varthabharthi

ರಾಷ್ಟ್ರೀಯ

ಲಕ್ನೋದಲ್ಲಿ ಪ್ರಿಯಾಂಕಾ ಗಾಂಧಿ ರೋಡ್‌ ಶೋ

ವಾರ್ತಾ ಭಾರತಿ : 11 Feb, 2019

ಲಕ್ನೋ,ಫೆ.11: ಲಕ್ನೋದ ಜನಸಂದಣಿಯ ರಸ್ತೆಯಲ್ಲಿ ರೋಡ್ ಶೋ ಮಾಡುವ ಮೂಲಕ ಪ್ರಿಯಾಂಕಾ ಗಾಂಧಿ ವಾದ್ರಾ ಉತ್ತರಪ್ರದೇಶಕ್ಕೆ ಭರ್ಜರಿ ಪ್ರವೇಶ ಮಾಡಿದ್ದಾರೆ. ಎಲ್ಲ ರಸ್ತೆಗಳ ಇಕ್ಕೆಲಗಳಲ್ಲಿ ನೂತನ ಕಾಂಗ್ರೆಸ್ ಕಾರ್ಯದರ್ಶಿ ಪ್ರಿಯಾಂಕಾ, ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರ ಪೋಸ್ಟರ್‌ಗಳನ್ನು ಹಾಕಲಾಗಿದೆ. 47ರ ಹರೆಯದ ಪ್ರಿಯಾಂಕಾ ಗಾಂಧಿಗೆ ರೋಡ್ ಶೋ ಹೊಸತಲ್ಲ. ಗಾಂಧಿ ಕುಟುಂಬದ ಕ್ಷೇತ್ರಗಳಾದ ಅಮೇಠಿ ಹಾಗೂ ರಾಯ್ ಬರೇಲಿಯ ಹೊರಗೆ ಇದೇ ಮೊದಲ ಬಾರಿ ಇಂತಹ ರೋಡ್ ಶೋ ನಡೆಸುತ್ತಿದ್ದಾರೆ.

ಉತ್ತರಪ್ರದೇಶ ರಾಜಧಾನಿಗೆ ಪ್ರಿಯಾಂಕಾ ಆಗಮನವಾದ ತಕ್ಷಣ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಆತ್ಮೀಯವಾಗಿ ಸ್ವಾಗತಿಸಿದರು. ಮುಂಬರುವ ಮೇನಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಪ್ರಿಯಾಂಕಾ ಮೇಲೆ ಭಾರೀ ವಿಶ್ವಾಸ ಇರಿಸಲಾಗಿದೆ. ಸಂಸತ್ತಿನಲ್ಲಿ ಉತ್ತರಪ್ರದೇಶ ರಾಜ್ಯ ಗರಿಷ್ಠ ಸಂಖ್ಯೆಯ ಸದಸ್ಯರನ್ನು ಹೊಂದಿದೆ. ಇದು ದೇಶದಲ್ಲಿ ಅಧಿಕಾರ ಏರಲು ಅತ್ಯಂತ ಮುಖ್ಯ ರಾಜ್ಯವಾಗಿದೆ.

ನಾನು ನಾಳೆ ಲಕ್ನೋಗೆ ತೆರಳಿ ಕಾರ್ಯಕರ್ತರನ್ನು ತೆರಳುತ್ತನೇ. ಅಲ್ಲಿ ಹೊಸ ರೀತಿಯ ರಾಜಕೀಯ ಮಾಡುವ ವಿಶ್ವಾಸ ನನಗಿದೆ. ಅಂತಹ ರಾಜಕೀಯಕ್ಕೆ ನೀವೇ ಪಾಲುದಾರರು. ಈ ರೀತಿಯ ರಾಜಕೀಯದಲ್ಲಿ ಯುವಕರ, ನನ್ನ ಸಹೋದರಿಯರ ಹಾಗೂ ಕಡು ಬಡವರ ಧ್ವನಿ ಇರಲಿದೆ ಎಂದು ಪಕ್ಷದ ಶಕ್ತಿ ಆ್ಯಪ್ ಮೂಲಕ ರವಿವಾರ ಪ್ರಿಯಾಂಕಾ ವಿನಂತಿಸಿಕೊಂಡಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)