varthabharthi

ಸಿನಿಮಾ

200 ಕೋಟಿ ರೂ. ಗಳಿಕೆ ದಾಟಿದೆ ಉರಿ

ವಾರ್ತಾ ಭಾರತಿ : 17 Feb, 2019

‘ಉರಿ: ದಿ ಸರ್ಜಿಕಲ್ ಸ್ಟೈಕ್’ ಆದಿತ್ಯ ದಾರ್ ಅವರ ಚೊಚ್ಚಲ ನಿರ್ದೇಶನ ಚಿತ್ರ. ಈ ಚಿತ್ರಕ್ಕೆ ಬಾಕ್ಸ್ ಆಫೀಸಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿಕ್ಕಿ ಕೌಶಲ್ ಹಾಗೂ ಯಾಮಿ ಗೌತಮ್ ನಟನೆಯ ಈ ಚಿತ್ರ 2016ರಲ್ಲಿ ಭಾರತ ಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್‌ನ ನಾಟಕೀಯ ಆವೃತ್ತಿ. ಈ ಚಿತ್ರ ಪ್ರಸ್ತುತ 4ನೇ ವಾರ ಯಶಸ್ವಿ ಪ್ರದರ್ಶನ ಕಾಣುತ್ತಿದೆ ಹಾಗೂ 200 ಕೋಟಿ ರೂ. ಕ್ಲಬ್‌ಗೆ ಸೇರಿದೆ. ‘ಉರಿ’ ಮೊದಲ ವಾರ 71.26 ಕೋಟಿ ರೂ. ಗಳಿಸಿತ್ತು. ಎರಡನೇ ಹಾಗೂ ಮೂರನೇ ವಾರ ಒಟ್ಟಾಗಿ 99.79 ಕೋಟಿ ರೂಪಾಯಿ ಗಳಿಸಿತ್ತು. ಈಗ ನಾಲ್ಕನೇ ವಾರ ಪ್ರದರ್ಶನವಾಗುತ್ತಿದ್ದು, ಇದುವರೆಗೆ 29.02 ಕೋಟಿ ರೂಪಾಯಿ ಗಳಿಸಿದೆ. ಚಿತ್ರ ನಾಲ್ಕು ವಾರಗಳಲ್ಲಿ ಒಟ್ಟಾಗಿ 200.07 ಕೋಟಿ ರೂಪಾಯಿ ಗಳಿಸಿದೆ. ಇದು 2019ರ ಮೊದಲ ಯಶಸ್ವಿ ಚಿತ್ರ. ಅಲ್ಲದೆ, ಈ ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)