varthabharthi

ರಾಷ್ಟ್ರೀಯ

ಭೂ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಗೆ ಪರಮ ವಿಶಿಷ್ಠ ಸೇವಾ ಪದಕ

ವಾರ್ತಾ ಭಾರತಿ : 14 Mar, 2019

ಹೊಸದಿಲ್ಲಿ, ಮಾ.14: ಭೂ ಸೇನೆಯ ಮುಖ್ಯಸ್ಥ ಬಿಪಿನ್ ರಾವತ್ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಗುರುವಾರ ಸೇನೆಯ ಉನ್ನತ ಪುರಸ್ಕಾರ  ಪರಮ ವಿಶಿಷ್ಠ ಸೇವಾ ಪದಕ ಪ್ರದಾನ ಮಾಡಿದರು.

ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ 12 ಸೇನಾಧಿಕಾರಿಗಳು ಹಾಗೂ 5 ಯೋಧರಿಗೆ ಮಿಲಿಟರಿ ಪದಕ ನೀಡಿ ಗೌರವಿಸಲಾಯಿತು.

ಹುತಾತ್ಮ ಯೋಧರಾದ ಆರ್ಮಿ ಸಿಪಾಯಿ ವರ್ಮಾ ಪಾಲ್ ಸಿಂಗ್ , ಸಿಆರ್ ಪಿಎಫ್ ಜವಾನ ರಾಜೇಂದ್ರ ನೈನ್ ಮತ್ತು ರವೀಂದ್ರ ಬಾಬನ್ ಧನವಾಡೆಗೆ  ದೇಶದ ಎರಡನೇ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ 'ಕೀರ್ತಿಚಕ್ರ ವನ್ನು ಮರಣೋತ್ತರವಾಗಿ ನೀಡಲಾಗಿದೆ.  20 ಜಾಟ್ ರೆಜಿಮೆಂಟ್ ನ ಮೇಜರ್  ತುಷಾರ್ ಗೌಬ  ಅವರಿಗೆ ಕೀರ್ತಿ ಚಕ್ರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.  

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)