varthabharthi

ಗಲ್ಫ್ ಸುದ್ದಿ

ದುಬೈ: ಮಾ. 18ರಂದು ‘ವಾರ್ಷಿಕ ಆರೋಗ್ಯ ಪ್ರಶಸ್ತಿ ಪ್ರದಾನ 2019’

ವಾರ್ತಾ ಭಾರತಿ : 11 Mar, 2019

ದುಬೈ, ಮಾ. 11: ವಲಯದ ಆರೋಗ್ಯ ಕ್ಷೇತ್ರದ ಅತ್ಯಂತ ದೊಡ್ಡ ಹಾಗೂ ಅತ್ಯಂತ ಸಮಗ್ರ ವಾರ್ಷಿಕ ಪ್ರಶಸ್ತಿಯಾಗಿರುವ ‘ವಾರ್ಷಿಕ ಆರೋಗ್ಯ ಪ್ರಶಸ್ತಿ ಪ್ರದಾನ 2019’ ಸಮಾರಂಭವು ದುಬೈಯ ಗ್ರಾಂಡ್ ಹ್ಯಯಾಟ್‌ನಲ್ಲಿ ಮಾರ್ಚ್ 18ರಂದು ನಡೆಯಲಿದೆ.

ಇದು ಮೂರನೇ ಪ್ರಶಸ್ತಿಪ್ರದಾನ ಸಮಾರಂಭವಾಗಿದ್ದು, ಈ ಬಾರಿ ಆರೋಗ್ಯ ಕ್ಷೇತ್ರದಲ್ಲಿ ಹೊಸ ದಾರಿಯನ್ನು ಆವಿಷ್ಕರಿಸಿದ ಸಾಧಕರು, ಶ್ರೇಷ್ಠ ಮುಂದಾಳುಗಳು ಮತ್ತು ವೃತ್ತಿಪರರನ್ನು ಗೌರವಿಸಲಾಗುವುದು.

ಅತಿ ಗಣ್ಯ ವ್ಯಕ್ತಿಗಳು, ಅರಬ್, ಬಾಲಿವುಡ್ ಮತ್ತು ಪಾಕಿಸ್ತಾನಿ ಖ್ಯಾತನಾಮರು ಸಮಾರಂಭದಲ್ಲಿ ಭಾಗವಹಿಸುವರು.

ಯುಎಇ ಆರೋಗ್ಯ ಕ್ಷೇತ್ರದಲ್ಲಿರುವ ಸುಮಾರು 600 ವೃತ್ತಿಪರರು ಮತ್ತು ಸಂಘಟನೆಗಳಿಂದ ಸುಮಾರು 600 ನಾಮನಿರ್ದೇಶನಗಳನ್ನು ಸ್ವೀಕರಿಸಲಾಗಿದೆ. ಇದು ಕಳೆದ ವರ್ಷಗಳಿಗೆ ಹೋಲಿಸಿದರೆ ತುಂಬಾ ಅಧಿಕವಾಗಿದೆ.

ದುಬೈ ಆರೋಗ್ಯ ಪ್ರಾಧಿಕಾರದ ಅಧ್ಯಕ್ಷ ಹಾಗೂ ಮಹಾನಿರ್ದೇಶಕ ಹುಮೈದ್ ಅಲ್ ಕುತಮಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಎಮಿರೇಟ್‌ನ ಇಂಟರ್‌ನೆಟ್ ತಾರೆ ಖಾಲಿದ್ ಅಲ್ ಅಮೆರಿ, ಮಾಜಿ ವಿಶ್ವ ಸುಂದರಿ ಮಾನುಶಿ ಚಿಲ್ಲಾರ್, ಬಾಲಿವುಡ್ ತಾರೆ ಸೋನು ಸೂದ್, ಸಾಮಾಜಿಕ ಮಾಧ್ಯಮದ ತಾರೆಗಳಾದ ಸಲಾಮಾ ಮುಹಮ್ಮದ್, ಜುಮಾನಾ ಖಾನ್, ಅಜ್ಮಲ್ ಖಾನ್ ಮತ್ತು ಪರ್ಹಾನಾ ಬೋಡಿ ಹಾಗೂ ವಿಶ್ವಸುಂದರಿ ಈಜಿಪ್ಟ್ 2018 ಮೊನಿ ಹೆಲಾಲ್ ಭಾಗವಹಿಸುವರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)