varthabharthi

ಓ ಮೆಣಸೇ

ಓ ಮೆಣಸೇ…

ವಾರ್ತಾ ಭಾರತಿ : 11 Mar, 2019
ಪಿ.ಎ.ರೈ

*ಕೇಂದ್ರ ಸರಕಾರ ಬುಲೆಟ್ ಯುದ್ಧ ಗೆದ್ದಾಯಿತು, ಇನ್ನು ಬ್ಯಾಲೆಟ್ ಸಮರ ಬಾಕಿ ಇದೆ

- ರಾಮ್ ವಿಲಾಸ್ ಪಾಸ್ವಾನ್, ಕೇಂದ್ರ ಸಚಿವ
ನಮ್ಮ ಯೋಧರನ್ನು ಬುಲೆಟ್‌ಗೆ ಬಲಿಕೊಟ್ಟವರಿಗಾಗಿ ಬ್ಯಾಲೆಟ್ ಹಿಡಿದು ಜನ ಕಾಯ್ತಾ ಇದ್ದಾರೆ.

---------------------

ನಾವು ಪಾನ್‌ಶಾಪ್ ಮುಂದೆ ಪಾನ್ ತಿನ್ನಲು ಹೋದರೂ ಪ್ರಧಾನಿ ಮೋದಿಯ ಸಭೆಗೆ ಸೇರಿದಷ್ಟು ಜನ ಸೇರುತ್ತಾರೆ

- ಲಾಲು ಪ್ರಸಾದ್ ಯಾದವ್, ಬಿಹಾರ ಮಾಜಿಮುಖ್ಯಮಂತ್ರಿ
ಜನ ಪಾನ್ ತಿಂದು ಉಗಿಯುವುದು ಮಾತ್ರ ಬಾಕಿ ಇದೆ.

---------------------

ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲೂ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು

- ಎನ್.ಮಹೇಶ್, ಶಾಸಕ
ಅಂದ ಹಾಗೆ ನಿಮ್ಮ ಪಕ್ಷ ಯಾವುದು?

---------------------
ಬಿಜೆಪಿಗೆ ಯಾರು ಬಂದರೂ ಸ್ವಾಗತವಿದೆ

- ಶೋಭಾ ಕರಂದ್ಲಾಜೆ, ಸಂಸದೆ
ಅಝರ್ ಮಸೂದ್ ಅಧಿಕೃತವಾಗಿ ಪಕ್ಷ ಸೇರಲು ಸಿದ್ದ್ಧನಿದ್ದಾನಂತೆ.

---------------------

ಮೋದಿ ಸರಕಾರದ ದೃಢ ನಿರ್ಧಾರದಿಂದ ಗಂಗಾನದಿ ಶುದ್ಧಗೊಂಡಿದೆ

- ಪಿ. ಚಿದಂಬರಂ, ಮಾಜಿ ಕೇಂದ್ರ ಸಚಿವ
ಗಂಗಾ ನದಿಯ ಹೆಸರಿನಲ್ಲಿ ಖಜಾನೆಯನ್ನು ಗುಡಿಸಿ ಶುದ್ಧಿ ಮಾಡಿದ್ದಾರಂತೆ.

---------------------

ಯುಪಿಎ ಭಯಾನಕ ಪ್ರತಿಪಕ್ಷವಾಗಿ ಕಾರ್ಯನಿರ್ವಹಿಸುತ್ತಿದೆ

- ಅರುಣ್‌ಜೇಟ್ಲಿ, ಕೇಂದ್ರ ಸಚಿವ
ಆಡಳಿತ ಪಕ್ಷಕ್ಕೆ ಭಯ ಹುಟ್ಟಿಸುತ್ತಿರುವಂತಿದೆ.

---------------------
ರಾಜಕಾರಣದಲ್ಲಿ ಸರಳ, ಸಜ್ಜನ ರಾಜಕಾರಣಿಗಳನ್ನು ನೆನಪಿಸಿಕೊಳ್ಳುತ್ತಿರಬೇಕು

- ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ
ಸರಳ ಸಜ್ಜನರೆಲ್ಲ ರಾಜಕೀಯಕ್ಕೆ ಇತ್ತೀಚೆಗೆ ಬರುವುದು ನಿಲ್ಲಿಸಿದ್ದಾರೆ.

---------------------
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಿಂದೂ ಅಲ್ಲ

- ಪ್ರೊ. ಕಾಂಚ ಐಲಯ್ಯ, ಹಿರಿಯ ಚಿಂತಕ
ಭಾರತೀಯ ಹೌದೋ, ಅಲ್ಲವೋ ಎನ್ನುವುದರ ಕುರಿತಂತೆ ರಕ್ತ ಪರೀಕ್ಷೆ ನಡೆಸಬೇಕಾಗಿದೆ.

