varthabharthi

ನಿಮ್ಮ ಅಂಕಣ

ಸಹಾಯ ಮಾಡುವ ಕೈಗಳು ಶ್ರೇಷ್ಠ

ವಾರ್ತಾ ಭಾರತಿ : 17 Feb, 2019
ವಿಠಲ.ಆರ್.ಯಂಕಂಚಿ, ಬಮ್ಮನಜೋಗಿ

ಮಾನ್ಯರೇ,

ಜಮ್ಮುಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯಿಂದ ಮಡಿದ ನಮ್ಮ ಸೈನಿಕರ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಸೈನಿಕರು ಹಗಲಿರುಳೆನ್ನದೆ ದೇಶವನ್ನು ಕಾಯುತ್ತಾರೆ. ನಮ್ಮ ಸೈನಿಕರನ್ನು ಬಲಿ ಪಡೆದ ದೇಶದ್ರೋಹಿಗಳ ವಿರುದ್ಧ ದೇಶದ ಜನತೆ ಭಯೋತ್ಪಾದಕರನ್ನು ಮಟ್ಟಹಾಕಿ ಎಂದು ಕರೆ ಕೊಡುತ್ತಿದ್ದಾರೆ. ಮನೆಗೆ ಆಧಾರ ಸ್ತಂಭವಾಗಿದ್ದ ಪ್ರತಿಯೊಬ್ಬ ಯೋಧರ ಮನೆಯ ಆರ್ಥಿಕ ಸ್ಥಿತಿಗತಿಯನ್ನರಿತ ದೇಶದ ಪ್ರತಿಷ್ಠಿತ ಸಂಸ್ಥೆಯಾಗಿರುವ ರಿಲಯನ್ಸ್ ಫೌಂಡೇಷನ್ ನೆರವು ನೀಡುವುದಾಗಿ ತಿಳಿಸಿದ್ದು, ಉಗ್ರಗಾಮಿಗಳ ಅಟ್ಟಹಾಸಕ್ಕೆ ಬಲಿಯಾದ ಎಲ್ಲಾ ಭಾರತೀಯ ಯೋಧರ ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ನೌಕರಿಯ ಜವಾಬ್ದಾರಿಯನ್ನು ತಾವು ಹೊರಲು ತಯಾರಾಗಿದ್ದೇವೆ ಎನ್ನುವ ಮೂಲಕ ಮಾನವೀಯತೆ ಮೆರೆದಿದೆ. ವೀರ ಮರಣ ಹೊಂದಿದ ಯೋಧರ ಕುಟುಂಬಕ್ಕೆ ಬಾಲಿವುಟ್ ನಟರಾದ ಅಮಿತಾಭ್ ಬಚ್ಚನ್ 5,00,000 ರೂ. ಮತ್ತು ಅಕ್ಷಯ್‌ಕುಮಾರ್ 9,00,000 ರೂ. ನೀಡುವ ಕುರಿತು ಹೇಳಿದ್ದಾರೆ.

  ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಯೋಧರ ಮಕ್ಕಳಿಗೆ ತಮ್ಮ ಶಾಲೆಯಲ್ಲಿ ಉಚಿತ ಶಿಕ್ಷಣ ನೀಡುವುದಾಗಿ ಹೇಳಿದ್ದಾರೆ.
 ದೇಶದ ಹಲವಾರು ಪ್ರತಿಷ್ಠಿತ ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳು, ನೌಕರು, ಉದ್ದಿಮೆದಾರರು ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ. ಪ್ರಾರ್ಥಿಸುವ ಕೈಗಳಿಗಿಂತ ಸಹಾಯ ಮಾಡುವ ಕೈಗಳೇ ಶ್ರೇಷ್ಠ ಎಂಬ ಮಾತಿನಂತೆ ಸಹಾಯಾರ್ಥದಲ್ಲಿ ತೊಡಗಿದ ಎಲ್ಲರಿಗೂ ದೇವರು ಕಾಪಾಡಲಿ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)