ಹನಿಟ್ರಾಪ್ ಮಾದರಿ ಸುಲಿಗೆಗೆ ಯತ್ನ: ಇಬ್ಬರ ಬಂಧನ
ಬೆಂಗಳೂರು, ಮಾ.14: ಪೊಲೀಸ್ ಪೇದೆಗೆ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹನಿಟ್ರ್ಯಾಪ್ ಮಾದರಿಯಲ್ಲಿ ಬೆದರಿಸಿ ಸುಲಿಗೆಗೆ ಯತ್ನ ಮಾಡಿದ ಇಬ್ಬರು ಆರೋಪಿಗಳನ್ನು ಕಾಟನ್ ಪೇಟೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಯುವತಿ ಕಳೆದ ಆರು ತಿಂಗಳ ಹಿಂದೆ ವಿಜಯಪುರದ ಪೇದೆ ಮಹಾದೇವ್ಗೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದಳು. ಹಣದ ಆಸೆಗಾಗಿ ಮಹಾದೇವನನ್ನು ಪ್ರೀತಿಸುವ ನಾಟಕವಾಡಿ ಪರಸ್ಪರ ಒಪ್ಪಿ ಲೈಂಗಿಕ ಸಂಬಂಧವನ್ನೂ ಹೊಂದಿದ್ದರು. ಆದರೆ, ಆರೋಪಿ ಯುವತಿ, ಸುನಿಲ್ ಎಂಬ ಮತ್ತೊಬ್ಬ ಯುವಕನೊಂದಿಗೂ ಸಂಬಂಧ ಹೊಂದಿದ್ದು, ಆತನನ್ನು ಪ್ರಾಮಾಣಿಕವಾಗಿ ಲವ್ ಮಾಡುತ್ತಿದ್ದಳು ಎನ್ನಲಾಗಿದೆ. ಪೇದೆ ಮಹಾದೇವ್ನಿಂದ ಹಣ ಪಡೆದು ಮಜಾ ಮಾಡುತ್ತಿದ್ದಳು ಎನ್ನಲಾಗಿದೆ.
ಇತ್ತೀಚೆಗೆ ಯುವತಿ ಮಹಾದೇವನನ್ನು ವಿಜಯಪುರದಿಂದ ಬೆಂಗಳೂರಿಗೆ ಕರೆಸಿದ್ದಳು. ಈ ವೇಳೆ ಮಹಾದೇವ್ ಮೈಸೂರು ರೋಡ್ನ ಸ್ನೇಹಿತನ ಪೊಲೀಸ್ ಕ್ವಾಟ್ರಸ್ನಲ್ಲಿ ಯುವತಿಯನ್ನು ಭೇಟಿಯಾಗಿದ್ದ. ಈ ವೇಳೆ ಒಂದು ಲಕ್ಷ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾಳೆ.
ಮಹಾದೇವ್ ಕೊಡಲು ಆಗುವುದಿಲ್ಲ ಎಂದಿದ್ದಾನೆ. ಆಗ ಮಹಾದೇವ್ ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸುತ್ತಿದ್ದಾನೆ ಎಂದು ಪ್ರಿಯಕರ ಸುನಿಲ್ ಗೆ ಸಂದೇಶ ರವಾನಿಸಿ ಲೊಕೇಶನ್ ಸಹ ಶೇರ್ ಮಾಡಿದ್ದಳು. ಪ್ರಿಯಕರ ಕಾಟನ್ ಪೇಟೆ ಪೊಲೀಸರೊಂದಿಗೆ ಅವರಿದ್ದ ರೂಮ್ ಗೆ ಬಂದಾಗ ಇಬ್ಬರೂ ನಗ್ನವಾಗಿ ಸಿಕ್ಕಿಬಿದ್ದಿದ್ದರು. ಕಾಟನ್ ಪೇಟೆ ಠಾಣೆಗೆ ಕರೆತಂದಾಗ ಯುವತಿ ಹಾಗೂ ಸುನೀಲ್ ದುಡ್ಡು ಮಾಡುವ ಉದ್ದೇಶದಿಂದ ಪೇದೆ ಮಹಾದೇವ್ಗೆ ವಂಚನೆ ಮಾಡಿರುವ ವಿಚಾರ ಬಯಲಾಗಿದೆ. ಮತ್ತೊಂದೆಡೆ ಕಾಟನ್ ಪೇಟೆ ಪೊಲಿಸರು ಪೇದೆ ಮಹಾದೇವ್ಗೆ ಎಚ್ಚರಿಕೆ ನೀಡಿದ್ದಾರೆ.