ಖೋಟಾ ನೋಟು ಚಲಾವಣೆ: ಇಬ್ಬರ ಬಂಧನ
ದಾವಣಗೆರೆ,ಮಾ.19: ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಇಬ್ಬರನ್ನು ಚನ್ನಗಿರಿ ಪೊಲೀಸರು ಬಂಧಿಸಿದ್ದಾರೆ.
ಗೋವಿಂದಪ್ಪ ಹಾಗೂ ಲಕ್ಷಣ ಬಂಧಿತ ಆರೋಪಿಗಳು. ಚನ್ನಗಿರಿ ತಾಲೂಕಿನ ದೊಂದರಗಟ್ಟ ಗ್ರಾಮದಲ್ಲಿ ಈ ಇಬ್ಬರನ್ನು ಬಂಧಿಸಲಾಗಿದೆ. ಬಂಧಿತರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಮೈದೊಳು ಗ್ರಾಮದವರು ಎಂದು ತನಿಖೆ ವೇಳೆ ತಿಳಿದುಬಂದಿದೆ.
ಆರೋಪಿಗಳಿಂದ 100 ರೂ ಮುಖಬೆಲೆಯ 23 ನೋಟುಗಳು, 50 ರೂ ಮುಖಬೆಲೆಯ 40 ನೋಟುಗಳನ್ನು ವಶಪಡಿಸಿಕೊಂಡಿರುವ ಪೋಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story