5,000 ರನ್: ರೈನಾ ಸಾಧನೆ
ಚೆನ್ನೈ, ಮಾ.23: ಐಪಿಎಲ್ ಇತಿಹಾಸದಲ್ಲಿ 5,000 ರನ್ ಮಾಡಿದ ಮೊದಲ ದಾಂಡಿಗನಾಗಿ ಸುರೇಶ್ ರೈನಾ ಹೊರಹೊಮ್ಮಿದ್ದಾರೆ. ಇಲ್ಲಿಯ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯ 12ನೇ ಆವೃತ್ತಿಯ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದರು.
ಈ ಪಂದ್ಯದ ಮೊದಲು 5,000 ರನ್ಗಳ ಗಡಿ ತಲುಪಲು ರೈನಾಗೆ ಕೇವಲ 15 ರನ್ ಅಗತ್ಯವಿತ್ತು. ಫೈನ್ಲೆಗ್ನಲ್ಲಿ ಸಿಂಗಲ್ ರನ್ ಕದಿಯುವ ಮೂಲಕ ರೈನಾ 15 ರನ್ ತಲುಪಿ 5,000 ರನ್ ಗಡಿ ತಲುಪಿದರು. ಪಂದ್ಯದಲ್ಲಿ ಅವರು 19 ರನ್ ಗಳಿಸಿ ಮೊಯಿನ್ ಅಲಿ ಎಸೆತದಲ್ಲಿ ದುಬೆಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು.
Next Story