ಚಾರಿಟಿ ಫುಟ್ಬಾಲ್ ಪಂದ್ಯ ಆಡಿದ ಎಂ.ಎಸ್.ಧೋನಿ
ಮುಂಬೈ,ಫೆ.19: ಶಾಲಾ ದಿನಗಳಲ್ಲಿ ಗೋಲ್ಕೀಪರ್ ಆಗಿದ್ದ ಭಾರತದ ಬ್ಯಾಟ್ಸ್ಮನ್-ವಿಕೆಟ್ಕೀಪರ್ ಎಂ.ಎಸ್. ಧೋನಿ ಮುಂಬೈನಲ್ಲಿ ಸೋಮವಾರ ಚಾರಿಟಿ ಫುಟ್ಬಾಲ್ ಪಂದ್ಯವನ್ನು ಆಡಿದರು.
ಧೋನಿ ಅವರ ಫುಟ್ಬಾಲ್ ಮೇಲಿನ ಪ್ರೀತಿ ಅವರ ಅಭಿಮಾನಿಗಳಿಗೆ ಚೆನ್ನಾಗಿ ಗೊತ್ತಿದೆ. 37ರ ಹರೆಯದ ಧೋನಿ ಫುಟ್ಬಾಲ್ ಸ್ಪರ್ಧೆಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಾರೆ.
ಸೆಲೆಬ್ರಿಟಿ ಕ್ರಿಕೆಟಿಗ ಧೋನಿ ಆಡಿದ ಫುಟ್ಬಾಲ್ ಪಂದ್ಯ ವೀಕ್ಷಿಸಲು ಭಾರೀ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಜುಹುವಿನಲ್ಲಿ ನಡೆದ ಫುಟ್ಬಾಲ್ ಪಂದ್ಯದಲ್ಲಿ ಬಾಲಿವುಡ್ ಸೆಲೆಬ್ರಿಟಿಗಳಾದ ಡಿನೊ ಮಾರಿಯ, ಅಪರ್ಶಕ್ತಿ ಖುರಾನ, ನಟ-ರೂಪದರ್ಶಿ ಮಾರ್ಕ್ ರಾಬಿನ್ಸನ್ ಭಾಗವಹಿಸಿದ್ದರು.
ಧೋನಿ ಆಸ್ಟ್ರೇಲಿಯ ವಿರುದ್ಧ ಸ್ವದೇಶದಲ್ಲಿ ನಡೆಯುವ 2 ಟಿ-20 ಹಾಗೂ 5 ಪಂದ್ಯಗಳ ಏಕದಿನ ಸರಣಿ ಆಡಲು ಟೀಮ್ ಇಂಡಿಯಾಕ್ಕೆ ಆಯ್ಕೆಯಾಗಿದ್ದಾರೆ.
Next Story