varthabharthi

ಕರಾವಳಿ

ಫೆ.13ರಂದು ಜಾಮಿಅ ಸಅದಿಯ್ಯ ಗೋಲ್ಡನ್ ಜುಬಿಲಿ ಘೋಷಣಾ ಸಮಾವೇಶ

ವಾರ್ತಾ ಭಾರತಿ : 11 Feb, 2019

ಮಂಗಳೂರು, ಫೆ.11: ಕಾಸರಗೋಡಿನ ದೇಳಿಯಲ್ಲಿರುವ ಧಾರ್ಮಿಕ, ಲೌಕಿಕ ಸಮನ್ವಯ ಶಿಕ್ಷಣ ಸಂಸ್ಥೆ ಜಾಮಿಅ ಸಅದಿಯ್ಯ ಅರಬಿಯ್ಯ ಇದರ 'ಸುವರ್ಣ ಮಹೋತ್ಸವ' ಸಂಭ್ರಮಾಚರಣೆ ಸಮಾರಂಭವು ಡಿಸೆಂಬರ್ ನಲ್ಲಿ ಜರುಗಲಿದೆ. ಇದರ ಘೋಷಣಾ ಸಮಾವೇಶವು ಫೆ.13ರಂದು ಬೆಳಗ್ಗೆ 10:30ಕ್ಕೆ ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ ಎಂದು ಘೋಷಣಾ ಸಮಾವೇಶ ಸಮಿತಿಯ ಜನರಲ್ ಕನ್ವೀನರ್ ಹಾಫಿಳ್ ಯಾಕೂಬ್ ಸಅದಿ ನಾವೂರು ತಿಳಿಸಿದ್ದಾರೆ.

ನಗರದ ಪ್ರೆಸ್ ಕ್ಲಬ್ ನಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾಮಿಅ ಸಅದಿಯ್ಯ ಅಧ್ಯಕ್ಷ ಸೈಯದ್ ಕೆ.ಎಸ್.ಆಟಕೋಯ ತಂಙಳ್ ಕುಂಬೋಳ್ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಕರ್ನಾಟಕ ಮುಸ್ಲಿಂ ಜಮಾಅತ್ ಅಧ್ಯಕ್ಷ ಮೌಲಾನ ಶಂಸುಲ್ ಹಖ್ ಅಲ್ ಕಾದಿರಿ ಬೆಂಗಳೂರು ಉದ್ಘಾಟಿಸುವರು. ಸಅದಿಯ್ಯ ಪ್ರ.ಕಾರ್ಯದರ್ಶಿ ಸೈಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ದುಆ ನೆರವೇರಿಸಲಿರುವರು.

ಸಮಸ್ತ ಮುಶಾವರ ಉಪಾಧ್ಯಕ್ಷ ತಾಜುಶ್ಶರೀಅ ಅಲಿಕುಂಞಿ ಉಸ್ತಾದ್ ಶಿರಿಯ, ಕರ್ನಾಟಕ  ಜಂಇಯ್ಯತುಲ್ ಉಲಮಾ ರಾಜ್ಯಾಧ್ಯಕ್ಷ ತಾಜುಲ್ ಫುಖಹಾಅ್ ಬೇಕಲ್ ಇಬ್ರಾಹೀಂ ಮುಸ್ಲಿಯಾರ್ ಆಶೀರ್ವಚನ ನೀಡುವರು.

ಸಅದಿಯ್ಯ ಮುಖ್ಯಸ್ಥರಾದ ಅಬ್ದುಲ್ಲಾ ಮುಸ್ಲಿಯಾರ್ ಮಾಣಿಕೋತ್, ಕೆ.ಪಿ.ಅಬೂಬಕರ್ ಮುಸ್ಲಿಯಾರ್ ಪಟ್ಟುವಂ, ಶರಫುಲ್ ಉಲಮಾ ಅಬ್ಬಾಸ್ ಮುಸ್ಲಿಯಾರ್ ಮಂಜನಾಡಿ, ಝೈನುಲ್ ಉಲಮಾ ಹಮೀದ್ ಮುಸ್ಲಿಯಾರ್ ಮಾಣಿ, ಸಅದಿಯಾ ಪ್ರೊಫೆಸರ್ ಕೆ.ಪಿ.ಹುಸೈನ್ ಸಅದಿ ಕೆ.ಸಿ.ರೋಡ್ ಪ್ರವಚನ ನೀಡಲಿದ್ದಾರೆ. 

ಇದೇ ಸಂದರ್ಭ ವಿದ್ಯಾಭ್ಯಾಸ, ಆರೋಗ್ಯ ಮತ್ತು ಜೀವ ಕಾರುಣ್ಯ ಕ್ಷೇತ್ರಗಳಲ್ಲಿ ನೀಡಿರುವ ಅಪಾರ ಸೇವೆಯನ್ನು ಗುರುತಿಸಿ ಯನೆಪೊಯ ವಿಶ್ವವಿದ್ಯಾನಿಲಯದ  ಕುಲಾಧಿಪತಿ ವೈ.ಅಬ್ದುಲ್ಲ ಕುಂಞಿ ಹಾಜಿಯವರನ್ನು ಗೌರವಿಸಲಾಗುವುದು ಎಂದವರು ತಿಳಿಸಿದರು. 

