varthabharthi


ಓ ಮೆಣಸೇ

ಓ ಮೆಣಸೇ…

ವಾರ್ತಾ ಭಾರತಿ : 25 Feb, 2019
ಪಿ.ಎ.ರೈ

ಸಮ್ಮಿಶ್ರ ಸರಕಾರದ ನಂಬರ್ ಕಡಿಮೆಯಾದಾಗ ನಾವು ಸರಕಾರ ರಚನೆ ಮಾಡುತ್ತೇವೆ - ಈಶ್ವರಪ್ಪ, ಬಿಜೆಪಿ ಮುಖಂಡ ನಿಮ್ಮ ನಂಬರ್‌ಗಳನ್ನು ಹೆಚ್ಚಿಸುವ ಬಗೆ ಹೇಗೆ?
ಸಾಹಿತ್ಯದಿಂದ ದುಶ್ಚಟ ನಿವಾರಣೆ ಸಾಧ್ಯ
- ಯು.ಟಿ.ಖಾದರ್, ಸಚಿವ
 

ಮೊದಲು ದುಶ್ಚ್ಚಟಗಳಿಂದ ಸಾಹಿತಿಗಳನ್ನು ಪಾರು ಮಾಡಬೇಕಾಗಿದೆ. ಅಸ್ಸಾಮನ್ನು ಮತ್ತೊಂದು ಕಾಶ್ಮೀರವಾಗಲು ಬಿಡುವುದಿಲ್ಲ

- ಅಮಿತ್ ಶಾ, ಬಿಜೆಪಿ ಅಧ್ಯಕ್ಷ
ಆದರೆ ಅಸ್ಸಾಮ್‌ನಲ್ಲಿ ನಡೆಯುತ್ತಿರುವುದು ನೋಡಿದರೆ ಹಾಗನಿಸುವುದಿಲ್ಲ.

ಆಪರೇಶನ್ ಕಮಲದ ಹೆಸರಿನಲ್ಲಿ ಬಿಜೆಪಿಯಿಂದ 50 ಕೋ.ರೂ. ಪಡೆದದ್ದು ಸಾಬೀತಾದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ

- ಡಾ.ಉಮೇಶ್ ಜಾಧವ್, ಶಾಸಕ
ಅಂದರೆ ಅದಕ್ಕಿಂತ ಕಮ್ಮಿ ಪಡೆದಿದ್ದೀರಿ ಎಂದಾಯಿತು.

ಬುದ್ಧಿಜೀವಿಗಳಲ್ಲಿ ಕೆಲವರಿಗೆ ನಮ್ಮ ಪರಂಪರೆ, ಸಂಸ್ಕೃತಿಯ ಅರಿವಿಲ್ಲ
- ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ
ಎಂಜಲು ಸೇವೆ, ಪಂಕ್ತಿಭೇದ ಇವೆಲ್ಲ ನಮ್ಮ ಪರಂಪರೆ, ಸಂಸ್ಕೃತಿಯೇ?

ಪಂಪ್‌ವೆಲ್ ಮತ್ತು ತೊಕ್ಕೊಟ್ಟು ಮೇಲ್ಸೇತುವೆ ವಿಳಂಬಕ್ಕೆ ಸಚಿವ ಯು.ಟಿ.ಖಾದರ್, ಮಾಜಿ ಶಾಸಕ ಲೋಬೊ ಜಾತಿ ಪ್ರೀತಿಯೇ ಕಾರಣ

- ನಳಿನ್‌ಕುಮಾರ್ ಕಟೀಲು, ಸಂಸದ
  ಆ ಮೇಲ್ಸೇತುವೆಯ ಜಾತಿ ಯಾವುದು?

ಮೋದಿ ಮತ್ತೆ ಪ್ರಧಾನಿಯಾದರೆ ಜೈಲಿಗೆ ಹೋಗಬೇಕಾಗುತ್ತದೆ ಎಂಬ ಭೀತಿಯಿಂದ ಕಳ್ಳರೆಲ್ಲ ಒಂದಾಗುತ್ತಿದ್ದಾರೆ
-ಕೇಶವ ಪ್ರಸಾದ್ ವೌರ್ಯ, ಉ.ಪ್ರ.ಉಪಮುಖ್ಯಮಂತ್ರಿ
ಈವರೆಗೆ ಪ್ರಧಾನಿಯಾಗಿ ಎಷ್ಟು ಜನರನ್ನು ಜೈಲಿಗೆ ಕಳುಹಿಸಿದರು?

ಕೆಲವು ವರ್ಗಗಳು ಹಾಗೂ ಬುದ್ಧಿಜೀವಿಗಳ ಪಾಲಿಗೆ ನಾನಿನ್ನೂ ಅಸ್ಪಶ್ಯನಾಗಿಯೇ ಇದ್ದೇನೆ
- ದೊಡ್ಡರಂಗೇಗೌಡ, ಹಿರಿಯ ಕವಿ
ಪರವಾಗಿಲ್ಲ, ಭೈರಪ್ಪರಿಗೆ ತುಂಬಾ ಹತ್ತಿರವಾಗಿದ್ದೀರಿ.

