varthabharthi

ನಿಧನ

ಸಿರಿಲ್ ರೋಡ್ರಿಗಸ್

ವಾರ್ತಾ ಭಾರತಿ : 1 Apr, 2019

ಮೂಡುಬಿದಿರೆ : ಹಿರಿಯ ಜವುಳಿ ಉದ್ಯಮಿ, ಅಲಂಕಾರ್ ಸಮೂಹ ಸಂಸ್ಥೆಗಳ ಮಾಲಕ ಸಿರಿಲ್ ರೋಡ್ರಿಗಸ್(75) ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ನಿಧನ ಹೊಂದಿದರು.

ಅವರು ಪತ್ನಿ, ಇಬ್ಬರು ಪುತ್ರರು, ಪುತ್ರಿಯರನ್ನು ಅಗಲಿದ್ದಾರೆ. ಮೂಡುಬಿದಿರೆ ಪೇಟೆಯಲ್ಲಿ  ಅಲಂಕಾರ್ ಟೆಕ್ಸ್ ಟೈಲ್ಸ್ ಜವುಳಿ ಉದ್ಯಮವನ್ನು ಮುನ್ನಡೆಸುತ್ತಿದ್ದ ಅವರು ಅಲಂಕಾರ್ ಜ್ಯುವೆಲ್ಲರ್ಸ್, ಅಲಂಕಾರ್ ಇನ್ವೆಸ್ಟ್ ಮೆಂಟ್ ಹಾಗೂ ಏಂಜಲ್ ಬಿಲ್ಡರ್ಸ್ ಸಂಸ್ಥೆಗಳನ್ನು ಸ್ಥಾಪಿಸಿದ್ದರು.

ಮೂಡುಬಿದಿರೆ ಜವುಳಿ ವರ್ತಕರ ಸಂಘದ ಸ್ಥಾಪಕ ಅಧ್ಯಕ್ಷರಾಗಿದ್ದ ಅವರು ಜಿಲ್ಲಾ ಜವುಳಿ ವರ್ತಕರ ಸಂಘದ ಪದಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದರು. ಮೂಡುಬಿದಿರೆ ರೋಟರಿ ಕ್ಲಬ್ ಅಧ್ಯಕ್ಷರಾಗಿ, ಹಾಲಿ ಸದಸ್ಯರಾಗಿ ರೋಟರಿ ಎಜ್ಯುಕೇಶನ್ ಸೊಸೈಟಿಯ ಕೊಶಾಧಿಕಾರಿಯಾಗಿ,ಸದಸ್ಯರಾಗಿ ಅವರು ಸೇವೆ ಸಲ್ಲಿಸಿದ್ದರು.  ಸೈಂಟ್ ವಿನ್ಸೆಂಟ್ ಪೌಲ್ ಸಂಸ್ಥೆಯ ಟ್ರಸ್ಟಿಯಾಗಿಯೂ ಸೇವೆ ಸಲ್ಲಿಸಿದ್ದರು. ಅವರ ಅಂತ್ಯಕ್ರಿಯೆಯು ಎ. 3ರಂದು ಮೂಡುಬಿದಿರೆ ಕೊರ್ಪುಸ್ ಕ್ರಿಸ್ತಿ ಚರ್ಚ್‍ನಲ್ಲಿ ನಡೆಯಲಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)