varthabharthi

ಸಿನಿಮಾ

ಫರ್ಹಾ ನಿರ್ದೇಶನದ ಚಿತ್ರದಲ್ಲಿ ದೀಪಿಕಾ

ವಾರ್ತಾ ಭಾರತಿ : 17 Feb, 2019

ಫರ್ಹಾ ಖಾನ್ ನಿರ್ದೇಶನದ ‘ಓಂ ಶಾಂತಿ ಓಂ’ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದ ದೀಪಿಕಾ ಪಡುಕೋಣೆ, ಆನಂತರ ಸೂಪರ್‌ಸ್ಟಾರ್ ತಾರಾಪಟ್ಟವನ್ನು ಅಲಂಕರಿಸಿದ್ದು ಈಗ ಇತಿಹಾಸ. ಓಂ ಶಾಂತಿ ಓಂ ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ಫರ್ಹಾಗೆ ದೀಪಿಕಾ ಎಂದರೆ ಅಚ್ಚುಮೆಚ್ಚು. ತನ್ನ ಹ್ಯಾಪಿ ನ್ಯೂ ಇಯರ್ ಚಿತ್ರದಲ್ಲೂ ಆಕೆ ದೀಪಿಕಾಗೆ ನಾಯಕಿ ಪಾತ್ರವನ್ನು ನೀಡಿದ್ದರು. ಆದರೆ ಆ ಚಿತ್ರ ಬಾಕ್ಸ್‌ಆಫೀಸ್‌ನಲ್ಲಿ ಅಷ್ಟೇನೂ ಸದ್ದು ಮಾಡಲಿಲ್ಲ. ಇದೀಗ ಬರೋಬ್ಬರಿ ಐದು ವರ್ಷಗಳ ಬಳಿಕ ಫರ್ಹಾ ನಿರ್ದೇಶನದ ಚಿತ್ರದಲ್ಲಿ ಮತ್ತೊಮ್ಮೆ ದೀಪಿಕಾ ನಟಿಸಲಿದ್ದಾರೆ. ಆ ಚಿತ್ರದ ಬಗ್ಗೆ ಇನ್ನಷ್ಟೇ ಅಧಿಕೃತ ಪ್ರಕಟನೆೆ ಹೊರಬೀಳಲಿದೆ. ತೀರಾ ಇತ್ತೀಚೆಗೆ ಫರ್ಹಾ ಅವರು ಬಾಲಿವುಡ್‌ನ ಸೂಪರ್‌ಹಿಟ್ ಚಿತ್ರಗಳ ನಿರ್ದೇಶಕ ರೋಹಿತ್ ಶೆಟ್ಟಿ ಜೊತೆಗೂಡಿ ಚಿತ್ರವೊಂದನ್ನು ನಿರ್ಮಿಸುವುದಾಗಿ ಹೇಳಿಕೊಂಡಿದ್ದರು. ದೀಪಿಕಾ ನಟಿಸುತ್ತಿರುವ ಆ ಪ್ರಾಜೆಕ್ಟ್‌ನಲ್ಲೇ ಅಥವಾ ಬೇರೊಂದು ಚಿತ್ರದಲ್ಲೇ ಎಂಬ ಸಂಗತಿ ಇನ್ನೂ ಸ್ಪಷ್ಟವಾಗಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)