varthabharthi

ಸಿನಿಮಾ

ಕೊರಿಯನ್ ರಿಮೇಕ್ ಚಿತ್ರದಲ್ಲಿ ಸಲ್ಮಾನ್ ಖಾನ್

ವಾರ್ತಾ ಭಾರತಿ : 17 Feb, 2019

ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಅಭಿನಯದ ಅಲಿ ಅಬ್ಬಾಸ್ ಝಫರ್ ಅವರ ‘ಭಾರತ್’ ಚಿತ್ರ ಈ ಬಾರಿಯ ಈದ್ ಹಬ್ಬದ ಸಂದರ್ಭ ತೆರೆ ಕಾಣಲಿದೆ. ಕಳೆದ ವರ್ಷ ಮಧ್ಯಭಾಗದಿಂದ ಇಬ್ಬರು ಕೂಡ ಈ ಚಿತ್ರದ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದರು. ಕೊರಿಯನ್ ಹಿಟ್ ಚಿತ್ರ ‘ಒಡೆ ಟು ಮೈ ಫಾದರ್’ ಚಿತ್ರದ ಹಿಂದಿ ರಿಮೇಕ್ ‘ಭಾರತ್’. ಈ ಚಿತ್ರ ಏಕಕಾಲದಲ್ಲಿ ವ್ಯಕ್ತಿ ಹಾಗೂ ದೇಶದ ಪ್ರಯಾಣದ ಸುತ್ತ ಸುತ್ತುತ್ತದೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ವಿವಿಧ ಲುಕ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ, ಅವರು ಇನ್ನೊಂದು ಕೊರಿಯನ್ ರಿಮೇಕ್ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬುದು ಇತ್ತೀಚೆಗಿನ ಸುದ್ದಿ. ಅಂತರ್‌ರಾಷ್ಟ್ರೀಯ ವೆಬ್‌ಪೋರ್ಟಲ್ ಸಲ್ಮಾನ್ ಖಾನ್ ಅವರ ಭಾಮೈದ ಅತುಲ್ ಅಗ್ನಿ ಹೋತ್ರಿ ಈ ಕೊರಿಯನ್ ಚಿತ್ರದ ರಿಮೇಕ್ ಹಕ್ಕನ್ನು ಪಡೆದುಕೊಂಡಿದ್ದಾರೆ ಹಾಗೂ ರೀಲ್ ಲೈಫ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದೆ. ಈ ಕೊರಿಯನ್ ಚಿತ್ರ ‘ವೆಟರನ್’ ಯುವ ಕೋಟ್ಯಧೀಶನ ವಿರುದ್ಧ ಹೋರಾಡುವ ಪತ್ತೇದಾರನ ಬದುಕಿನ ಸುತ್ತ ತಿರುಗುತ್ತದೆ. ಆದರೆ, ಈ ಚಿತ್ರದಲ್ಲಿ ಸಲ್ಮಾನ್ ಖಾನ್ ನಟಿಸುತ್ತಾರೋ, ಇಲ್ಲವೋ ಎಂಬ ಬಗ್ಗೆ ಇದುವರೆಗೆ ದೃಢಪಟ್ಟಿಲ್ಲ. ಆದರೆ, ಎಲ್ಲರೂ ಸಲ್ಮಾನ್ ಖಾನ್ ಅವರನ್ನು ಪತ್ತೇದಾರನ ಅವತಾರದಲ್ಲಿ ನೋಡಲು ಕಾಯುತ್ತಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)