ಇಂಗ್ಲೆಂಡ್ಗೆ ಭರ್ಜರಿ ಜಯ
ಸ್ಟರ್ಲಿಂಗ್ ಹ್ಯಾಟ್ರಿಕ್
ವಿಂಬ್ಲೆ, ಮಾ.23: ರಹೀಮ್ ಸ್ಟರ್ಲಿಂಗ್ ಗಳಿಸಿದ ಹ್ಯಾಟ್ರಿಕ್ ಗೋಲು ನೆರವಿನಿಂದ ಆತಿಥೇಯ ಇಂಗ್ಲೆಂಡ್ ತಂಡ ಝೆಕ್ ರಿಪಬ್ಲಿಕ್ ತಂಡದ ವಿರುದ್ಧ ಶುಕ್ರವಾರ ನಡೆದ ಯುರೋ 2020ರ ಅರ್ಹತಾ ಪಂದ್ಯದಲ್ಲಿ 5-0 ಅಂತರದಿಂದ ಗೆಲುವು ದಾಖಲಿಸಿದೆ. 24ನೇ ನಿಮಿಷದಲ್ಲಿ ಗೋಲು ಗಳಿಸಿದ ಸ್ಟರ್ಲಿಂಗ್ ಇಂಗ್ಲೆಂಡ್ಗೆ 1-0 ಮುನ್ನಡೆ ಒದಗಿಸಿಕೊಟ್ಟರು. ಆ ಬಳಿಕ 62ನೇ ಹಾಗೂ 68ನೇ ನಿಮಿಷದಲ್ಲಿ ಮತ್ತೆರಡು ಗೋಲು ಗಳಿಸಿ ಇಂಗ್ಲೆಂಡ್ ಪರ ಮೊದಲ ಬಾರಿ ಹ್ಯಾಟ್ರಿಕ್ ಪೂರೈಸಿದರು.
45ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ನಲ್ಲಿ ಗೋಲು ಗಳಿಸಿದ ಹ್ಯಾರಿ ಕೇನ್ ಇಂಗ್ಲೆಂಡ್ ಮುನ್ನಡೆಯನ್ನು ಹಿಗ್ಗಿಸಿದರು. 84ನೇ ನಿಮಿಷದಲ್ಲಿ ಝೆಕ್ನ ಕಲಾಸ್ ಸ್ವಯಂ ಗೋಲು ಗಳಿಸಿ ಇಂಗ್ಲೆಂಡ್ 5-0 ಅಂತರದಿಂದ ಜಯ ಸಾಧಿಸಲು ನೆರವಾದರು.
ಈ ಗೆಲುವಿನ ಮೂಲಕ ಇಂಗ್ಲೆಂಡ್ ಕಳೆದ 40 ಅರ್ಹತಾ ಪಂದ್ಯಗಳಲ್ಲಿ (ವಿಶ್ವಕಪ್, ಯುರೋ)ಅಜೇಯ ದಾಖಲೆ ಕಾಯ್ದುಕೊಂಡಿದೆ. 2009ರಲ್ಲಿ ಉಕ್ರೇನ್ಗೆ ಸೋತ ಬಳಿಕ 31ರಲ್ಲಿ ಗೆಲುವು ಹಾಗೂ 9 ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ. 2014ರಲ್ಲಿ ಸ್ಯಾನ್ ಮರಿನೊ ವಿರುದ್ಧ 5-0 ಅಂತರದಿಂದ ಜಯ ಸಾಧಿಸಿದ ಬಳಿಕ ವಿಂಬ್ಲೆಯಲ್ಲಿ ಭಾರೀ ಅಂತರದ ಜಯ ದಾಖಲಿಸಿದೆ. ಗಾರೆತ್ ಸೌತ್ಗೇಟ್ ಕೋಚಿಂಗ್ ಅಡಿ ಕೇನ್ ಹ್ಯಾರಿ ಕೇನ್ 16ನೇ ಗೋಲು ಗಳಿಸಿದ್ದಾರೆ.