varthabharthi

ಕರಾವಳಿ

ತೆಂಗಿನ ಮರದಿಂದ ಬಿದ್ದು ಸಾವು

ವಾರ್ತಾ ಭಾರತಿ : 14 Mar, 2019

ಕೋಟ, ಮಾ.14: ತೆಂಗಿನ ಮರದಿಂದ ಕಾಯಿ ಕೊಯ್ದು ಇಳಿಯುತಿದ್ದಾಗ ಅಕಸ್ಮಿಕವಾಗಿ ಆಯತಪ್ಪಿ ಮರದಿಂದ ಕೆಳಗೆ ಬಿದ್ದ ವ್ಯಕತಿಯೊಬ್ಬರು ಮೃತಪಟ್ಟ ಘಟನೆ ಬುಧವಾರ ಅಪರಾಹ್ನ ಮಣೂರು ಗ್ರಾಮದಿಂದ ವರದಿಯಾಗಿದೆ.

ಬೇಳೂರು ಗ್ರಾಮದ ಗುಳ್ಳಾಡಿಯ ನಾಗರಾಜ (50) ಎಂಬವರು ಅಪರಾಹ್ನ 12:30ರ ಸುಮಾರಿಗೆ ಕಾಸನಗುಂದು ರಮೇಶ್ ಮಧ್ಯಸ್ಥರ ಮನೆಯ ತೆಂಗಿನ ಮರದಿಂದ ತೆಂಗಿನ ಕಾಯಿಗಳನ್ನು ಕೊಯ್ದು ಇಳಿಯುತಿದ್ದಾಗ ಅಕಸ್ಮಿಕವಾಗಿ ಆಯತಪ್ಪಿ ನೆಲಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಕೊಂಡೊಯ್ಯುವಷ್ಟರಲ್ಲಿ ಮೃತಪಟ್ಟರೆಂದು ಹೇಳಲಾಗಿದೆ.

ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)