varthabharthi

ಅಂತಾರಾಷ್ಟ್ರೀಯ

48 ತಾಸುಗಳಲ್ಲಿ 190 ಭೂಕಂಪನಗಳು: ಆತಂಕದಲ್ಲಿ ಜನರು

ವಾರ್ತಾ ಭಾರತಿ : 10 Feb, 2019

ಮನಿಲಾ, ಫೆ.10: ಕಳೆದ ಎರಡು ದಿನಗಳಲ್ಲಿ ಫಿಲಿಪ್ಪೀನ್ಸ್‌ನ ನಗರವೊಂದರಲ್ಲಿ 190 ಲಘು ಭೂಕಂಪನಗಳು ಸಂಭವಿಸಿರುವುದಾಗಿ ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ.

  ಸುರಿಗಾವೊ ಡೆಲ್ ನೊರ್ಟೆ ಪ್ರಾಂತದ ಜನರಲ್ ಲುನಾ ಪಟ್ಟಣವು ಕಳೆದ 48 ತಾಸುಗಳಲ್ಲಿ ಸರಣಿ ಭೂಕಂಪನಗಳಿಗೆ ಸಾಕ್ಷಿಯಾದ ನಗರವಾಗಿದೆ. ರವಿವಾರ ಮುಂಜಾನೆ 6:21ರ ವೇಳೆಗೆ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಅದರ ತೀವ್ರತೆ 5.5ರಷ್ಟು ದಾಖಲಾಗಿತ್ತು ಎಂದು ಕ್ಸಿನುವಾ ಸುದ್ದಿಸಂಸ್ಥೆ ವರದಿ ಮಾಡಿದೆ.

 ಜನರಲ್ ಲುನಾದಲ್ಲಿ ರವಿವಾರ ಒಂದೇ ದಿನದಂದು 60ಕ್ಕೂ ಅಧಿಕ ಪಶ್ಚಾತ್ ಕಂಪನಗಳು ಸಂಭವಿಸಿರುವುದಾಗಿ, ಫಿಲಿಪ್ಪೀನ್ಸ್‌ನ ಜ್ವಾಲಾಮುಖಿ ಹಾಗೂ ಭೂಕಂಪನ ಅಧ್ಯಯನ ಸಂಸ್ಥೆಯು ತಿಳಿಸಿದೆ.

  ಶುಕ್ರವಾರ ಸಂಜೆ ಜನರಲ್ ಲುನಾ ಪಟ್ಟಣದಲ್ಲಿ 5.9 ರಿಕ್ಟರ್ ತೀವ್ರತೆಯ ಭೂಕಂಪವು ಸಂಭವಿಸಿತ್ತು. ನಂತರ ಶನಿವಾರದಂದು 130ಕ್ಕೂ ಅಧಿಕ ಪಶ್ಚಾತ್‌ಕಂಪನಗಳು ಉಂಟಾಗಿರುವುದಾಗಿ ಅದು ಹೇಳಿದೆ. ಆದರೆ ಈ ಭೂಕಂಪನಗಳಿಂದಾಗಿ ಯಾವುದೇ ಸಾವುನೋವು ಉಂಟಾಗಿರುವ ಬಗ್ಗೆ ವರದಿಗಳು ಬಂದಿಲ್ಲವೆಂದು ಅದು ತಿಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)