varthabharthiಮಾಹಿತಿ - ಮಾರ್ಗದರ್ಶನ

ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

ವಾರ್ತಾ ಭಾರತಿ : 2 Mar, 2019

ವಿದ್ಯಾರ್ಥಿವೇತನ
(ಅರ್ಹತೆ ಆಧಾರಿತ):
ಎಸ್ಸೆಕ್ಸ್ ವಿಶ್ವವಿದ್ಯಾನಿಲಯದ ಸೆಪ್ಟಂಬರ್ 2019ರ ಅರ್ಹತಾ ವಿದ್ಯಾರ್ಥಿವೇತನ

ವಿವರ:
ಬ್ರಿಟನ್ ಮೂಲದ ಎಸ್ಸೆಕ್ಸ್ ವಿಶ್ವವಿದ್ಯಾನಿಲಯ ತನ್ನ ವಿವಿಧ ಪದವಿ ಮತ್ತು ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳಿಗೆ ವಿದ್ಯಾರ್ಥಿವೇತನವನ್ನು ನೀಡುತ್ತಿದ್ದು ಭಾರತದ ಶೈಕ್ಷಣಿಕವಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಅರ್ಹತೆ:
ಪದವಿಪೂರ್ವ ಕಾರ್ಯಕ್ರಮಕ್ಕಾಗಿ ಅರ್ಜಿದಾರರು 12ನೇ ತರಗತಿಯಲ್ಲಿ ಐಇಎಲ್‌ಟಿಎಸ್‌ನ ಪ್ರತಿ ವಿಷಯದಲ್ಲೂ 6.0 ಬ್ಯಾಂಡ್‌ನೊಂದಿಗೆ ಕನಿಷ್ಠ ಶೇ.80 ಅಂಕ ಪಡೆದಿರಬೇಕು. ಸ್ನಾತಕೋತ್ತರ ಪದವಿ ಕಾರ್ಯಕ್ರಮಕ್ಕೆ ಅರ್ಜಿದಾರರು ತಮ್ಮ ಪದವಿಯಲ್ಲಿ ಕನಿಷ್ಠ ಶೇ.55 ಅಂಕ ಮತ್ತು ಐಇಎಲ್‌ಟಿಎಸ್‌ನಲ್ಲಿ 6.5 ಬ್ಯಾಂಡ್ ಮತ್ತು ಪ್ರತಿ ವಿಭಾಗದಲ್ಲಿ 6.0 ಬ್ಯಾಂಡ್ ಪಡೆದಿರಬೇಕು. 12ನೇ ತರಗತಿಯಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಶೇ.75 ಅಂಕಗಳನ್ನು ಪಡೆದಿರುವ ಅರ್ಜಿದಾರರಿಗೆ ಐಇಎಲ್‌ಟಿಎಸ್ ಮನ್ನಾ ಮಾಡಲಾಗಿದೆ.
ನೆರವು:
 ಪದವಿ ವಿದ್ಯಾರ್ಥಿಗಳಿಗೆ 3000 ಪೌಂಡ್ ಮತ್ತು ಸ್ನಾತಕೋತ್ತರ ಪದವೀಧರರಿಗೆ 5,000 ಪೌಂಡ್ ನೀಡಲಾಗುವುದು. ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಒಂದು ವರ್ಷದವರೆಗಿನ ಇಂಟರ್ನ್‌ಶಿಪ್ ಆಯ್ಕೆಯನ್ನೂ ನೀಡಲಾಗುವುದು. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮಾರ್ಚ್ 31, 2019
ಅರ್ಜಿ: ಅರ್ಜಿಗಳನ್ನು ಆನ್‌ಲೈನ್ ಮೂಲಕ ಹಾಕಬೇಕು.
ಜಾಲತಾಣ: http://www.b4s.in/bharati/UOE4

