varthabharthi


ಮಾಹಿತಿ - ಮಾರ್ಗದರ್ಶನ

ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

ವಾರ್ತಾ ಭಾರತಿ : 13 Apr, 2019

ವಿದ್ಯಾರ್ಥಿವೇತನ
(ಅಂತರ್‌ರಾಷ್ಟ್ರೀಯ ಮಟ್ಟ):
ವಿದ್ಯಾರ್ಥಿವೇತನ: ವರ್ಲ್ಡ್ ಟ್ರೇಡ್ ಆರ್ಗನೈಸೆೇಶನ್ ಯಂಗ್ ಪ್ರೊಫೆಶನಲ್ಸ್ ಪ್ರೋಗ್ರಾಂ 2020

ವಿವರ: ಈ ಫೆಲೊಶಿಪ್ ಕಾರ್ಯಕ್ರಮದಡಿ ವರ್ಲ್ಡ್‌ಟ್ರೇಡ್ ಆರ್ಗನೈಸೇಷನ್(ಡಬ್ಲುಟಿಒ)ಅರ್ಹ ಯುವ ವೃತ್ತಿಪರರಿಗೆ ಕಾರ್ಯನಿರ್ವಹಿಸುವ ಅವಕಾಶವನ್ನು ನೀಡುತ್ತದೆ. ವಿಶ್ವದಾದ್ಯಂತ ಪರಿವರ್ತನೆಯ ವ್ಯವಹಾರ ಮತ್ತು ವ್ಯಾಪಾರ ವಿಷಯದಲ್ಲಿ ಡಬ್ಲುಟಿಒನೊಂದಿಗೆ ಕೆಲಸ ಮಾಡುತ್ತಾ ಅನುಭವ ಗಳಿಸಿಕೊಳ್ಳಬಯಸುವ ಭಾರತೀಯ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಹತೆ: ಕಾನೂನು-ಅರ್ಥಶಾಸ್ತ್ರ ಅಥವಾ ಸಂಬಂಧಿತ ವಿಷಯದಲ್ಲಿ ಪದವಿ ಪಡೆದಿರುವ, 2 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ ಭಾರತೀಯ ಪೌರರು ಅರ್ಜಿ ಸಲ್ಲಿಸಬಹುದು. 2020ರ ಜನವರಿ 1ಕ್ಕೆ ಅನ್ವಯಿಸುವಂತೆ 32 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು. ಫ್ರೆಂಚ್ ಅಥವಾ ಸ್ಪಾನಿಷ್‌ನಲ್ಲಿ ಈ ಹಿಂದೆ ಅನುಭವ ಹೊಂದಿದವರಿಗೆ ಆದ್ಯತೆ.
ನೆರವು: ಆಯ್ಕೆಯಾದ ಅಭ್ಯರ್ಥಿಗಳಿಗೆ ಡಬ್ಲುಟಿಒದೊಂದಿಗೆ ಉದ್ಯೋಗ ನಿರ್ವಹಿಸಲು ಅವಕಾಶ ದೊರೆಯುತ್ತದೆ ಮತ್ತು 3500 ಸಿಎಚ್‌ಎಫ್ ಮೊತ್ತ ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಎಪ್ರಿಲ್ 15, 2019
ಅರ್ಜಿ: ಇ-ಮೇಲ್ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/WTO1
***************

ವಿದ್ಯಾರ್ಥಿವೇತನ
(ಪ್ರತಿಭೆ ಆಧಾರಿತ):
ಸಂಭಾವನಾ ಫೆಲೊಶಿಪ್ 2019-20

ವಿವರ: ಶೈಕ್ಷಣಿಕ ಕ್ಷೇತ್ರದಲ್ಲಿ ನಾಯಕತ್ವದ ಕುರಿತು ಆಸಕ್ತಿ ಇರುವ ವಿದ್ಯಾರ್ಥಿಗಳು, ದೇಶದ ಉಪನಗರ ಪ್ರದೇಶಗಳಲ್ಲಿ ಶೈಕ್ಷಣಿಕ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸುವ ವಿಷಯ ದಲ್ಲಿ ನಡೆಯುವ 9 ತಿಂಗಳಾವಧಿಯ ಫೆಲೊಶಿಪ್ ಕಾರ್ಯಕ್ರಮಕ್ಕೆ ಅನ್ಹದ್ ಪ್ರವಾಹ್ ಕಮ್ಯುನಿಟಿ ಆಹ್ವಾನದಂತೆ ಅರ್ಜಿ ಸಲ್ಲಿಸಬಹುದು.
ಅರ್ಹತೆ: ಸಮಾಜ ವಿಜ್ಞಾನ ಅಥವಾ ಶಿಕ್ಷಣಕ್ಕೆ ಸಂಬಂಧಿಸಿದ ಕ್ಷೇತ್ರಗಳ ವಿದ್ಯಾರ್ಥಿಯಾಗಿರಬೇಕು. 18ರಿಂದ 30 ವರ್ಷ ವಯಸ್ಸು, ಬೋಧನೆಯಲ್ಲಿ 1 ವರ್ಷದ ಅನುಭವ ಹೊಂದಿರಬೇಕು.
 ನೆರವು: ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 7 ಸಾವಿರ ರೂ. ಸ್ಟೈಪೆಂಡ್ ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಎಪ್ರಿಲ್ 15, 2019
ಅರ್ಜಿ: ಇ-ಮೇಲ್ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/SF39
**************
ವಿದ್ಯಾರ್ಥಿವೇತನ
(ಸಂಶೋಧನಾ ಮಟ್ಟ):
 ಸಾರ್ಕ್ ಕೃಷಿ ಪಿಎಚ್‌ಡಿ ಸ್ಕಾಲರ್‌ಶಿಪ್ 2019

