varthabharthi

ಗಲ್ಫ್ ಸುದ್ದಿ

ಇನ್ನು ಮುಂದೆ ಇಲ್ಲಿ ಅರೆಬಿಕ್, ಇಂಗ್ಲಿಷ್ ನಂತರ ಹಿಂದಿ 3ನೆ ಅಧಿಕೃತ ಕೋರ್ಟ್ ಭಾಷೆ

ವಾರ್ತಾ ಭಾರತಿ : 10 Feb, 2019

ದುಬೈ, ಫೆ.10: ದೇಶದ ನ್ಯಾಯಾಲಯಗಳಲ್ಲಿ ಅರೇಬಿಕ್ ಹಾಗೂ ಇಂಗ್ಲಿಷ್ ಜತೆ ಹಿಂದಿಯನ್ನು ಮೂರನೇ ಅಧಿಕೃತ ಭಾಷೆಯಾಗಿ ಮಾನ್ಯ ಮಾಡುವ ಐತಿಹಾಸಿಕ ನಿರ್ಧಾರವನ್ನು ಅಬುಧಾಬಿ ಕೈಗೊಂಡಿದೆ. ಜನಸಾಮಾನ್ಯರಿಗೆ ಕೂಡಾ ಸುಲಭವಾಗುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ದೇಶದ ಕಾರ್ಮಿಕ ಕಾನೂನುಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದ ಮುಂದೆ ಸಲ್ಲಿಸುವ ಹೇಳಿಕೆಗಳನ್ನು ಹಾಗೂ ಕ್ಲೇಮ್ ‍ಗಳನ್ನು ಅರೇಬಿಕ್ ಮತ್ತು ಇಂಗ್ಲಿಷ್ ಭಾಷೆಯ ಜತೆಗೆ ಹಿಂದಿಯಲ್ಲಿ ಕೂಡಾ ಸಲ್ಲಿಸಲು ಅವಕಾಶ ನೀಡಲಾಗುವುದು ಎಂದು ದುಬೈ ನ್ಯಾಯಾಂಗ ಇಲಾಖೆ ಪ್ರಕಟಿಸಿದೆ.

ಇದು ಹಿಂದಿ ಭಾಷಿಗರಿಗೆ ಕಾನೂನು ವಿಧಿವಿಧಾನಗಳನ್ನು, ಹಕ್ಕು ಮತ್ತು ಕರ್ತವ್ಯಗಳನ್ನು ಸುಲಭವಾಗಿ ಅರಿಯುವಲ್ಲಿ, ನೆರವಾಗಲಿದೆ. ಇನ್ನು ಭಾಷೆ ಇವರಿಗೆ ತೊಡಕಾಗುವುದಿಲ್ಲ. ಇದರ ಜತೆಗೆ ಅಂತೆಯೇ ನೋಂದಣಿ ವಿಧಿವಿಧಾನಗಳ ಏಕೀಕೃತ ನಮೂನೆಗಳು ಕೂಡಾ ಎಡಿಜೆಡಿ ವೆಬ್‍ಸೈಟ್‍ನಲ್ಲಿ ಲಭ್ಯ ಎಂದು ಹೇಳಿದೆ.

ಅಧಿಕೃತ ಅಂಕಿ ಅಂಶಗಳ ಪ್ರಕಾರ ಯುಎಇ ಜನಸಂಖ್ಯೆ 50 ಲಕ್ಷ ಆಗಿದ್ದು, ಈ ಪೈಕಿ ಮೂರನೇ ಎರಡರಷ್ಟು ಮಂದಿ ವಿದೇಶಗಳಿಂದ ವಲಸೆ ಬಂದವರು. ಯುಎಇನಲ್ಲಿ ಭಾರತೀಯ ಸಮುದಾಯದ 26 ಲಕ್ಷ ಮಂದಿ ಇದ್ದು, ಇದು ದೇಶದ ಒಟ್ಟು ಜನಸಂಖ್ಯೆಯ ಶೇಕಡ 30 ಆಗಿದ್ದು, ಯಾವುದೇ ವಿದೇಶಿ ಸಮುದಾಯಗಳ ಪೈಕಿ ಅತಿದೊಡ್ಡ ಸಮುದಾಯ ಎನಿಸಿಕೊಂಡಿದೆ.

ಇದು ನ್ಯಾಯಾಂಗ ಪ್ರಕ್ರಿಯೆಯ ವಿಧಿವಿಧಾನಗಳನ್ನು ಹೆಚ್ಚು ಪಾರದರ್ಶಕಗೊಳಿಸುವಲ್ಲೂ ನೆರವಾಗಲಿದೆ ಎಂದು ಎಡಿಜೆಡಿ ಅಧೀನ ಕಾರ್ಯದರ್ಶಿ ಯೂಸಫ್ ಸಯೀದ್ ಅಲ್ ಅರ್ಬಿ ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)