varthabharthi

ಮಾಹಿತಿ - ಮಾರ್ಗದರ್ಶನ

ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

ವಾರ್ತಾ ಭಾರತಿ : 23 Mar, 2019

ವಿದ್ಯಾರ್ಥಿವೇತನ

(ಸಂಶೋಧನಾ ಮಟ್ಟ):
 ರಾಯಲ್ ಸೊಸೈಟಿ ನ್ಯೂಟನ್ ಇಂಟರ್‌ನ್ಯಾಷನಲ್ ಫೆಲೊಶಿಪ್ 2019, ಯುಕೆ

 ವಿವರ: ಆರಂಭಿಕ ಹಂತದ ಪೋಸ್ಟ್ ಡಾಕ್ಟೋರಲ್ ಸಂಶೋಧಕರು ಯುನೈಟೆಡ್ ಕಿಂಗ್‌ಡಮ್(ಯುಕೆ)ನ ಗ್ಲೋಬಲ್ ಸಂಸ್ಥೆಗಳಲ್ಲಿ ಪೋಸ್ಟ್ ಡಾಕ್ಟೋರಲ್ ಸಂಶೋಧನೆ ನಡೆಸಲು ಬ್ರಿಟಿಷ್ ಅಕಾಡಮಿ, ದಿ ಅಕಾಡಮಿ ಆಫ್ ಮೆಡಿಕಲ್ ಸೈಯನ್ಸಸ್ ಮತ್ತು ದಿ ರಾಯಲ್ ಸೊಸೈಟಿ ಜಂಟಿಯಾಗಿ ನೀಡುವ ಫೆಲೊಶಿಪ್. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ನಡೆಸಲು ವಿಜ್ಞಾನ ಮತ್ತು ಇಂಜಿನಿಯರಿಂಗ್ ಸಂಶೋಧಕರಿಗೆ ಇದೊಂದು ಅವಕಾಶವಾಗಿದೆ.
ಅರ್ಹತೆ: 7 ವರ್ಷ ಪೂರ್ಣಾವಧಿ ಪೋಸ್ಟ್ ಡಾಕ್ಟೋರಲ್ ಕಾರ್ಯನಿರ್ವಹಣೆಯ ಅನುಭವ ಹೊಂದಿದ(ಕಡ್ಡಾಯವಲ್ಲ) ಪಿಎಚ್‌ಡಿ ಪಡೆದಿರುವ ಭಾರತೀಯ ಪೌರರು ಅರ್ಜಿ ಸಲ್ಲಿಸಬಹುದು. ಭಾಷಾ ಕೌಶಲ್ಯ ಹೊಂದಿರಬೇಕು.
ನೆರವು: ಆಯ್ಕೆಯಾದ ಅಭ್ಯರ್ಥಿಗಳಿಗೆ ಸ್ಥಳಾಂತರ ವೆಚ್ಚವಾಗಿ 3 ಸಾವಿರ ಗ್ರೇಟ್ ಬ್ರಿಟನ್ ಪೌಂಡ್, ವಾರ್ಷಿಕ ಸಂಶೋಧನಾ ಮೊತ್ತವಾಗಿ 8 ಸಾವಿರ ಗ್ರೇಟ್‌ಬ್ರಿಟನ್ ಪೌಂಡ್, ವಾರ್ಷಿಕ 24 ಸಾವಿರ ಜಿಬಿಪಿ ಜೀವನಾಧಾರ ವೆಚ್ಚ ಭತ್ತೆ, ಫೆಲೊಶಿಪ್ ಹಾಗೂ ಸಂಶೋಧನಾ ನೆಟ್‌ವರ್ಕ್ ನಿರ್ವಹಣೆಗೆ ವಾರ್ಷಿಕ 6 ಸಾವಿರ ಜಿಬಿಪಿ ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮಾರ್ಚ್ 27, 2019
ಅರ್ಜಿ: ಅರ್ಜಿಗಳನ್ನು ಆನ್‌ಲೈನ್ ಮೂಲಕ ಹಾಕಬೇಕು.
ಜಾಲತಾಣ: http://www.b4s.in/bharati/NIF3