ಕಾರ್ಯಕ್ರಮದಲ್ಲಿ ಕೂಟಂಬಾರ ಅಬ್ದುರ್ರಹ್ಮಾನ್ ದಾರಿಮಿ, ಅಬ್ದುಲ್ಲತೀಫ್ ಸಅದಿ ಪಯಷಿ ಮುಖ್ಯ ಭಾಷಣಗೈಯ್ಯಲಿದ್ದಾರೆ. ಎಸ್.ವೈ.ಎಸ್ ಪ್ರ.ಕಾರ್ಯದರ್ಶಿ  ಡಾ.ಎಂ.ಎಸ್.ಎಂ.ಝೈನಿ ಕಾಮಿಲ್, ಮುಸ್ಲಿಂ ಜಮಾಅತ್ ಪ್ರ. ಕಾರ್ಯದರ್ಶಿ ಎನ್.ಕೆ.ಎಂ.ಶಾಫಿ ಸಅದಿ ಬೆಂಗಳೂರು ವಿವಿಧ ವಿಷಯಗಳಲ್ಲಿ ಮಾತನಾಡುವರು.

ಕೆ.ಸಿ.ಎಫ್. ಅಂತರ್ ರಾಷ್ಟ್ರೀಯ ಅಧ್ಯಕ್ಷ ಎಸ್.ಪಿ.ಹಂಝ ಸಖಾಫಿ ಬಂಟ್ವಾಳ, ಎಸ್.ವೈ.ಎಸ್. ರಾಜ್ಯಾಧ್ಯಕ್ಷ ಜಿ.ಎಂ.ಕಾಮಿಲ್ ಸಖಾಫಿ, ಎಸ್.ಎಂ.ಎ. ರಾಜ್ಯಾಧ್ಯಕ್ಷ ಸೈಯದ್ ಜಲಾಲುದ್ದೀನ್ ತಂಙಳ್ ಮಲ್ಜಅ್, ಎಸ್ಸೆಸ್ಸೆಫ್ ರಾಷ್ಟ್ರೀಯ ಪ್ರ.ಕಾರ್ಯದರ್ಶಿ ಕೆ.ಎಂ.ಅಬೂಬಕರ್ ಸಿದ್ದೀಖ್ ಮೋಂಟುಗೋಳಿ, ಎಸ್.ಜೆ.ಎಂ.ರಾಜ್ಯಾಧ್ಯಕ್ಷ ಆತೂರು ಸಅದ್ ಮುಸ್ಲಿಯಾರ್, ಎಸ್.ಎಂ.ಎ. ಪ್ರ.ಕಾರ್ಯದರ್ಶಿ ಅಬ್ದುರ್ರಹ್ಮಾನ್ ಮದನಿ ಜೆಪ್ಪು ಎಸ್.ಇ.ಡಿ.ಸಿ. ಅಧ್ಯಕ್ಷ, ಕೆ.ಕೆ.ಎಂ.ಕಾಮಿಲ್ ಸಖಾಫಿ ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಸೈಯದ್ ಸಿ.ಟಿ.ಎಂ.ಉಮರ್ ಅಸ್ಸಖಾಫ್ ತಂಙಳ್, ಸೈಯದ್ ಇಬ್ರಾಹೀಂ ಪೂಕುಂಞಿ ತಂಙಳ್ ಕಲ್ಲಕಟ್ಟ, ಸೈಯದ್ ಆಟಕೋಯ ತಂಙಳ್ ಪಂಜಿಕಲ್ಲು, ಮಾಜಿ ಶಾಸಕ ಬಿ.ಎ.ಮೊಯ್ದಿನ್ ಬಾವ, ಕಣಚೂರು ಗ್ರೂಪ್ ಅಧ್ಯಕ್ಷ ಮೋನು ಹಾಜಿ ಕಣಚೂರು, ಮುಕ್ರಿ ಇಬ್ರಾಹೀಂ ಹಾಜಿ, ಅಬ್ದುಲ್ ಹಕೀಂ ಹಾಜಿ ಕಳನಾಡ್, ಲಂಡನ್ ಮುಹಮ್ಮದ್ ಹಾಜಿ, ಮುಲ್ಲಚ್ಚೇರಿ ಅಬ್ದುಲ್ ಖಾದರ್ ಹಾಜಿ, ಉಮರ್ ಹಾಜಿ ರಾಜ್ ಕಮಾಲ್, ಹಾಜಿ ಮುಮ್ತಾಝ್ ಅಲಿ ಕೃಷ್ಣಾಪುರ ಮತ್ತಿತರರು ಭಾಗವಹಿಸಲಿದ್ದಾರೆ ಎಂದವರು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಸಅದೀಸ್ ಅಸೋಸಿಯೇಶನ್ ನ ದ.ಕ. ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಸಅದಿ ಉರುಮಣೆ, ಸಅದಿಯಾ ಪ್ರಚಾರ ಸಮಿತಿಯ ಉಪಾಧ್ಯಕ್ಷ ಹಾಜಿ ಮೊಯ್ದಿನ್ ಅಲ್ ಸಫರ್ ಮುಕ್ಕ, ಸಅದಿಯಾ ಮಂಗಳೂರು ನಗರ ಸಮಿತಿಯ ಅಧ್ಯಕ್ಷ ಕೆ.ಎಸ್.ಮೊಯ್ದಿನ್ ಬಾವ ಹಾಜಿ ತಲಪಾಡಿ ಹಾಗೂ ಘೋಷಣಾ ಸಮಾವೇಶ ಸಮಿತಿಯ ಕಾರ್ಯದರ್ಶಿ ರಿಯಾಝ್ ಸಅದಿ ಗುರುಪುರ ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)