---------------------

ನಾಯಿ, ಮಂಗಗಳನ್ನೂ ಸಾಕಲು ಯೋಗ್ಯತೆ ಇಲ್ಲದವರು ಇಂದು ಕಂಬಳದ ವಿರುದ್ಧ ಮಾತನಾಡುತ್ತಿದ್ದಾರೆ

- ಸದಾನಂದಗೌಡ, ಕೇಂದ್ರ ಸಚಿವ
ನಿಮ್ಮ ಪಕ್ಷದೊಳಗೆ ನೀವು ಅವುಗಳನ್ನೇ ಸಾಕುತ್ತಿರುವುದು ಜನರಿಗೆ ಗೊತ್ತಿದೆ.

---------------------

ಐಎಎಸ್ ಅಧಿಕಾರಿಗಳ ಮಕ್ಕಳು ಐಎಎಸ್, ಡಾಕ್ಟರ್ ಮಕ್ಕಳು ಡಾಕ್ಟರ್ ಆಗುವಂತೆ ರಾಜಕಾರಣಿಗಳ ಮಕ್ಕಳು ರಾಜಕಾರಣ ಪ್ರವೇಶಿಸುವುದರಲ್ಲಿ ತಪ್ಪೇನಿದೆ

- ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ
  ಐಎಎಸ್ ಅಧಿಕಾರಿಯಾಗಬೇಕಾದರೆ ಪರೀಕ್ಷೆ ಪಾಸು ಮಾಡಬೇಕು, ರಾಜಕೀಯಕ್ಕೆ ಪ್ರವೇಶಿಸಲು ಆ ಥರದ ಪರೀಕ್ಷೆಯಿದೆಯೇ?

---------------------

ಹತ್ತು ಗುಳ್ಳೆನರಿಗಳು ಜತೆಯಾದರೂ ಒಂದು ಸಿಂಹ(ಮೋದಿ)ವನ್ನ್ನು ಬೇಟೆಯಾಡಲು ಸಾಧ್ಯವಿಲ್ಲ

- ಸುಶೀಲ್‌ಕುಮಾರ್ ಮೋದಿ, ಬಿಹಾರ ಉಪಮುಖ್ಯಮಂತ್ರಿ
ಅವರು ಗುಳ್ಳೆನರಿಗಳಾದರೆ ಇದು ಸಿಂಹವಲ್ಲ, ನೀಲಿ ನರಿ.

---------------------

ನನಗೆ ಮೂರು ಬಾರಿ ಮುಖ್ಯಮಂತ್ರಿಯಾಗುವ ಅವಕಾಶ ತಪ್ಪಿದ್ದು ನಿಜ

- ಡಾ.ಜಿ.ಪರಮೇಶ್ವರ್, ಉಪ ಮುಖ್ಯಮಂತ್ರಿ
ಒಂದು ಬಾರಿ ಶಾಸಕನಾಗುವ ಅವಕಾಶವೇ ತಪ್ಪಿತ್ತಲ್ಲ?

---------------------
ಜನರಲ್ಲಿ ಸುಪ್ತವಾಗಿರುವ ದೇಶಭಕ್ತಿ ಕೆಲ ವಿಶೇಷ ಸಂದರ್ಭದಲ್ಲಿ ಜಾಗೃತವಾಗುತ್ತದೆ

- ಸಿ.ಟಿ.ರವಿ, ಶಾಸಕ

ನಿಮ್ಮದು ದೇಶಭಕ್ತಿಯಲ್ಲ, ದ್ವೇಷ ಭಕ್ತಿ.

---------------------

ರಾಜ್ಯ ಸರಕಾರದ ಪಾಪದ ಕೊಡ ತುಂಬಿದೆ

- ಶ್ರೀರಾಮುಲು, ಶಾಸಕ
ದುಡ್ಡಿನಿಂದ ತುಂಬಿದೆ ಎಂದು ಹೇಳುತ್ತೀರಾ?

---------------------
ಸೇನೆಯ ದಾಳಿ ಶಂಕಿಸುವುದು ರಾಷ್ಟ್ರ ವಿರೋಧಿ

- ನಳಿನ್‌ಕುಮಾರ್ ಕಟೀಲು, ಸಂಸದ
  ಪಂಪ್‌ವೆಲ್ ಓವರ್ ಬ್ರಿಜ್‌ನ ಕುರಿತಂತೆ ಶಂಕಿಸಿದರೆ ಅದೂ ದೇಶವಿರೋಧಿಯೇ?

---------------------

ಲೋಕಸಭೆ ಚುನಾವಣೆ ಮುಗಿಯುವವರೆಗೂ ರಾಮ ಮಂದಿರ ಚರ್ಚೆ ಇಲ್ಲ

- ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ
ಯಾರು ಗೆಲ್ಲುತ್ತಾರೆ ಎನ್ನುವುದನ್ನು ಆಧರಿಸಿ ಚರ್ಚೆ ನಡೆಸುವ ಉದ್ದೇಶ ಇರಬೇಕು.