****************

ವಿದ್ಯಾರ್ಥಿವೇತನ
(ಅಂತರ್‌ರಾಷ್ಟ್ರೀಯ ಮಟ್ಟ):
ನ್ಯೂಝಿಲ್ಯಾಂಡ್ ಕಾಮನ್‌ವೆಲ್ತ್ ಸ್ಕಾಲರ್‌ಶಿಪ್ 2019

ವಿವರ: ಭಾರತ ಸರಕಾರದ ಎಂಎಚ್‌ಆರ್‌ಡಿ ವಿಭಾಗ ಹಾಗೂ ನ್ಯೂಝಿಲ್ಯಾಂಡ್‌ನ ವಿದೇಶ ವ್ಯವಹಾರ ಮತ್ತು ವ್ಯಾಪಾರ ಇಲಾಖೆಯ ಸಹಯೋಗದಲ್ಲಿ ನೀಡಲಾಗುವ ಸ್ಕಾಲರ್‌ಶಿಪ್. ಉಭಯ ದೇಶಗಳ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಬದ್ಧರಾಗಿರುವ ನ್ಯೂಝಿಲ್ಯಾಂಡ್‌ನಲ್ಲಿ ಸ್ನಾತಕೋತ್ತರ ಹಾಗೂ ಪಿಎಚ್‌ಡಿ ವಿದ್ಯಾಭ್ಯಾಸ ನಡೆಸಲು ಪ್ರತಿಭಾನ್ವಿತ ಅಭ್ಯರ್ಥಿಗಳಿಗೆ ಕೋರ್ಸ್ ಶುಲ್ಕ ಮನ್ನಾ ಮಾಡಿ ಸ್ಕಾಲರ್‌ಶಿಪ್ ನೀಡಲಾಗುವುದು.
ಅರ್ಹತೆ: 18 ವರ್ಷದ ಮೇಲಿನ, ಅಗತ್ಯದ ಪದವಿ ಮತ್ತು ಸ್ನಾತಕೋತ್ತರ ಪದವಿ, ಭಾಷಾ ಪ್ರಾವೀಣ್ಯತೆಯ ಪ್ರಮಾಣಪತ್ರ (ಐಇಎಲ್‌ಟಿಎಸ್/ಟಿಒಇಎಫ್‌ಎಲ್/ಪಿಟಿಇ) ಭಾರತೀಯ ನಿವಾಸಿಗಳು ಅರ್ಜಿ ಸಲ್ಲಿಸಬಹುದು.
ನೆರವು: ಆಯ್ಕೆಯಾದ ಅಭ್ಯರ್ಥಿಗಳಿಗೆ ನ್ಯೂಝಿಲ್ಯಾಂಡ್‌ನಲ್ಲಿ ಕಲಿಯಲು ಬೋಧನಾ ಶುಲ್ಕ ಸಂಪೂರ್ಣ ಮನ್ನಾ, ಪ್ರತೀ ವಾರ ಜೀವನ ವೆಚ್ಚ ಭತ್ತೆಯಾಗಿ 491 ನ್ಯೂಝಿಲ್ಯಾಂಡ್ ಡಾಲರ್, ಸ್ಥಳಾಂತರ ಭತ್ತೆ 3 ಸಾವಿರ ನ್ಯೂಝಿಲ್ಯಾಂಡ್ ಡಾಲರ್, ಸೀಮಿತವಾಗಿ ಮನೆಗೆ ತೆರಳಲು ವೈದ್ಯಕೀಯ ಮತ್ತು ಪ್ರಯಾಣ ವಿಮೆ ಸೌಲಭ್ಯ ಒದಗಿಸಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮಾರ್ಚ್ 28, 2019
ಅರ್ಜಿ: ಅರ್ಜಿಗಳನ್ನು ಆನ್‌ಲೈನ್ ಮೂಲಕ ಹಾಕಬೇಕು.
ಜಾಲತಾಣ: http://www.b4s.in/bharati/NZC5