ಉಗ್ರರ ದಾಳಿಯಿಂದ ಸೈನಿಕರ ನೈತಿಕ ಬಲ ಕುಗ್ಗಿಲ್ಲ - ನಿರ್ಮಲಾಸೀತಾರಾಮನ್, ಕೇಂದ್ರ ಸಚಿವೆ
ಆದರೆ ನಿಮ್ಮ ವೈಫಲ್ಯ ಅವರ ನೈತಿಕ ಬಲ ಕುಗ್ಗಿಸಿರುವ ಸಾಧ್ಯತೆ ಇದೆ.

ಬುಲೆಟ್ ರೈಲುಗಳಿಗಿಂತಲೂ ಯೋಧರಿಗೆ ಬುಲೆಟ್ ಪ್ರೂಫ್ ಜಾಕೆಟ್‌ಗಳ ಅಗತ್ಯವಿದೆ - ಅಭಿಷೇಕ್ ಬ್ಯಾನರ್ಜಿ, ಸಂಸದ

ಹಳಿಯಿಲ್ಲದೆ ಬಿಡುವ ರೈಲುಗಳೇ ಭಾರತದ ಇಂದಿನ ಸ್ಥಿತಿಗೆ ಕಾರಣ.

ಜಾತಿ ತಾರತಮ್ಯವು ಸಾಮಾಜಿಕ ಸಾಮರಸ್ಯವನ್ನು ಸಾಧಿಸುವಲ್ಲಿ ಬಹುದೊಡ್ಡ ಅಡಚಣೆಯಾಗಿದೆ
- ನರೇಂದ್ರ ಮೋದಿ, ಪ್ರಧಾನಿ
  ಅದನ್ನು ಸಾಧಿಸುವುದಕ್ಕಾಗಿ ಮೇಲ್ಜಾತಿಗೆ ಮೀಸಲಾತಿ ನೀಡಿದಿರಾ?

ಸಚಿವ ರೇವಣ್ಣ ಹಾಸನವನ್ನೇ ಒಂದು ರಾಜ್ಯ ಹಾಗೂ ರಾಷ್ಟ್ರವೆಂದುಕೊಂಡಿದ್ದಾರೆ
- ಜಗದೀಶ್‌ಶೆಟ್ಟರ್, ಮಾಜಿ ಮುಖ್ಯಮಂತ್ರಿ
ಮತ್ತು ಅವರೇ ಅದರ ಪ್ರಧಾನಿಯಂತೆ.

ಬಿಜೆಪಿಯ ಯಾವ ನಾಯಕನೂ ದೇಶಕ್ಕಾಗಿ ಸತ್ತಿಲ್ಲ
- ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ
ಆದರೆ ಬೇರೆಯವರನ್ನು ದೇಶದ ಹೆಸರಲ್ಲಿ ಸಾಯಿಸಿದ್ದಾರೆ.

ಸಚಿವನಾಗುವ ಆಸೆಯನ್ನು ಸದ್ಯಕ್ಕೆ ಕೈಬಿಟ್ಟಿದ್ದೇನೆ - ಬಿ.ನಾಗೇಂದ್ರ, ಶಾಸಕ
  ಆಸೆ ಈಡೇರುವ ಯಾವ ಲಕ್ಷಣವೂ ಇಲ್ಲವೇ?

ಮಹಾರಾಷ್ಟ್ರದಲ್ಲಿ ಬಿಜೆಪಿ - ಶಿವಸೇನಾ ಮೈತ್ರಿ ತನಗೇನು ಅಚ್ಚರಿ ತಂದಿಲ್ಲ
- ಶರದ್ ಪವಾರ್,ಎನ್‌ಸಿಪಿ ಮುಖ್ಯಸ್ಥ
ನೀವೆಲ್ಲಿ ಬಿಜೆಪಿ ಜೊತೆ ಕೈ ಜೋಡಿಸುತ್ತೀರಾ ಎಂಬ ಭಯದಲ್ಲಿ ಶಿವಸೇನೆ ಕೈಜೋಡಿಸಿತಂತೆ.

ನಮ್ಮ ದೇಶದ ಎಲ್ಲ ಪ್ರಾದೇಶಿಕ ಭಾಷೆಗಳು ಅಪಾಯದಲ್ಲಿವೆ
- ಚಂದ್ರಶೇಖರ ಕಂಬಾರ, ಕೇಂದ್ರ ಸಾಹಿತ್ಯ ಅಕಾಡಮಿ ಅಧ್ಯಕ್ಷ
  ಮೊದಲು ಪ್ರಾದೇಶಿಕ ಭಾಷೆಗಳನ್ನಾಡುವ ಜನರ ಬದುಕಿನ ಬಗ್ಗೆ ಮಾತನಾಡಿ.

