varthabharthi

ಅಂತಾರಾಷ್ಟ್ರೀಯ

ನ್ಯೂಝಿಲ್ಯಾಂಡ್: ಭೀಕರ ಕಾಡ್ಗಿಚ್ಚಿಗೆ ಸಾವಿರಾರು ಮಂದಿ ಪಲಾಯನ

ವಾರ್ತಾ ಭಾರತಿ : 11 Feb, 2019

ವೆಲ್ಲಿಂಗ್ಟನ್,ಫೆ.10: ನ್ಯೂಝಿಲ್ಯಾಂಡ್‌ನ ಸೌತ್‌ಐಲ್ಯಾಂಡ್‌ನಲ್ಲಿ ಆರು ದಿನಗಳ ಹಿಂದೆ ಕಾಣಿಸಿಕೊಂಡಿದ್ದ ಕಾಡ್ಗಿಚ್ಚು ಭೀಕರ ರೂಪವನ್ನು ಪಡೆದುಕೊಂಡಿದ್ದು, ಸಾವಿರಾರು ಮಂದಿ ಮನೆಮಾರು ತೊರೆದು ಪಲಾಯನಗೈದಿದ್ದಾರೆ.

 ಸೌತ್‌ಐಲ್ಯಾಂಡ್‌ನ ಪಟ್ಟಣವಾದ ನೆಲ್ಸನ್ ಸಮೀಪ ಕಾಣಿಸಿಕೊಂಡ ಕಾಡ್ಗಿಚ್ಚು, ಈಗ ಇನ್ನೊದು ಪಟ್ಟಣವಾದ ವೇಕ್‌ಫೀಲ್ಡ್ ವರೆಗೂ ಹರಡಿರುವುದಾಗಿ ಬಿಬಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ. ಕಾಡ್ಗಿಚ್ಚಿನ ಹಾವಳಿಯ ಹಿನ್ನೆಲೆಯಲ್ಲಿ ಟಾಸ್ಮಾನ್ ಜಿಲ್ಲೆಯಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ಪ್ರಬಲವಾದ ಬಿರುಗಾಳಿಯೂ ಬೀಸುತ್ತಿರುವುದರಿಉಂದ ರವಿವಾರ ಕಾಡ್ಗಿಚ್ಚು ಇನ್ನಷ್ಟು ಉಲ್ಬಣಿಸುವ ಸಾಧ್ಯತೆಯಿದೆಂದು ಹವಾಮಾನ ಇಲಾಖೆಯ ಅಧಿಕಾರಿಗಳು ಎಚ್ಚರಿಕೆಯನ್ನು ನೀಡಿದ್ದಾರೆ.

1955ರ ಬಳಿಕ ನ್ಯೂಝಿಲ್ಯಾಂಡ್ ಕಂಡ ಅತ್ಯಂತ ಭೀಕರ ಕಾಡ್ಗಿಚ್ಚು ಇದಾಗಿದೆ.

23 ಹೆಲಿಕಾಪ್ಟರ್‌ಗಳುಹಾಗೂ ಎರಡುವಿಮಾನಗಳು ಕಾಡುಗಳಿಗೆ ಹರಡಿದ ಬೆಂಕಿಯನ್ನು ನಂದಿಸುವ ಕಾರ್ಯಾಚರಣೆಯಲ್ಲಿ ನಿರತವಾಗಿವೆ. ಆದರೆ ಮಂಗಳವಾರ ಮಳೆಯಾಗುವ ಸಾಧ್ಯತೆಯಿದ್ದು, ಆನಂತರ ಕಾಡ್ಗಿಚ್ಚು ಶಮನಗೊಳ್ಳಲಿದೆಯೆಂದು ಹವಾಮಾನ ಇಲಾಖೆಯ ಅಧಿಕಾರಿಗಳು ಭರವಸೆ ವ್ಯಕ್ತಪಡಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)