varthabharthi

ರಾಷ್ಟ್ರೀಯ

ದೇಶ ಶಾಂತಿಯಿಂದಿರಲು ನೀವು ಬಿಡುವುದಿಲ್ಲ: ಅಯೋಧ್ಯೆಯಲ್ಲಿ ಪೂಜೆಗೆ ಅವಕಾಶ ಕೇಳಿದವರಿಗೆ ಸುಪ್ರೀಂ ಕೋರ್ಟ್ ಛೀಮಾರಿ

ವಾರ್ತಾ ಭಾರತಿ : 12 Apr, 2019

ಹೊಸದಿಲ್ಲಿ, ಎ.12: ಅಯೋಧ್ಯೆಯ 67.7 ಎಕರೆ ಭೂಮಿಯ ವಿವಾದಕ್ಕೊಳಪಡದ ಭಾಗದಲ್ಲಿ ಪೂಜೆ ನಡೆಸಲು ಅನುಮತಿ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ.

“ಈ ದೇಶ ಶಾಂತಿಯಿಂದಿರಲು ನೀವು ಎಂದಿಗೂ ಬಿಡುವುದಿಲ್ಲ. ಯಾವಾಗಲೂ ಏನಾದರೂ ಒಂದು ಇದ್ದೇ ಇರುತ್ತದೆ” ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಹೇಳಿದ್ದಾರೆ.

ಅರ್ಜಿದಾರರ ವಿರುದ್ಧ ಅಲಹಾಬಾದ್ ಹೈಕೋರ್ಟ್ ಹೇರಿದ್ದ 5 ಲಕ್ಷ ರೂ. ದಂಡವನ್ನು ರದ್ದುಗೊಳಿಸಲು ಇದೇ ಸಂದರ್ಭ ಸುಪ್ರೀಂ ಕೋರ್ಟ್ ನಿರಾಕರಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)