****************
ವಿದ್ಯಾರ್ಥಿವೇತನ
(ಸಂಶೋಧನಾ ಮಟ್ಟ):
ಸ್ಮಾರ್ಟ್ ಫೆಲೊಶಿಪ್, ಐಸಿಜಿಇಬಿ 2019

ವಿವರ: ಇಂಟರ್‌ನ್ಯಾಷನಲ್ ಸೆಂಟರ್ ಫಾರ್ ಜೆನೆಟಿಕ್ ಇಂಜಿನಿಯರಿಂಗ್ ಆ್ಯಂಡ್ ಬಯೊಟೆಕ್ನಾಲಜಿ (ಐಸಿಜಿಇಬಿ) ಯುವ ವಿಜ್ಞಾನಿಗಳಿಗೆ ಜೀವವಿಜ್ಞಾನ ವಿಷಯದಲ್ಲಿ ಸಂಶೋಧನೆ ನಡೆಸಲು ಸ್ಥಳೀಯ ಸಂಶೋಧನಾ ವ್ಯವಸ್ಥೆಯ ಜೊತೆಗೆ ನೀಡುವ ಸ್ಕಾಲರ್‌ಶಿಪ್.
ಅರ್ಹತೆ: ಪಿಎಚ್‌ಡಿ ಪದವಿ ಪಡೆಯುವ ಹಂತದಲ್ಲಿರುವ, ಅಥವಾ ಪಡೆದಿರುವ, ಅಥವಾ ಎಂಎಸ್ಸಿ ಅರ್ಹತೆಯ ಯುವ ವಿಜ್ಞಾನಿಗಳು (ಭಾರತೀಯ ನಿವಾಸಿಗಳು) ಅರ್ಜಿ ಸಲ್ಲಿಸಬಹುದು.
ನೆರವು: ಆಯ್ಕೆಯಾದ ಅಭ್ಯರ್ಥಿಗಳಿಗೆ, ಅವರ ಸಂಶೋಧನಾ ಪ್ರಸ್ತಾವನೆಯ ಅರ್ಹತೆಯ ಆಧಾರದಲ್ಲಿ 3ರಿಂದ 9 ತಿಂಗಳ ಅವಧಿಗೆ 800 ಅಮೆರಿಕನ್ ಡಾಲರ್ ಮಾಸಿಕ ಸ್ಟೈಪೆಂಡ್, ಸಂಶೋಧನೆ ನಡೆಸಲು ಲ್ಯಾಬೊರೇಟರಿ ವೆಚ್ಚವಾಗಿ ತಿಂಗಳಿಗೆ 500 ಅಮೆರಿಕನ್ ಡಾಲರ್.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮಾರ್ಚ್ 31, 2019
ಅರ್ಜಿ: ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/SF12

**************

ವಿದ್ಯಾರ್ಥಿವೇತನ
(ಅರ್ಹತೆ ಆಧಾರಿತ):
ಆಲ್‌ಇಂಡಿಯಾ ಯೂತ್ ಸ್ಕಾಲರ್‌ಶಿಪ್ ಎಂಟ್ರೆನ್ಸ್ ಎಕ್ಸಾಮಿನೇಷನ್ 2019