********************************
 ವಿದ್ಯಾರ್ಥಿವೇತನ
(ಅರ್ಹತೆ ಮತ್ತು ಆದಾಯ ಆಧಾರಿತ):
ಭಜನ್‌ಲಾಲ್ ವಿದ್ಯಾರ್ಥಿವೇತನ 2019

ವಿವರ:
ಭಾರತೀಯ ಮತ್ತು ವಿದೇಶಿ ವಿಶ್ವವಿದ್ಯಾನಿಲಯಗಳಲ್ಲಿ ಪರಿಸರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಎಂಎಸ್ಸಿ, ಎಂಫಿಲ್ ಅಥವಾ ಪಿಎಚ್‌ಡಿ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಭಜನ್ ಜಾಗತಿಕ ಪರಿಣಾಮ ಪ್ರತಿಷ್ಠಾನ ಸಂಪೂರ್ಣ ಅಥವಾ ಭಾಗಶಃ ವಿದ್ಯಾರ್ಥಿವೇತನ ನೀಡುತ್ತಿದೆ.
ಅರ್ಹತೆ:
ಪರಿಸರ ಅಥವಾ ಸಂಬಂಧಿಸಿದ ವಿಷಯಗಳಲ್ಲಿ ಪದವಿ ಅಥವಾ ಪರಿಸರ ವ್ಯವಸ್ಥಾಪನೆ, ಅರ್ಥಶಾಸ್ತ್ರ, ನೈಸರ್ಗಿಕ ಸಂಪನ್ಮೂಲ ವ್ಯವಸ್ಥಾಪನೆ, ಪರಿಸರ ನೀತಿ ಮತ್ತು ವ್ಯವಸ್ಥಾಪನೆ, ಸಮರ್ಥನೀಯ ಅಭಿವೃದ್ಧಿ, ಪರಿಸರ ನೀತಿ ಮತ್ತು ನ್ಯಾಯ, ಪರಿಸರ ಕಾನೂನು ಮತ್ತು ಸಿದ್ಧಾಂತ, ಪರಿಸರ ಆರ್ಥಿಕತೆ, ಇತಿಹಾಸ, ಪರಿಸರ ರಸಾಯನಶಾಸ್ತ್ರ, ಟಾಕ್ಸಿಕಾಲಜಿ ಇತ್ಯಾದಿ ವಿಷಯಗಳಲ್ಲಿ ಭಾರತ ಅಥವಾ ವಿದೇಶಿ ವಿಶ್ವವಿದ್ಯಾನಿಲಯಗಳಲ್ಲಿ ಕಲಿಯಲು ದಾಖಲೆಯ ಅವಕಾಶ ಪಡೆದಿರುವ ವಿದ್ಯಾರ್ಥಿಗಳು ಅರ್ಜಿ ಹಾಕಬಹುದು.
ನೆರವು:
ಆಯ್ದ ವಿದ್ಯಾರ್ಥಿಗಳಿಗೆ ಸಂಪೂರ್ಣ ಅಥವಾ ಭಾಗಶಃ ಟ್ಯೂಶನ್ ಶುಲ್ಕ, ಜೀವನವೆಚ್ಚ, ಪ್ರಯಾಣ ಮತ್ತು ಸಂಶೋಧನಾ ವೆಚ್ಚಗಳನ್ನು ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮಾರ್ಚ್ 31, 2019
ಅರ್ಜಿ: ಅರ್ಜಿಗಳನ್ನು ಆನ್‌ಲೈನ್ ಮೂಲಕ ಹಾಕಬೇಕು.
ಜಾಲತಾಣ: http://www.b4s.in/bharati/BLS3
*****************

ವಿದ್ಯಾರ್ಥಿವೇತನ
(ಅಂತರ್‌ರಾಷ್ಟ್ರೀಯ ಮಟ್ಟ):

