ಇರಾನ್ನಿಂದ ಇಸ್ರೇಲನ್ನು ರಕ್ಷಿಸಲು ದೇವರು ಟ್ರಂಪ್ರನ್ನು ಕಳಿಸಿರಬಹುದು !
ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಹೇಳಿಕೆ
ವಾಶಿಂಗ್ಟನ್, ಮಾ. 23: ಇರಾನ್ನಿಂದ ಇಸ್ರೇಲನ್ನು ರಕ್ಷಿಸಲು ದೇವರೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರನ್ನು ಕಳುಹಿಸಿರುವ ಸಾಧ್ಯತೆಯಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಹೇಳಿದ್ದಾರೆ.
ಇಸ್ರೇಲ್ಗೆ ಭೇಟಿ ನೀಡಿದ ವೇಳೆ ‘ಕ್ರಿಶ್ಚಿಯನ್ ಬ್ರಾಡ್ ಕಾಸ್ಟಿಂಗ್ ನೆಟ್ವರ್ಕ್’ಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘‘ನನ್ನ ಧರ್ಮವು ನಾನು ಈ ರೀತಿಯಾಗಿ ನಂಬುವಂತೆ ಮಾಡಿತು’’ ಎಂದು ಅವರು ಹೇಳಿದರು.
‘‘ಮಧ್ಯ ಪ್ರಾಚ್ಯದಲ್ಲಿ ಈ ಪ್ರಜಾಸತ್ತಾತ್ಮಕ ದೇಶ, ಈ ಯುಹೂದಿ ದೇಶ ಉಳಿಯುವುದನ್ನು ಖಾತರಿಪಡಿಸಲು’’ ಅಮೆರಿಕ ನಡೆಸುತ್ತಿರುವ ಪ್ರಯತ್ನಗಳನ್ನೂ ಪಾಂಪಿಯೊ ಕೊಂಡಾಡಿದರು ಎಂದು ಬಿಬಿಸಿ ವರದಿ ಮಾಡಿದೆ.
Next Story