ಎಂ.ಬಿ.ಪಾಟೀಲ್ ದಾರಿತಪ್ಪಿ ಗೃಹ ಸಚಿವರಾಗಿದ್ದಾರೆ
- ಅನಂತಕುಮಾರ್ ಹೆಗಡೆ, ಕೇಂದ್ರ ಸಚಿವ
ನೀವು ದಾರಿ ತಪ್ಪಿ ಸಂಸದರಾದ ಹಾಗೆಯೇ?

ಕಾರು ಅಪಘಾತ ಪ್ರಕರಣದಲ್ಲಿ ಶಾಸಕ ಸಿ.ಟಿ.ರವಿ ನಿರಪರಾಧಿ
- ಕೋಟ ಶ್ರೀನಿವಾಸ ಪೂಜಾರಿ, ಶಾಸಕ
ಕಾರಿನಡಿಗೆ ಸಿಲುಕಿದವರೇ ಅಪರಾಧಿಗಳು ಎಂದರಂತೆ

ಯು. ಟಿ. ಖಾದರ್. ಕರ್ನಾಟಕದಲ್ಲಿ ಎರಡೂವರೆ ಮುಖ್ಯಮಂತ್ರಿಗಳ ಸರಕಾರವಿದೆ
- ಅಮಿತ್ ಶಾ, ಬಿಜೆಪಿ ಅಧ್ಯಕ್ಷ
ಸರ್ವಾಧಿಕಾರ ಇಲ್ಲವಲ್ಲ ಎನ್ನುವ ಸಂತೋಷ ಈ ನಾಡಿನ ಜನರದ್ದು.

ಇಂದಿನ ದಿನಗಳಲ್ಲಿ ಎಲ್ಲ ರಾಜಕಾರಣಿಗಳು ಮೂರೂ ಬಿಟ್ಟವರು
- ಬಸವರಾಜ ರಾಯರೆಡ್ಡಿ, ಮಾಜಿ ಸಚಿವ
ಚುನಾವಣೆಗೆ ನಿಲ್ಲಬೇಕಾದರೆ ಆ ಮೂರನ್ನ್ನೂ ಬಿಡಬೇಕು ಎನ್ನುವುದು ನಿಯಮವೆಂದೇ ಅವರು ಭಾವಿಸಿದ್ದಾರೆ.

ಇನ್ನ್ನು ಚುನಾವಣೆ ಮುಗಿಯುವವರೆಗೂ ನಾನು ಮನೆಗೆ ಹೋಗುವುದಿಲ್ಲ
- ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
  ಯಾರ ಮನೆಯಲ್ಲಿ ಉಳಿಯಲಿದ್ದೀರಿ?

ವಿಶ್ವಕಪ್ ಕ್ರಿಕೆಟ್‌ನಲ್ಲಿ ಭಾರತ ಆಡದಿದ್ದರೆ ಪಾಕ್ ತಂಡಕ್ಕೆ ಹೆಚ್ಚು ಲಾಭವಾಗಲಿದೆ
- ಸುನಿಲ್ ಗವಾಸ್ಕ್‌ರ್, ಮಾಜಿ ಕ್ರಿಕೆಟ್ ಆಟಗಾರ
 ಆಡದಿರುವುದರಿಂದ ಆಟಗಾರರಿಗೆ ಆಗುವ ಆರ್ಥಿಕ ನಷ್ಟದ ಬಗ್ಗೆ ಚಿಂತೆಯಿರಬೇಕು.

ರಾಹುಲ್‌ಗಾಂಧಿಗೆ ಈಗ ತಾನು ಹಿಂದೂ ಬ್ರಾಹ್ಮಣ ಎಂದು ಜನಿವಾರ ತೋರಿಸುವ ಸ್ಥಿತಿ ಬಂದಿದೆ
- ಪ್ರಹ್ಲಾದ್ ಜೋಷಿ, ಸಂಸದ
ನೆಹರೂ ಕುಟುಂಬದೊಳಗೆ ಭಾರತದ ಸರ್ವಧರ್ಮ ಸಮನ್ವಯವಾಗಿವೆ.

ರಾಜಕಾರಣಿಗಳು ವೇಶವಿಲ್ಲದ ನಟರು
- ಜಯಪ್ರಕಾಶ್ ಹೆಗ್ಡೆ , ಮಾಜಿ ಸಂಸದ
ನರೇಂದ್ರ ಮೋದಿಯವರು ಆಸ್ಕರ್ ಅವಾರ್ಡ್ ಪಡೆಯುವ ಸಾಧ್ಯತೆಗಳಿವೆ.

ಮಹಾಮೈತ್ರಿಕೂಟ ಎಂಬುದು ಮದುವೆಯ ಮೆರವಣಿಗೆ, ಇದರಲ್ಲಿ ವರನೇ ಇಲ್ಲ

- ಪುರುಷೋತ್ತಮ ಬಾಯ್ ರೂಪಾಲಾ, ಕೇಂದ್ರ ಸಚಿವ
ಇಲ್ಲದ ಮದುಮಗಳಿಗೆ ಎಲ್ಲರೂ ತಮ್ಮನ್ನು ತಾವು ವರ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಇನ್ನಷ್ಟು ಓ ಮೆಣಸೇ ಸುದ್ದಿಗಳು