varthabharthi

ಕರಾವಳಿ

ಕೊಲ್ಲರಕೋಡಿ: ಫೆ.13, 14ರಂದು 15ನೇ ಸ್ವಲಾತ್ ವಾರ್ಷಿಕ, ಮತ ಪ್ರವಚನ

ವಾರ್ತಾ ಭಾರತಿ : 11 Feb, 2019

ಕೊಲ್ಲರಕೋಡಿ, ಫೆ. 11: ನೂರುಲ್ ಹುದಾ ಮಸ್ಜಿದ್ ತಕ್ವಾ, ನೂರುಲ್ ಉಲೂಂ ಮದ್ರಸ ಕೊಲ್ಲರಕೋಡಿ ಹಾಗೂ ಎಸ್ ವೈಎಸ್, ಎಸ್ಸೆಸ್ಸೆಫ್, ಎಸ್ ಬಿಎಸ್ ಇದರ ಜಂಟಿ ಆಶ್ರಯದಲ್ಲಿ 15ನೇ ಸ್ವಲಾತ್ ವಾರ್ಷಿಕ ಮತ್ತು ದ್ವಿದಿನ ಮತ ಪ್ರವಚನವು ಸಿ.ಪಿ ಮಂಜನಾಡಿ ಉಸ್ತಾದ್ ವೇದಿಕೆ ಕೊಲ್ಲರಕೋಡಿ ಮಸ್ಜಿದ್ ತಕ್ವಾ ವಠಾರದಲ್ಲಿ ನಡೆಯಲಿದೆ.

ಫೆ.13ರಂದು ರಾತ್ರಿ 7:30ಕ್ಕೆ ಕೆ.ಎಸ್ ಆಟ್ಟಕೋಯ ತಂಙಳ್ ಕುಂಬೋಲ್ ಅವರು ಕಾರ್ಯಕ್ರಮ ಉದ್ಘಾಟನೆ ಮತ್ತು ದುವಾ ಮಾಡಲಿದ್ದಾರೆ. ಹಂಝ ಮಿಸ್ಬಾಹಿ ಓಟ್ಟಪದವು ಕೇರಳ ಮುಖ್ಯ ಪ್ರಭಾಷಣ ಮಾಡಲಿದ್ದು, ನೂರುಲ್ ಹುದಾ ಮಸ್ಜಿದ್ ತಕ್ವಾ ಅಧ್ಯಕ್ಷ ಇಬ್ರಾಹಿಂ ಕುಂಞಿ ಹಾಜಿ ಪಾರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಫೆ.14ರಂದು ಮಗ್ರಿಬ್ ನಮಾಝ್ ಬಳಿಕ ಶರಫುಲ್ ಉಲಮಾ ಪಿ.ಎಂ ಅಬ್ಬಾಸ್ ಉಸ್ತಾದ್ ಸ್ವಲಾತ್ ಗೆ ನೇತೃತ್ವ ನೀಡಲಿದ್ದಾರೆ, ಸಯ್ಯಿದ್ ಮುಹಮ್ಮದ್ ಯಾಸೀನ್ ಸಖಾಫಿ ಅಲ್ ಹೈದ್ರೋಸಿ ದುವಾ ನೆರವೇರಿಸಲಿದ್ದು, ಮಂಜನಾಡಿ ಮುದರ್ರಿಸ್ ಉಸ್ತಾದ್ ಅಹ್ಮದ್ ಬಾಖವಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.

ಮುಖ್ಯ ಅತಿಥಿಯಾಗಿ ರಾಜ್ಯ ನಗರಾಭಿವೃದ್ಧಿ ಹಾಗೂ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್, ದ.ಕ ಜಿಲ್ಲಾ ವಕ್ಫ್ ಸಲಹಾ ಮಂಡಲಿ ಅಧ್ಯಕ್ಷ ಯು.ಕೆ ಮೋನು ಹಾಜಿ ಕಣಚೂರ್, ಎನ್.ಎಂ ಅಹ್ಮದ್ ಕುಂಞಿ, ಎನ್.ಎಸ್ ಕರೀಂ ಹಾಜಿ, ಕರೀ ಫೈಝಿ, ನರಿಂಗಾನ ಗ್ರಾಪಂ ಅಧ್ಯಕ್ಷ ಇಸ್ಮಾಯಿಲ್ ಮೀನಂಕೋಡಿ, ಮಂಜನಾಡಿ ಜುಮಾ ಮಸ್ಜಿದ್ ಅಧ್ಯಕ್ಷ ಅಬ್ದುಲ್ ಅಝೀಝ್, ಅಲಿಕುಂಞಿ ಹಾಜಿ ಪಾರೆ, ಕೆ.ಎಂ ಅಬ್ದುಲ್ಲ ಹಾಜಿ, ಇಕ್ಬಾಲ್ ಹಾಜಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)