ಅಬುಧಾಬಿ: ಎ.5ರಂದು ಮದೀನ ಝಾಯೇದ್ ನಲ್ಲಿ ರಕ್ತದಾನ ಶಿಬಿರ
ಅಬುಧಾಬಿ: ಬ್ಲಡ್ ಡೋನರ್ಸ್ ಮಂಗಳೂರು ಮತ್ತು ಬದ್ರಿಯ ಫ್ರೆಂಡ್ಸ್ ದುಬೈ ಹಾಗೂ ಅಬುಧಾಬಿ ಕಾಸ್ರೊಟ್ಟಾರ್ ಸಹಯೋಗದಲ್ಲಿ ಎ.5 ರಂದು ಸಂಜೆ 5ರಿಂದ 10ರವರೆಗೆ ಮದೀನ ಝಾಯೇದ್ ನಲ್ಲಿರುವ ಲುಲು ಹೈಪರ್ ಮಾರ್ಕೆಟ್ ಮುಂಭಾಗ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ.
ನಾವು ರಕ್ತದಾನದ ಮೂಲಕ ಒಂದು ಜೀವವನ್ನು ಮಾತ್ರ ಉಳಿಸುತ್ತಿಲ್ಲ ಒಂದು ಸಮುದಾಯವನ್ನು ಉಳಿಸುತ್ತೇವೆ. ರಕ್ತದಾನದಿಂದ ನಾವು ಏನೂ ಕಳೆದುಕೊಳ್ಳುವುದಿಲ್ಲ ಆದರೆ ಅವರ ಪ್ರಾರ್ಥನೆ ಮತ್ತು ಕನಸುಗಳನ್ನು ನಾವು ಪೂರೈಸುತ್ತೇವೆ. ಜೀವಗಳನ್ನು ಉಳಿಸಲು ನಮ್ಮ ಜೊತೆ ಕೈ ಜೋಡಿಸಿ ಎಂದು ಬ್ಲಡ್ ಡೋನರ್ಸ್ ಮಂಗಳೂರು ಮತ್ತು ಬದ್ರಿಯ ಫ್ರೆಂಡ್ಸ್ ದುಬೈ ಹಾಗೂ ಅಬುದಾಭಿ ಕಾಸ್ರೊಟ್ಟಾರ್ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಮುಹಮ್ಮದ್ ಆಲಂಪಾಡಿ 0504129795, ಸಂಶುದ್ದೀನ್ ಪಿಲಿಗೂಡು 0528981904, ರಾಝಿಕ್ ಡಿ ವಿಟ್ಲ 0555752827, ಇಮ್ರಾನ್ ಎನ್ಎಂ 0556300528, ನವಾಝ್ ಸಜೀಪ 0527371121, ಸಿದ್ದೀಕ್ ಮಂಜೇಶ್ವರ 9845707090 ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.
Next Story