫೊಟೊವನ್ನು ಟ್ವೀಟ್ ಮಾಡಿದ್ದಾರೆ. ಈ ಫೋಟೊದಲ್ಲಿ ಪತ್ನಿ ಹಾಗು ರಹಮಾನ್ ರ ಮತ್ತೋರ್ವ ಪುತ್ರಿ ಸಾಮಾನ್ಯ ವಸ್ತ್ರ ಧರಿಸಿದ್ದು, ನಿಕಾಬ್ ಧರಿಸಿಲ್ಲ ಮತ್ತು ಖತೀಜಾ ಈ ಫೋಟೊದಲ್ಲೂ ನಿಕಾಬ್ ಧರಿಸಿದ್ದಾರೆ.

ಈ ಫೊಟೊ ಟ್ವೀಟ್ ಮಾಡಿರುವ ರಹಮಾನ್, “ನನ್ನ ಕುಟುಂಬದ ಅತ್ಯಮೂಲ್ಯ ಮಹಿಳೆಯರು ಖತೀಜಾ, ರಹೀಮಾ ಮತ್ತು ಸಾಯ್ರಾ ನೀತಾ ಅಂಬಾನಿಯವರ ಜೊತೆಗೆ, ಆಯ್ಕೆಯ ಸ್ವಾತಂತ್ಯ್ಯ” ಎಂದವರು ಪೋಸ್ಟ್ ಮಾಡಿದ್ದಾರ.ೆ

“ಸಂಪೂರ್ಣ ಒಪ್ಪಿಗೆಯಿಂದ ಮತ್ತು ಗೌರವಪೂರ್ವಕವಾಗಿ ನಾನು ಪರ್ದಾ ಧರಿಸಿದ್ದೇನೆ. ನಾನು ನನ್ನ ಜೀವನದ ಆಯ್ಕೆಗಳನ್ನು ಮಾಡಿಕೊಳ್ಳುವ ಪ್ರಬುದ್ಧ ವ್ಯಕ್ತಿ” ಎಂದು ಖತೀಜಾ ಕೂಡ ಪ್ರತಿಕ್ರಿಯಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)