---------------------
 
ಾಂಗ್ರೆಸ್‌ನವರು ಅವರ ಪಕ್ಷದಲ್ಲಿ ಯಾರಿಗಾದರೂ ಮಕ್ಕಳಾಗದಿದ್ದರೆ ಬಿಜೆಪಿಗೆ ಬೈತಾರೆ

- ಅರವಿಂದ ಲಿಂಬಾವಳಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ
ಮೋದಿಗೆ ಮಕ್ಕಳಾಗದೇ ಇರುವುದಕ್ಕೆ ನೀವು ಯಾರನ್ನು ಬೈತೀರಿ ಎನ್ನುವುದನ್ನು ವಿವರಿಸಬಹುದಾ?

---------------------

ದೇಶದಲ್ಲಿ ಜನರ ಮೂತ್ರ(ಯೂರಿನ್) ಸಂಗ್ರಹಿಸಿದರೆ ವಿದೇಶದಿಂದ ಯೂರಿಯಾ ಆಮದು ಮಾಡಿಕೊಳ್ಳುವುದು ಕೊನೆಯಾಗಲಿದೆ - ನಿತಿನ್‌ ಗಡ್ಕರಿ, ಕೇಂದ್ರ ಸಚಿವ
ನಿಮ್ಮನ್ನು ಮೂತ್ರ ಖಾತೆಯ ಸಚಿವನನ್ನಾಗಿ ಮಾಡುವುದೇ ವಾಸಿ.

---------------------

ಮಕ್ಕಳು, ಮರಿಮಕ್ಕಳ ಭವಿಷ್ಯಕ್ಕೆ ಬೆಲೆ ಕೊಡುವ ರಾಜಕಾರಣಿ ನಾನಲ್ಲ

- ಪ್ರತಾಪಸಿಂಹ, ಸಂಸದ

ಸದ್ಯಕ್ಕೆ ಬಿಜೆಪಿಯೊಳಗೆ ನಿಮ್ಮ ಭವಿಷ್ಯವನ್ನು ಪರೀಕ್ಷೆ ಮಾಡಿಸಿಕೊಳ್ಳಿ.

---------------------

ದೇವರು ನಡೆದಾಡಿದ ಪವಿತ್ರಭೂಮಿ ಭಾರತ

- ಪ್ರಭಾಕರ ಭಟ್, ಆರೆಸ್ಸೆಸ್ ಮುಖಂಡ
ಹಾಗೆಯೇ ಕೆಲವು ದೆವ್ವಗಳು ನಡೆದಾಡಿರುವ ಕುಖ್ಯಾತಿಯೂ ಇದೆ.

---------------------

ನಾನು ಹುಟ್ಟು ಹೋರಾಟಗಾರ

- ಮಲ್ಲಿಕಾರ್ಜುನ ಖರ್ಗೆ, ಸಂಸದ
ಹುಟ್ಟುವುದಕ್ಕಾಗಿಯೇ ಹೋರಾಟ ಮಾಡಿದ್ದೀರಿ ಎಂದು ಕಾಣುತ್ತದೆ.

---------------------

ನಿಖಿಲ್ ರಾಜಕೀಯಕ್ಕೆ ಬರುವುದು ನಮ್ಮ ಕುಟುಂಬಕ್ಕೆ ಇಷ್ಟ ಇರಲಿಲ್ಲ

- ಅನಿತಾ ಕುಮಾರಸ್ವಾಮಿ, ಶಾಸಕಿ
ತಂದೆಗೆ ಇಷ್ಟವಿಲ್ಲದಿರುವುದನ್ನು ಮಾಡುವುದು ನಿಮ್ಮ ಕುಟುಂಬದ ಹೆಚ್ಚುಗಾರಿಕೆಯಿರಬೇಕು.

---------------------
ರಾಷ್ಟ್ರದಾದ್ಯಂತ ಮೋದಿ ಅಲೆ ಸುನಾಮಿಯಂತೆ ಎದ್ದಿದೆ

-ಪಿ.ಮುರಳೀಧರರಾವ್, ರಾಜ್ಯ ಬಿಜೆಪಿ ಉಸ್ತುವಾರಿ
ಹೌದು, ಆ ಅಲೆಯಲ್ಲಿ ದೇಶದ ಆರ್ಥಿಕತೆ ಸರ್ವನಾಶವಾಗಿದೆ.

---------------------

ನಾನು ಮತ್ತು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಕ್ಕ-ಬುಕ್ಕರಿದ್ದಂತೆ

- ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ
ಡಿಕೆಶಿಯವರು ವಿದ್ಯಾರಣ್ಯ ಮಹರ್ಷಿ ಇರಬೇಕು 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಇನ್ನಷ್ಟು ಓ ಮೆಣಸೇ ಸುದ್ದಿಗಳು