ರಾಷ್ಟ್ರೀಯ
ಪತ್ನಿಯನ್ನು ತ್ಯಜಿಸಿದ ನಿಮಗೆ ಕುಟುಂಬ ವ್ಯವಸ್ಥೆಯ ಬಗ್ಗೆ ಗೌರವ ಇದೆಯೇ: ಮೋದಿಗೆ ಚಂದ್ರಬಾಬು ನಾಯ್ಡು ಪ್ರಶ್ನೆ

ಅಮರಾವತಿ, ಫೆ.10: ಗುಂಟೂರುನಲ್ಲಿ ರವಿವಾರ ನಡೆದ ರ್ಯಾಲಿಯಲ್ಲಿ ತನ್ನನ್ನು ‘ಲೋಕೇಶ್ ತಂದೆ’ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ಈ ವಾಗ್ವಾದದಲ್ಲಿ ಮೋದಿ ಅವರ ಪತ್ನಿಯ ಹೆಸರನ್ನು ಎಳೆದು ತಂದಿದ್ದಾರೆ.
“ನೀವು ಪತ್ನಿಯನ್ನು ತ್ಯಜಿಸಿದ್ದೀರಿ. ಕುಟುಂಬ ವ್ಯವಸ್ಥೆ ಒಳಗಡೆ ನಿಮಗೆ ಏನಾದರೂ ಗೌರವ ಇದೆಯೇ?” ಎಂದು ಮೋದಿ ಅವರನ್ನು ನಾಯ್ಡು ಪ್ರಶ್ನಿಸಿದ್ದಾರೆ.
ಅವರು ಕುಟುಂಬವನ್ನು ಪ್ರೀತಿಸಲಿ ಹಾಗೂ ಅವರಿಗೆ ಗೌರವ ನೀಡಲಿ ಎಂದು ಟಿಡಿಪಿ ಅಧ್ಯಕ್ಷರೂ ಆದ ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಪ್ರಧಾನಿ ಅವರಿಗೆ ಕುಟುಂಬ ಅಥವಾ ಪುತ್ರ ಇಲ್ಲ. ‘‘ನೀವು ನನ್ನ ಪುತ್ರನನ್ನು ಉಲ್ಲೇಖಿಸಿದರೆ, ನಾನು ನಿಮ್ಮ ಪತ್ನಿಯನ್ನು ಉಲ್ಲೇಖಿಸುತ್ತೇನೆ. ನರೇಂದ್ರ ಮೋದಿ ಅವರಿಗೆ ಪತ್ನಿ ಇದ್ದಾರೆ ಎಂಬುದು ನಿಮಗೆ ಗೊತ್ತಿದೆಯೇ?, ಅವರ ಹೆಸರು ಜಶೋದಾ ಬೆನ್’’ ಎಂದು ನಾಯ್ಡು ಅವರು ವಿಜಯವಾಡದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಹೇಳಿದ್ದಾರೆ.
‘‘ಅವರು 1000 ರೂಪಾಯಿ ನೋಟು ರದ್ದುಗೊಳಿಸಿದರು. 2000 ರೂಪಾಯಿ ನೋಟು ಚಲಾವಣೆಗೆ ತಂದರು. ಇದರಿಂದ ಭ್ರಷ್ಟಾಚಾರ ಕೊನೆಗೊಳ್ಳುವುದು ಹೇಗೆ’’ ಎಂದು ಅವರು ಪ್ರಶ್ನಿಸಿದ್ದಾರೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