varthabharthi

ನಿಧನ

ಹಿರಿಯ ಪತ್ರಕರ್ತರ ರಾಜಣ್ಣ

ವಾರ್ತಾ ಭಾರತಿ : 2 Apr, 2019

ಚಿಕ್ಕಮಗಳೂರು, ಎ.1: ಹಿರಿಯ ಪತ್ರಕರ್ತ ಎಂ.ಎಸ್.ರಾಜಣ್ಣ(64) ಸೋಮವಾರ ನಿಧನರಾಗಿದ್ದಾರೆ. 

ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ಮಧ್ಯಾಹ್ನ ನಿಧನರಾಗಿದ್ದು, ಇಂದು ಸ್ವಗ್ರಾಮ ಕಳಸಾಪುರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ರಾಜಣ್ಣ ರವರು ಪತ್ನಿ, ಮಗಳು ಮತ್ತು ಮಗ ಸೇರಿದಂತೆ  ಅಪಾರ ಬಂಧುಬಳಗವನ್ನು ಅಗಲಿದ್ದಾರೆ. 

ಕಳಸಾಪುರದ ಅಂಚೆ ಕಚೇರಿಯಲ್ಲೂ ಗ್ರಾಮೀಣ ಅಂಚೆ ನೌಕರನಾಗಿ ಸೇವೆ ಸಲ್ಲಿಸುತ್ತಾ ಜನಾನುರಾಗಿಯಾಗಿದ್ದರು. ಜಯಮಿತ್ರ ಸೇರಿದಂತೆ ವಿವಿಧ ಪತ್ರಿಕೆಗಳ ಏಜೆನ್ಸಿ ಹೊಂದಿದ್ದಲ್ಲದೇ ವರದಿಗಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು.
 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)