ಗ್ಯಾಬ್ರಿಯಲ್ಗೆ 4 ಏಕದಿನದಿಂದ ನಿಷೇಧ
ವೈಯಕ್ತಿಕ ನಿಂದನೆ
ದುಬೈ, ಫೆ.13: ಇಂಗ್ಲೆಂಡ್ ವಿರುದ್ಧದ ಮೊದಲ 4 ಏಕದಿನ ಅಂತರ್ರಾಷ್ಟ್ರೀಯ ಪಂದ್ಯಗಳಿಂದ ವೆಸ್ಟ್ಇಂಡೀಸ್ ವೇಗದ ಬೌಲರ್ ಶಾನೊನ್ ಗ್ಯಾಬ್ರಿಯಲ್ಗೆ ನಿಷೇಧ ಹೇರಲಾಗಿದೆ ಎಂದು ಐಸಿಸಿ ಬುಧವಾರ ತಿಳಿಸಿದೆ.
ಸೈಂಟ್ ಲೂಸಿಯಾದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದ ವೇಳೆ ಗ್ಯಾಬ್ರಿಯಲ್ ಇಂಗ್ಲೆಂಡ್ ನಾಯಕ ಜೋ ರೂಟ್ಗೆ ವೈಯಕ್ತಿಕ ನಿಂದನೆ ಮಾಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಐಸಿಸಿ, ಗ್ಯಾಬ್ರಿಯಲ್ ಐಸಿಸಿ ನೀತಿ ಸಂಹಿತೆ 2.03ನ್ನು ಉಲ್ಲಂಘಿಸಿರುವುದನ್ನು ಉಲ್ಲೇಖಿಸಿದೆ.
30ರ ಹರೆಯದ ಗ್ಯಾಬ್ರಿಯಲ್ ನಿಷೇಧ ಶಿಕ್ಷೆಯನ್ನು ಸ್ವೀಕರಿಸಿದ್ದಾರೆ. ಗ್ಯಾಬ್ರಿಯಲ್ಗೆ ನಿಷೇಧದ ಜೊತೆಗೆ ಪಂದ್ಯಶುಲ್ಕದಲ್ಲಿ ಶೇ.75ರಷ್ಟು ದಂಡ ವಿಧಿಸಲಾಗಿದೆ.
Next Story