varthabharthiಈ ದಿನ

ಪೋರ್ಚುಗೀಸ್ ಅಲ್ಫೋನ್ಸೋ ಡಿ ಅಲ್ಬುಕರ್ಕ್‌ನಿಂದ ಗೋವಾ ವಶ

ವಾರ್ತಾ ಭಾರತಿ : 17 Feb, 2019

1510: ಭಾರತಕ್ಕೆ ಯುರೋಪಿಯನ್ನರ ಆಗಮನದ ಭಾಗವಾಗಿ ಪೋರ್ಚುಗೀಸ್ ನೌಕಾಸೇನೆಯ ಮುಖ್ಯಸ್ಥ ಅಲ್ಫೋನ್ಸೊ ಡಿ ಅಲ್ಬುಕರ್ಕ್ ಮೊದಲ ಬಾರಿಗೆ ಗೋವಾವನ್ನು ವಶಪಡಿಸಿಕೊಂಡನು. ಒಂದು ಸಣ್ಣಪ್ರಮಾಣದ ಕದನದೊಂದಿಗೆ ಪಟ್ಟಣವನ್ನು ಆತ ಪ್ರವೇಶಿಸಿದನು.

1865: ಅಮೆರಿಕದ ಆಂತರಿಕ ಕದನದ ಭಾಗವಾಗಿ ದಕ್ಷಿಣ ಕರೋಲಿನಾದ ಕೊಲಂಬಿಯಾ ನಗರಕ್ಕೆ ಬೆಂಕಿ ಹಚ್ಚಲಾಯಿತು.

1936: ವಿಶ್ವದ ಪ್ರಥಮ ಸೂಪರ್ ಹೀರೊ, ಲೀ ಫಾಕ್ ಅವರಿಂದ ತಯಾರಾದ ಕಾರ್ಟೂನ್ ಪಾತ್ರ ಫ್ಯಾಂಟಮ್ ಕಾಮಿಕ್ಸ್ ಗಳಲ್ಲಿ ಇಂದು ಪ್ರಥಮ ಬಾರಿ ಕಾಣಿಸಿಕೊಂಡಿತು.

1950: ನ್ಯೂಯಾರ್ಕ್‌ನ ರಾಕ್‌ವಿಲ್ಲೆ ಕೇಂದ್ರದಲ್ಲಿ ಸಂಭವಿಸಿದ ರೈಲು ಅವಘಡದಲ್ಲಿ 31 ಜನ ಸಾವನ್ನಪ್ಪಿದರು.

1957: ಮಿಸೌರಿಯ ವಾರ್ರೆಂಟನ್‌ನ ವೃದ್ಧಾಶ್ರಮದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಪರಿಣಾಮ ಸುಮಾರು 72 ಜನ ಸಾವನ್ನಪ್ಪಿದ ವರದಿಯಾಗಿದೆ.

1966: ಫ್ರೆಂಚ್ ಉಪಗ್ರಹ ‘ಡಯಾಪ್ಯಾಸನ್ ಡಿ-1ಎ’ ಈ ದಿನ ಉಡಾವಣೆಗೊಂಡಿತು.

1970: ಈಜಿಪ್ಟ್‌ನ ಕೈರೊದಲ್ಲಿ ನಡೆಯುತ್ತಿದ್ದ ಫುಟ್ಬಾಲ್ ಪಂದ್ಯವೊಂದರ ವೀಕ್ಷಣೆಗಾಗಿ ನೂಕುನುಗ್ಗಲು ಉಂಟಾದ ಪರಿಣಾಮ 49 ಜನ ಸಾವಿಗೀಡಾದರು.

1993: ಹೈಟಿಯಲ್ಲಿ ಫೆರ್ರಿ ಹಡಗೊಂದು ಬಿರುಗಾಳಿಗೆ ಸಿಕ್ಕಿ ಪಲ್ಟಿಯಾದ ಪರಿಣಾಮ ಸುಮಾರು 800-2,000 ಜನರು ಸಾವನ್ನಪ್ಪಿದ ವರದಿಯಾಗಿದೆ.

1883: ಭಾರತದ ಸ್ವಾತಂತ್ರ ಹೋರಾಟಗಾರ ವಾಸುದೇವ್ ಬಲವಂತ್ ಫಡ್ಕೆ ನಿಧನ.

1986: ತತ್ವಜ್ಞಾನಿ ಹಾಗೂ ಲೇಖಕ ಜಿಡ್ಡು ಕಷ್ಣಮೂರ್ತಿ ನಿಧನ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)