varthabharthi

ರಾಷ್ಟ್ರೀಯ

ರೈತರ ಸರ್ವನಾಶ ಮಾಡಿದ ಬಿಜೆಪಿಗೆ ಮತ ಹಾಕಬೇಡಿ: ಡೆತ್ ನೋಟ್ ಬರೆದಿಟ್ಟು ರೈತ ಆತ್ಮಹತ್ಯೆ

ವಾರ್ತಾ ಭಾರತಿ : 11 Apr, 2019

ಹೊಸದಿಲ್ಲಿ, ಎ.11: ರೈತರೊಬ್ಬರು ಡೆತ್ ನೋಟ್ ನಲ್ಲಿ ‘ಬಿಜೆಪಿಗೆ ಮತ ಹಾಕಬೇಡಿ’ ಎಂದು ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿದೆ.

ರಾಜ್ಯದ ಹರಿದ್ವಾರ್ ಜಿಲ್ಲೆಯ ಈಶ್ವರ್ ಚಂದ್ ಶರ್ಮಾ ಆತ್ಮಹತ್ಯೆಗೆ ಶರಣಾದ ರೈತ ಎಂದು ಗುರುತಿಸಲಾಗಿದೆ. ವಿಷ ಸೇವಿಸಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತೀವ್ರ ಸಾಲದಿಂದ ಕಂಗೆಟ್ಟು ಈಶ್ವರ್ ಚಂದ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದ್ದು, ತನ್ನ ಸಾವಿಗೆ ಬಿಜೆಪಿ ಸರಕಾರವೇ ಕಾರಣ ಎಂದವರು ಬರೆದಿದ್ದಾರೆ. “5 ವರ್ಷಗಳಲ್ಲಿ ಬಿಜೆಪಿ ಸರಕಾರವು ರೈತರ ಸರ್ವನಾಶ ಮಾಡಿದೆ. ಅವರಿಗೆ ಮತ ಹಾಕಬೇಡಿ. ಎಲ್ಲರೂ ಚಹಾ ಮಾರುವಂತೆ ಅವರು ಮಾಡುತ್ತಾರೆ” ಎಂದು ಡೆತ್ ನೋಟ್ ನಲ್ಲಿ ಬರೆದಿದ್ದಾರೆ ಎಂದು ವರದಿಯಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)