ಸೈಂಟ್ ಜಾರ್ಜಸ್ ವಿಶ್ವವಿದ್ಯಾನಿಲಯದ ವೈದ್ಯಕೀಯ ವಿದ್ಯಾರ್ಥಿವೇತನ 2019
ವಿವರ:
ವೆಸ್ಟ್ ಇಂಡಿಸ್‌ನ ಗ್ರೆನಡಾದ ಸೇಂಟ್ ಜಾರ್ಜಸ್ ವಿಶ್ವವಿದ್ಯಾನಿಲಯ ಆಗಸ್ಟ್ 2019ರಿಂದ ತನ್ನ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮಕ್ಕೆ ವಿದ್ಯಾರ್ಥಿವೇತನ ನೀಡುತ್ತಿದೆ. ಉನ್ನತ ಪ್ರೌಢ ಶಿಕ್ಷಣ ಮುಗಿಸಿ ವೈದ್ಯ ಕೀಯ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳ ಐದು ವರ್ಷದ ಶಿಕ್ಷಣಕ್ಕೆ ನೆರವು ನೀಡಲಾಗುವುದು.
ಅರ್ಹತೆ:
ಅರ್ಜಿದಾರರು ಹನ್ನೆರಡನೇ ತರಗತಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರದಲ್ಲಿ ಕನಿಷ್ಠ ಶೇ.80 ಅಂಕಗಳನ್ನು ಪಡೆದಿರಬೇಕು. ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರದಲ್ಲಿ ವಿದ್ಯಾರ್ಥಿಗಳು ಎ ಮತ್ತು ಬಿ ಹಂತದ ಅಂಕ ಹೊಂದಿರಬೇಕು.
ನೆರವು:
1,00,000 ಡಾಲರ್ ಟ್ಯೂಶನ್ ಶುಲ್ಕ ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮಾರ್ಚ್ 31, 2019
ಅರ್ಜಿ: ಅರ್ಜಿಗಳನ್ನು ಆನ್‌ಲೈನ್ ಮೂಲಕ ಹಾಕಬೇಕು.
ಜಾಲತಾಣ: http://www.b4s.in/bharati/SGU2
********************
ವಿದ್ಯಾರ್ಥಿವೇತನ
(ಅರ್ಹತೆ ಆಧಾರಿತ):
ವಿದ್ಯಾರ್ಥಿವೇತನ: ರಾಷ್ಟ್ರೀಯ ಪ್ರವೇಶ ಸ್ಕ್ರೀನಿಂಗ್ ಪರೀಕ್ಷೆ (ನೆಸ್ಟ್) 2019

ವಿವರ:
ಮೂಲ ವಿಜ್ಞಾನದ ಕುರಿತ ಪರಮಾಣು ಇಂಧನ ಕೇಂದ್ರ ಇಲಾಖೆ, ಮುಂಬೈ ಮತ್ತು ರಾಷ್ಟ್ರೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ, ಭುವನೇಶ್ವರ ಯುವ ಸಂಶೋಧಕರು ತಮ್ಮ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಲು ಮತ್ತು ವಾರ್ಷಿಕ ವಿದ್ಯಾರ್ಥಿವೇತನ ಮತ್ತು ನೆರವಿನೊಂದಿಗೆ ವೈಜ್ಞಾನಿಕ ಸಂಶೋಧನೆಗಳನ್ನು ನಡೆಸಲು ಅವಕಾಶ ನೀಡುತ್ತಿದೆ.
ಅರ್ಹತೆ:
ಆಗಸ್ಟ್ 1, 1999ರ ನಂತರ ಜನಿಸಿದ ವಿದ್ಯಾರ್ಥಿಗಳು ಅರ್ಜಿ ಹಾಕಬಹುದು. ಎಸ್ಸಿ/ಎಸ್ಟಿ, ವಿಕಲಾಂಗರಿಗೆ ವಯಸ್ಸಿನಲ್ಲಿ ಐದು ವರ್ಷಗಳ ಸಡಿಲತೆ ಇದೆ. ಭಾರತದ ಯಾವುದೇ ಪರಿಗಣಿತ ಮಂಡಳಿಯಿಂದ ಹನ್ನೆರಡನೇ ತರಗತಿಯಲ್ಲಿ ಶೇ.60 ಅಂಕ ಪಡೆದ ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಹಾಗೂ ಶೇ.55 ಅಂಕ ಪಡೆದ ಎಸ್ಸಿ/ಎಸ್ಟಿ, ವಿಕಲಾಂಗ ವಿದ್ಯಾರ್ಥಿಗಳು ಅರ್ಜಿ ಹಾಕಬಹುದು. ಆದರೆ ನೆಸ್ಟ್ ಪರೀಕ್ಷೆಯಲ್ಲಿ ಅರ್ಹತಾ ರ್ಯಾಂಕ್ ಪಡೆಯಬೇಕು.
ನೆರವು:
ಆಯ್ದ ವಿದ್ಯಾರ್ಥಿಗಳಿಗೆ ವಾರ್ಷಿಕ 60,000ರೂ. ನೆರವು ನೀಡಲಾಗುವುದು ಮತ್ತು ಬೇಸಿಗೆಯ ಇಂಟರ್ನ್‌ಶಿಪ್‌ಗೆಂದು ವಾರ್ಷಿಕ 20,000ರೂ. ನೀಡಲಾಗುವುದು. ಅತ್ಯುತ್ತಮ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ಬಾಬಾ ಪರಮಾಣು ಸಂಶೋಧನಾ ಕೇಂದ್ರದ ತರಬೇತಿ ಕೇಂದ್ರದಲ್ಲಿ ನೇರ ಸಂದರ್ಶನದ ಅವಕಾಶ ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮಾರ್ಚ್ 11, 2019
ಅರ್ಜಿ: ಅರ್ಜಿಗಳನ್ನು ಆನ್‌ಲೈನ್ ಮೂಲಕ ಹಾಕಬೇಕು.
ಜಾಲತಾಣ: http://www.b4s.in/bharati/NES8
******************
ವಿದ್ಯಾರ್ಥಿವೇತನ
(ಪ್ರತಿಭೆ ಆಧಾರಿತ):
ಯೋಜನೆ ಆಧಾರಿತ ರಸಾಯನಶಾಸ್ತ್ರ ಶಿಕ್ಷಣ (ಪಿಒಸಿಇ) 2019

