varthabharthi

ನಿಮ್ಮ ಅಂಕಣ

ಬಾರ್ ಬೇಡ

ವಾರ್ತಾ ಭಾರತಿ : 14 Feb, 2019
-ಪಿ. ಪಿ. ಅಬ್ದುಲ್ ಕರೀಮ್, ಪೊಲ್ಯ, ಉಚ್ಚಿಲ

ಮಾನ್ಯರೇ,
ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿ ಮೂಳೂರು ನಿಲ್ದಾಣದ ಪಕ್ಕದಲ್ಲಿ ಬೃಹತ್ ಕಟ್ಟಡವೊಂದು ನಿರ್ಮಾಣಗೊಂಡಿದ್ದು, ಈ ಕಟ್ಟಡದ ನೆಲಮಹಡಿಯಲ್ಲಿ ಇನ್ನು ಕೆಲವೇ ದಿನಗಳಲ್ಲಿ ಬಾರೊಂದನ್ನು ತೆರೆಯಲು ಅಬಕಾರಿ ಇಲಾಖೆ ಅನುಮತಿ ನೀಡಿರುವ ವಿಷಯ ಸಾರ್ವಜನಿಕರ ಗಮನಕ್ಕೆ ಬಂದಿದೆ.
ರಾಜಕೀಯ ನಾಯಕರೋರ್ವರ ಪ್ರಭಾವ ಬಳಸಿ ತೆರೆಯಲುದ್ದೇಶಿಸಿರುವ ಈ ಬಾರ್‌ನ ಸನಿಹದಲ್ಲೇ, ನೂರಾರು ಮನೆಗಳಲ್ಲದೆ, ಶಿಕ್ಷಣ ಸಂಸ್ಥೆಗಳು, ಚರ್ಚ್, ಮಸೀದಿಗಳಿದೆ. ಅಲ್ಲದೆ ಮಹಿಳಾ ಕಾಲೇಜು ಕೂಡಾ ಸನಿಹದಲ್ಲೇ ಇರುವುದರಿಂದ ಕುಡುಕರ ರಂಪಾಟದಿಂದಾಗಿ ಹೆಣ್ಣು ಮಕ್ಕಳು ಇನ್ನು ಈ ರಸ್ತೆಯಲ್ಲಿ ನಡೆಯುವಂತಿಲ್ಲ. ಈ ವಿಷಯ ತಿಳಿದ ಸಾರ್ವಜನಿಕರು, ಜನಪರ ಸಂಘಟನೆಗಳು ಈಗಾಗಲೇ ಹೋರಾಟ ಮಾಡಿದ್ದಾರೆ.
ಆದ್ದರಿಂದ ಜಿಲ್ಲ್ಲಾಧಿಕಾರಿಗಳು ಕೂಡಲೇ ಈ ಬಗ್ಗೆ ಮಧ್ಯಪ್ರವೇಶಿಸಿ ಬಾರ್ ಆರಂಭಿಸುವ ಮುನ್ನವೇ ಪರವಾನಿಗೆಯನ್ನು ರದ್ದುಪಡಿಸಬೇಕೆಂದು ವಿನಂತಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)