varthabharthi

ಗಲ್ಫ್ ಸುದ್ದಿ

ಜಿದ್ದಾ: ಐಎಫ್ಎಫ್ ಕುಟುಂಬ ಸಮ್ಮಿಲನ 'ಸಂಭ್ರಮ-2019'

ವಾರ್ತಾ ಭಾರತಿ : 13 Mar, 2019

ಜಿದ್ದಾ:  ಇಂಡಿಯಾ ಫ್ರೆಟರ್ನಿಟಿ ಫೋರಂ ಕರ್ನಾಟಕ ಚಾಪ್ಟರ್ ಜಿದ್ದಾ ಇದರ ವತಿಯಿಂದ ಫ್ರೆಟರ್ನಿಟಿ ಫೆಸ್ಟ್ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಂಗವಾಗಿ ಬೃಹತ್ ಕುಟುಂಬ ಸಮ್ಮಿಲನ 'ಸಂಭ್ರಮ 2019' ಇತ್ತೀಚಿಗೆ ಜಿದ್ದಾದ ಮದ್ಹಲ ಸಭಾಂಗಣದಲ್ಲಿ ನಡೆಯಿತು. 

ಇಂಡಿಯಾ ಫ್ರೆಟರ್ನಿಟಿ ಫೋರಂ ರೀಜನಲ್ ಅಧ್ಯಕ್ಷ  ಫಯಾಝುದ್ದೀನ್ ಚೆನ್ನೈ ಕಾರ್ಯಕ್ರಮದ ಉದ್ಘಾಟಿಸಿದರು. ಐಎಫ್ಎಫ್ ಜಿಲ್ಲಾ ಸಮಿತಿ ಸದಸ್ಯ ಅಬ್ದುಲ್ ಮಜೀದ್ ವಿಟ್ಲ ಮಾತನಾಡಿ, ಪ್ರಸಕ್ತ ಭಾರತದ ಸ್ಥಿತಿಗತಿಗಳನ್ನು ವಿವರಿಸಿದರು ಮತ್ತು ಕುಟುಂಬ ಸಮ್ಮಿಲನದ ಮಹತ್ವವನ್ನು ತಿಳಿಸಿದರು.

ಐಎಫ್ಎಫ್ ಕರ್ನಾಟಕ ಚಾಪ್ಟರ್ ಅಧ್ಯಕ್ಷ  ಹಾರಿಸ್ ಗೂಡಿನಬಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪತ್ರಕರ್ತ ಆರೀಫ್ ಕಲ್ಕಟ್ಟ ರನ್ನು ಐಎಫ್ಎಫ್ ವತಿಯಿಂದ ಸನ್ಮಾನಿಸಲಾಯಿತು.

ಮುಖ್ಯ ಅಥಿತಿಗಳಾಗಿ ಲುಲು ಹೈಪರ್ ಮಾರ್ಕೆಟ್ ಜನರಲ್ ಮ್ಯಾನೇಜರ್ ಮುಹಮ್ಮದ್ ಅಶ್ರಫ್ ಕೆಸಿ ರೋಡ್, ಇಂಡಿಯನ್ ಸೋಶಿಯಲ್ ಫೋರಂ ಪಶ್ಚಿಮ ವಲಯ ಕರ್ನಾಟಕ ಚಾಪ್ಟರ್ ಅಧ್ಯಕ್ಷ ಮುಹಮ್ಮದ್ ಅಲಿ ಮೂಳೂರ್, ಐಎಫ್ಎಫ್ ಕಾರ್ಯದರ್ಶಿ ಆರಿಫ್ ಬಜ್ಪೆ, ಉದ್ಯಮಿ ಲಿಯಾಖತ್ ಮಾಸ್ಟರ್ ಟ್ರೇಡರ್ಸ್ ಆ್ಯಂಡ್ ಟ್ರಾನ್ಸ್ಪೋರ್ಟ್ ಎನ್ ಸಿಎಂಎಸ್ ಜನರಲ್ ಮ್ಯಾನೇಜರ್ ರಹೀಂ ಬಜ್ಪೆ, ಸಾದಾ ಜನರಲ್ ಸೆಕ್ರೇಟರಿ ಐಪಿಡಬ್ಲ್ಯೂಎಫ್ ಕಮರ್, ಹಿದಾಯ ಫೌಂಡೇಶನ್ ಅಧ್ಯಕ್ಷ ಜಾವೇದ್ ಕಲ್ಲಡ್ಕ, ಐಎಫ್ಎಫ್ ಜಿದ್ದಾ ವಲಯ ಅಧ್ಯಕ್ಷ ಮುದ್ದಸ್ಸರ್ ಅಬ್ದುಲ್, ಐಎಫ್ಎಫ್ ಕರ್ನಾಟಕ ಚಾಪ್ಟರ್ ಅಧ್ಯಕ್ಷ ಹಾರಿಸ್ ಗೂಡಿನಬಳಿ, ಫಿರೋಝ್ ಕಲ್ಲಡ್ಕ, ಮುತ್ತಲಿಬ್ ಪಡುಬಿದ್ರೆ, ಶಾಕಿರ್ ಹಕ್ ನೆಲ್ಯಾಡಿ‌ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕ್ರೀಡೆಗಳು ನಡೆಸಲಾಯಿತು. ವಿಶೇಷವಾಗಿ ಲುಲು ಹೈಪರ್ ಮಾರ್ಕೆಟ್ ಪ್ರಾಯೋಜಕತ್ವದಲ್ಲಿ ನಡೆದ ಮಹಿಳೆಯ ಡೆಸರ್ಟ್ ಫುಡ್ ಸ್ಪರ್ಧೆ ಕಾರ್ಯಕ್ರಮಕ್ಕೆ ಮೆರುಗನ್ನು ನೀಡಿತು. ಡೆಸರ್ಟ್ ಫುಡ್ ತೀರ್ಪುಗಾರರಾಗಿ ಲುಲು ಹೈಪರ್ ಮಾರ್ಕೆಟ್ ನ ಚೀಫ್ ಚೆಫ್ ಹನೀಫ್ ಕೆಎಂ ಹಾಗು ಸಹ ತೀರ್ಪುಗಾರರಾಗಿ ಬಾಸ್ಕಿನ್ ರಾಬಿನ್ಸ್ ನ ದಾನಿಶ್ ಸಹಕರಿಸಿದರು.

ಹನೀಫ್ ಮತ್ತು ದಾನಿಶ್ ರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)