varthabharthi

ಸಿನಿಮಾ

ನಟಿ ಸೋನಾಕ್ಷಿ ಸಿನ್ಹಾ ವಿರುದ್ಧ ಪ್ರಕರಣ ದಾಖಲು

ವಾರ್ತಾ ಭಾರತಿ : 25 Feb, 2019

ಮೊರಾದಬಾದ್, ಫೆ.25: ಕಾರ್ಯಕ್ರಮ ಆಯೋಜಕರೊಬ್ಬರನ್ನು ವಂಚಿಸಿದ ಆರೋಪದಲ್ಲಿ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಹಾಗು ಇತರ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.

ಬಹುಮಾನ ವಿತರಣಾ ಕಾರ್ಯಕ್ರಮಕ್ಕೆ ಸೋನಾಕ್ಷಿಯನ್ನು ಆಹ್ವಾನಿಸಲು ಕಂಪೆನಿಯೊಂದಕ್ಕೆ ತಾನು 24 ಲಕ್ಷ ರೂ. ನೀಡಿದ್ದೆ. ಸೋನಾಕ್ಷಿ ಕೂಡ ತಾನು ಆಗಮಿಸುವುದಾಗಿ ತಿಳಿಸಿದ್ದರು. ಆದರೆ ಕಾರ್ಯಕ್ರಮಕ್ಕೆ ಬಂದಿಲ್ಲ ಎಂದು ಕಳೆದ ವರ್ಷದ ನವೆಂಬರ್ 24ರಂದು ನೀಡಿದ ದೂರಿನಲ್ಲಿ ಕಾರ್ಯಕ್ರಮ ಆಯೋಜಕ ಪ್ರಮೋದ್ ಶರ್ಮಾ ಆರೋಪಿಸಿದ್ದಾರೆ.

ಮೊರಾದಬಾದ್ ನ ಶಿವಪುರಿಯವರಾದ ಪ್ರಮೋದ್ ತಾನು ಒಟ್ಟು 37 ಲಕ್ಷ ರೂ.ಗಳನ್ನು ಪಾವತಿಸಿದ್ದೇನೆ ಎಂದು ಆರೋಪಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)