ವೆಲ್ಫೇರ್ ಅಸೋಸಿಯೇಷನ್ ಮೇಲೆ ಸಿಸಿಬಿ ದಾಳಿ: 46 ಮಂದಿ ಸೆರೆ, 1.25 ಲಕ್ಷ ರೂ. ಜಪ್ತಿ
ಬೆಂಗಳೂರು, ಫೆ.15: ನಗರದ ಎಸ್ಎಲ್ಎನ್ ವೆಲ್ಫೇರ್ ಅಸೋಸಿಯೇಷನ್ ಕ್ಲಬ್ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು 46 ಜನರನ್ನು ಬಂಧಿಸಿ, 1.25 ಲಕ್ಷ ರೂ. ನಗದು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಟೀಚರ್ಸ್ ಲೇಔಟ್, ಹೊರ ವರ್ತುಲ ರಸ್ತೆಯ 1 ನೇ ಮುಖ್ಯ ರಸ್ತೆಯ ಕಟ್ಟಡವೊಂದರಲ್ಲಿರುವ ಎಸ್ಎಲ್ಎನ್ ವೆಲ್ಫೇರ್ ಅಸೋಸಿಯೇಷನ್ ಕ್ಲಬ್ ನಲ್ಲಿ ಹಣವನ್ನು ಪಣವಾಗಿ ಕಟ್ಟಿಕೊಂಡು ಇಸ್ಪೀಟ್ ಜೂಜಾಟ ಆಡುತ್ತಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಸಿಸಿಬಿ ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.
ಜೂಜಾಟಕ್ಕೆ ತೊಡಗಿಸಿದ್ದ 1.25 ಲಕ್ಷ ರೂ. ನಗದು ಜಪ್ತಿ ಮಾಡಿ, ಇಲ್ಲಿನ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಮುಂದುವರೆಸಲಾಗಿದೆ.
Next Story