ವಿವರ: ಭಾರತದ ಕೇಂದ್ರ ಅಬಕಾರಿ ತೆರಿಗೆ ಇಲಾಖೆ ನಡೆಸುವ ಈ ರಾಷ್ಟ್ರೀಯ ಮಟ್ಟದ ಸ್ಕಾಲರ್‌ಶಿಪ್ ಪರೀಕ್ಷೆ. ಯುವ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಪದವಿ ಪಡೆಯುವ ಆಸಕ್ತರಿಗೆ ಉನ್ನತ ಅಧ್ಯಯನಕ್ಕೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ನಡೆಸುವ ಪರೀಕ್ಷೆಯಿದು.
ಅರ್ಹತೆ: 2019ರಲ್ಲಿ ಇಂಜಿನಿಯರಿಂಗ್ ಅಥವಾ ಮೆಡಿಕಲ್ ಪ್ರವೇಶ ಪರೀಕ್ಷೆ ಬರೆಯಲು ಆಸಕ್ತರಾಗಿರುವ 2014ರಿಂದ 2019ರ ನಡುವೆ 12ನೇ ತರಗತಿ ತೇರ್ಗಡೆಯಾದ ಅಭ್ಯರ್ಥಿಗಳು. ಎಐವೈಎಸ್‌ಇಇ 2019ರಲ್ಲಿ 55%ಕ್ಕಿಂತ ಹೆಚ್ಚಿನ ಅಂಕ ಗಳಿಸಿರಬೇಕು.
ನೆರವು: 1ನೇ ಸೆಮಿಸ್ಟರ್‌ಗೆ ಆರ್ಥಿಕ ನೆರವಿನಿಂದ ಐದು ವರ್ಷದ ವರೆಗೆ ಆರ್ಥಿಕ ನೆರವು ಒದಗಿಸುವ ಬಹು ಸ್ಕಾಲರ್‌ಶಿಪ್ ಯೋಜನೆ. ಎಐವೈಎಸ್‌ಇಇ 2019ರಲ್ಲಿ ಪಡೆದ ಸರಾಸರಿ ಅಂಕದ ಆಧಾರದಲ್ಲಿ ಅಭ್ಯರ್ಥಿಗಳಿಗೆ ನೆರವು ನೀಡಲಾಗುವುದು. ಅಲ್ಲದೆ ಸಾಧನೆಯ ಆಧಾರದಲ್ಲಿ ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಇವನ್ನು ಬಹುಮಾನವಾಗಿ ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮಾರ್ಚ್ 31, 2019
ಅರ್ಜಿ: ಅರ್ಜಿಗಳನ್ನು ಆನ್‌ಲೈನ್ ಮೂಲಕ ಹಾಕಬೇಕು.
ಜಾಲತಾಣ: http://www.b4s.in/bharati/AIY8

*********************
ವಿದ್ಯಾರ್ಥಿವೇತನ
(ಅರ್ಹತೆ ಆಧಾರಿತ):
ಟೆಲ್ ಅವೀವ್ ವಿವಿ ಸಮ್ಮರ್ ಪ್ರೋಗ್ರಾಂ ಸ್ಕಾಲರ್‌ಶಿಪ್ 2019, ಇಸ್ರೇಲ್

ವಿವರ: ಸೈಬರ್ ಭದ್ರತೆ, ಸ್ಟಾರ್ಟ್ ಅಪ್ ರಾಷ್ಟ್ರಗಳಲ್ಲಿ ವ್ಯಾಪಾರ ಮತ್ತು ಉದ್ಯಮಶೀಲತೆ, ಮಧ್ಯಪೂರ್ವ ಮತ್ತು ಬಿಕ್ಕಟ್ಟು ಅಧ್ಯಯನ-ಈ ವಿಷಯದಲ್ಲಿ ಇಸ್ರೇಲ್‌ನ ಟೆಲ್ ಅವೀವ್ ವಿವಿ ನೀಡುವ ಸಮ್ಮರ್ ಸ್ಕಾಲರ್‌ಶಿಪ್ ಯೋಜನೆ. ಅಲ್ಲದೆ ವಿಜ್ಞಾನ, ಸ್ಮಾರ್ಟ್ ನಗರಗಳು, ಆಹಾರ ಸುರಕ್ಷತೆ ಮತ್ತು ಭದ್ರತೆ ವಿಷಯದಲ್ಲಿ ಸಂಶೋಧನಾ ಯೋಜನೆ.
ಅರ್ಹತೆ: ಈ ಹಿಂದಿನ ಪರೀಕ್ಷೆಯಲ್ಲಿ ಕನಿಷ್ಠ ಶೇ.80 ಅಂಕ ಗಳಿಸಿರುವ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು.
ನೆರವು: ಬೋಧನಾ ವೆಚ್ಚ, ವಸತಿ ಮತ್ತು ವೈದ್ಯಕೀಯ ವಿಮೆಯ ಒಟ್ಟು ವೆಚ್ಚದ ಶೇ.65ನ್ನು ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಎಪ್ರಿಲ್ 10, 2019
ಅರ್ಜಿ:  ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/TAU7

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)