varthabharthi

ರಾಷ್ಟ್ರೀಯ

ಚುನಾವಣಾ ರಾಜಕೀಯಕ್ಕೆ ಶೆಹ್ಲಾ ರಶೀದ್: ಪಕ್ಷ ಯಾವುದು ಗೊತ್ತಾ?

ವಾರ್ತಾ ಭಾರತಿ : 13 Mar, 2019

ಹೊಸದಿಲ್ಲಿ, ಮಾ.13: ಜೆಎನ್ ಯು ವಿದ್ಯಾರ್ಥಿ ನಾಯಕಿ, ಹೋರಾಟಗಾರ್ತಿ ಶೆಹ್ಲಾ ರಶೀದ್ ಶೀಘ್ರದಲ್ಲೇ ಅಸ್ತಿತ್ವಕ್ಕೆ ಬರಲಿರುವ ಮಾಜಿ ಐಎಎಸ್ ಅಧಿಕಾರಿ ಶಾಹ್ ಫೈಝಲ್ ರ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂದು theprint.in ವರದಿ ಮಾಡಿದೆ.

“ಶೀಘ್ರದಲ್ಲೇ ರಾಜಕೀಯ ಪಕ್ಷ ಸ್ಥಾಪಿಸಲಿರುವ ಶಾ ಫೈಝಲ್ ಜೊತೆ ಶೆಹ್ಲಾ ರಶೀದ್ ಕೈಜೋಡಿಸಲಿದ್ದಾರೆ. ಪಕ್ಷದ ಕೋರ್ ತಂಡದಲ್ಲಿ ಶೆಹ್ಲಾ ಪ್ರಮುಖ ಸ್ಥಾನ ಪಡೆಯಲಿದ್ದಾರೆ. ಕೆಲವು ತಿಂಗಳುಗಳಿಂದ ಶೆಹ್ಲಾ ಫೈಝಲ್ ಜೊತೆಗೆ ನಿಕಟ ಸಂಪರ್ಕದಲ್ಲಿದ್ದುಕೊಂಡು ಕೆಲಸ ಮಾಡುತ್ತಿದ್ದಾರೆ. ಪಕ್ಷ ಸ್ಥಾಪನೆಯ ನಿರ್ಧಾರ ಕೈಗೊಳ್ಳುವ ಹಂತದಲ್ಲೂ ಅವರು ಜೊತೆಗಿದ್ದರು” ಎಂದು ಮೂಲಗಳು ತಿಳಿಸಿರುವುದಾಗಿ theprint.in ವರದಿ ಮಾಡಿದೆ.

ಶಾ ಫೈಝಲ್ ರ ಪಕ್ಷದಿಂದಲೇ ಶೆಹ್ಲಾ ರಶೀದ್ ರಾಜ್ಯ ಅಥವಾ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)