varthabharthi

ಸಿನಿಮಾ

ಸದ್ಗುಣ ಸಂಪನ್ನ ಮಾಧವನಾದ ರವಿಶಂಕರ್

ವಾರ್ತಾ ಭಾರತಿ : 22 Mar, 2019

ಬೆಂಗಳೂರು, ಮಾ.22: ಜನಪ್ರಿಯ ಖಳನಟ ರವಿಶಂಕರ್ ಅವರು ಮತ್ತೆ ನಾಯಕರಾಗಿದ್ದಾರೆ….!

ಆದರೆ ಈ ಬಾರಿ ಅವರು ತಮ್ಮನ್ನು ನಾಯಕ ಎಂದು ಹೇಳಿಕೊಳ್ಳಲು ಬಯಸುತ್ತಿಲ್ಲ. ಚಿತ್ರದಲ್ಲಿ ಪ್ರಧಾನ ಪಾತ್ರವೊಂದನ್ನು ಮಾಡುತ್ತಿದ್ದೇನೆ ಎಂದಿದ್ದಾರೆ. ಅವರು ಹೀಗೆ ಹೇಳಿದ್ದು, "ಸದ್ಗುಣ ಸಂಪನ್ನ ಮಾಧವ 100%" ಎನ್ನುವ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ.

ಚಿತ್ರಕ್ಕೆ ಕತೆ ರಚಿಸಿ ನಿರ್ದೇಶನ ಮಾಡುತ್ತಿರುವ ಪ್ರೀತಂ ಶೆಟ್ಟಿ ಮಾತನಾಡಿ, "ಸಾಮಾನ್ಯ ಮನುಷ್ಯನಾಗಿ ದೇವರನ್ನು ಅಪಾರವಾಗಿ ನಂಬುವ, ಭಕ್ತಿಯೊಂದು ಇದ್ದರೆ ಎಲ್ಲವೂ ಇದ್ದಂತೆ ಎಂದುಕೊಂಡು ಆಚಾರಗಳನ್ನು ಮರೆತು ಬದುಕುವ ವ್ಯಕ್ತಿಯೋರ್ವ ಹೇಗೆ ಸದ್ಗುಣ ಸಂಪನ್ನನಾಗಿ ಬದಲಾಗುತ್ತಾನೆ ಎನ್ನುವುದೇ ಚಿತ್ರದ ಮುಖ್ಯವಾದ ಎಳೆ''ಎಂದರು.

ರವಿಶಂಕರ್ ಅವರ  ಗೆಳಯನಾಗಿ ಮತ್ತೊಂದು ರೀತಿಯಲ್ಲಿ ಶತ್ರುವಾಗಿ ಕಾಣಿಸಿಕೊಳ್ಳುತ್ತಿರುವವರು ದಕ್ಷಿಣ ಭಾರತದ ಖ್ಯಾತ ನಟ ಸುಮನ್. ಮಾಧವನ ಪತ್ನಿಯಾಗಿ ಪವಿತ್ರಾ ಲೋಕೇಶ್, ಪ್ರೇಯಸಿ ಅನಿತಾಭಟ್ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಉಳಿದಂತೆ ಕರಿಸುಬ್ಬು, ಚಂದ್ರಕಲಾಮೋಹನ್, ಜಯಲಕ್ಷೀ, ರಾಧಾರಾಮಚಂದ್ರ, ಶಿಲ್ಪಶ್ರೀನಿವಾಸ್, ಭವಾನಿಪ್ರಕಾಶ್ ಮೊದಲಾದ ದೊಡ್ಡ ತಾರಾಬಳಗವನ್ನೇ ಚಿತ್ರ ಹೊಂದಿದ್ದು ಅವರೆಲ್ಲರೂ ಮಾಧ್ಯಮಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತೆಲುಗಿನ ಪರಚೂರಿ ಬ್ರದರ್ಸ್ ಸಂಸ್ಥೆಯಲ್ಲಿ ಕೆಲಸ ಮಾಡಿರುವ ಜಲದಂಕ ಸುಧಾಕರ್ ಸಂಭಾಷಣೆಯಲ್ಲಿ ತೊಡಗಿಕೊಳ್ಳುತ್ತಿರುವುದು ತಂಡಕ್ಕೆ ಹಿರಿಮೆ ತಂದಿದೆಯಂತೆ. ಐದು ಗೀತೆಗಳಿಗೆ ಸಂಗೀತ ಸಂಯೋಜಿಸುತ್ತಿರುವ ಪಳನಿರಾಜ್ ಹೊಸ ಪ್ರತಿಭೆಗಳಾದ ಮೇಘನಾಕುಲಕರ್ಣಿ, ಚೇತನ್ನಾಯಕ್ ಅವರಿಗೆ ಹಾಡಲು ಅವಕಾಶ ಮಾಡಿಕೊಡುತ್ತಿರುವುದಾಗಿ  ತಿಳಿಸಿದರು.  ಮೈಸೂರು ಮತ್ತು ಬೆಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಯಲಿದೆ.

ಚಿತ್ರಕ್ಕೆ ಕನ್ನಡದಲ್ಲಿ ಸುಧೀಂದ್ರಭಾರದ್ವಾಜ್ ಸಂಭಾಷಣೆ, ಛಾಯಾಗ್ರಹಣ .ಪವನ್ಕುಮಾರ್, ಸಂಕಲನ ಸಿ.ರವಿಚಂದ್ರನ್ ನಿರ್ವಸುತ್ತಿದ್ದಾರೆ. ನಿರ್ಮಾಪಕಿ ಪೂಜರಾಜ್ ಮತ್ತು ಬಾಮ.ಗಿರೀಶ್ ಜಂಟಿಯಾಗಿ ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ನಿರ್ಮಾಣ ಮಾಡುವುತ್ತಿರುವ ಈ ಚಿತ್ರಕ್ಕೆ ಏಪ್ರಿಲ್ ತಿಂಗಳಲ್ಲಿ ಚಿತ್ರೀಕರಣ ಶುರುವಾಗಲಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)