ವಿವರ:
ಯಾವುದೇ ವಿಜ್ಞಾನ ವಿಷಯದಲ್ಲಿ ಮೊದಲ ವರ್ಷದ ಬಿಎಸ್ಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ನಿರಂತರ ಮೂರು ವರ್ಷ 6-8 ವಾರಗಳ ಬೇಸಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಜವಾಹರಲಾಲ್ ನೆಹರೂ ಸುಧಾರಿತ ವೈಜ್ಞಾನಿಕ ಸಂಶೋಧನಾ ಕೇಂದ್ರ ಆಹ್ವಾನಿಸಿದೆ. ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ವಿದ್ಯಾರ್ಥಿಗಳಿಗೆ ರಸಾಯನಶಾಸ್ತ್ರದಲ್ಲಿ ಡಿಪ್ಲೊಮಾ ಪ್ರಮಾಣ ಪತ್ರ ನೀಡಲಾಗುವುದು.
ಅರ್ಹತೆ:
ಸದ್ಯ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಸಂಯೋಜನೆಯಲ್ಲಿ ಪ್ರಥಮ ವರ್ಷದ ಬಿಎಸ್ಸಿ ಕಲಿಯು ತ್ತಿರುವ ವಿದ್ಯಾರ್ಥಿಗಳು ಅರ್ಜಿ ಹಾಕಬಹುದು.
ನೆರವು:
ಮಾಸಿಕ 10,000ರೂ. ವಿದ್ಯಾರ್ಥಿವೇತನ ನೀಡಲಾಗುವುದು. ಪಿಒಸಿಇ ಕಾರ್ಯಕ್ರಮದಲ್ಲಿ ಅತ್ಯುತ್ತಮ ನಿರ್ವಹಣೆ ನೀಡಿದ ವಿದ್ಯಾರ್ಥಿಗಳಿಗೆ ಕೇಂದ್ರದಲ್ಲಿ ಎಂಎಸ್-ಪಿಎಚ್‌ಡಿಗೆ ದಾಖಲಾತಿ ನೀಡಲಾಗುವುದು. ಸಂದರ್ಶನದಲ್ಲಿ ತೃಪ್ತಿಕರ ನಿರ್ವಹಣೆ ತೋರಬೇಕಿರುವುದು ಅನಿವಾರ್ಯ.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮಾರ್ಚ್ 8, 2019
ಅರ್ಜಿ: ಅಂಚೆ ಮೂಲಕ ಅರ್ಜಿ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/POC1

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)