ವಿವರ: ಕೃಷಿವಿಜ್ಞಾನ ಅಧ್ಯಯನ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳಿಗೆ ಸಾರ್ಕ್ ಕೃಷಿ ಕೇಂದ್ರ (ಎಸ್‌ಎಕೆ)ವು, ಐಸಿಎಆರ್, ಹೊಸದಿಲ್ಲಿಯ ಕ್ಯಾಂಪಸ್‌ನಲ್ಲಿ 3 ವರ್ಷ ಪಿಎಚ್‌ಡಿ ಅಧ್ಯಯನ ನಡೆಸಲು ಅವಕಾಶ ಮಾಡಿಕೊಟ್ಟಿದೆ.
ಅರ್ಹತೆ: ನ್ಯಾಷನಲ್ ಎಗ್ರಿಕಲ್ಚರಲ್ ರಿಸರ್ಚ್, ಎಜುಕೇಶನ್ ಆ್ಯಂಡ್ ಎಕ್ಸ್ ಟೆನ್ಷನ್ ಸಿಸ್ಟಮ್‌ನ ವಿದ್ಯಾರ್ಥಿಯಾಗಿರಬೇಕು ಮತ್ತು ಕೃಷಿ ವಿಜ್ಞಾನ ಹಾಗೂ ಸಂಬಂಧಿತ ಕ್ಷೇತ್ರಗಳಲ್ಲಿ ಸ್ನಾತಕೋತ್ತರ ಪದವೀಧರನಾಗಿದ್ದು ಬಯೊಟೆಕ್ನಾಲಜಿಯಲ್ಲಿ ಪಿಎಚ್‌ಡಿ ನಡೆಸಲು ಬಯಸುವ, 40 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರದ ಭಾರತೀಯರು ಅರ್ಜಿ ಸಲ್ಲಿಸಬಹುದು.
 ನೆರವು: ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂಪೂರ್ಣ ಬೋಧನಾ ಶುಲ್ಕ ಮನ್ನಾ, ತಿಂಗಳಿಗೆ 600 ರೂ. ಅಮೆರಿಕನ್ ಡಾಲರ್ ಸ್ಟೈಪೆಂಡ್, ಸಂಶೋಧನಾ ವೆಚ್ಚವಾಗಿ ವಾರ್ಷಿಕ 1 ಸಾವಿರ ಅಮೆರಿಕನ್ ಡಾಲರ್ ಅನುದಾನ, ಅಧ್ಯಯನ ಸಾಮಗ್ರಿ, ವಿಮಾನ ಯಾನ ವೆಚ್ಚಕ್ಕೆ ಒಂದು ಬಾರಿ 1 ಸಾವಿರ ಅಮೆರಿಕನ್ ಡಾಲರ್ ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಎಪ್ರಿಲ್ 15, 2019
ಅರ್ಜಿ: ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ 2 ಹಂತದಲ್ಲಿ ಅರ್ಜಿ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/SAP2
***************

ವಿದ್ಯಾರ್ಥಿವೇತನ
(ಸಂಶೋಧನಾ ಮಟ್ಟ):

ಇಂಟರ್‌ನ್ಯಾಷನಲ್ ಪೋಸ್ಟ್ ಡಾಕ್ಟೋರಲ್ ಫೆಲೊಶಿಪ್ ಇನ್ ಮರೈನ್ ಸೈಯನ್ಸ್ 2018
ವಿವರ: ಸಾಗರ ವಿಜ್ಞಾನದಲ್ಲಿ ಪೋಸ್ಟ್‌ಡಾಕ್ಟೋರಲ್ ಸಂಶೋಧನೆ ನಡೆಸಲು ಫ್ರಾನ್ಸ್‌ನ ಲಬೆಕ್ಸ್ ಮೆರ್ ಸಂಸ್ಥೆ, ಫ್ರಾನ್ಸ್‌ನ ಐಸ್‌ಬ್ಲೂ ಲ್ಯಾಬೊರೇಟರಿಯಲ್ಲಿ 2 ವರ್ಷದ ಫೆಲೊಶಿಪ್ ಕಾರ್ಯಕ್ರಮದಡಿ ಅರ್ಜಿ ಆಹ್ವಾನಿಸಿದೆ.
 ಅರ್ಹತೆ: ಸಾಗರ ವಿಜ್ಞಾನ ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವೀಧರರು (ಕಳೆದ 3 ವರ್ಷದ ಹಿಂದೆ ಪಡೆದವರು) ಅರ್ಹರು.
 ನೆರವು: ಆಯ್ಕೆಯಾದ ಅಭ್ಯರ್ಥಿಗಳಿಗೆ ಸ್ಟೈಪೆಂಡ್ ರೂಪದಲ್ಲಿ ತಿಂಗಳಿಗೆ 2400 ಯುರೊ, ಜೊತೆಗೆ ಸಂಶೋಧನೆ ಸಂಬಂಧಿತ ವೆಚ್ಚಗಳಿಗೆ ಹಾಗೂ ಪ್ರಯಾಣ ವೆಚ್ಚಕ್ಕೆ ಆರ್ಥಿಕ ನೆರವು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಎಪ್ರಿಲ್ 15, 2019
ಅರ್ಜಿ: ಇ-ಮೇಲ್ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/IPF10

********************
 ವಿದ್ಯಾರ್ಥಿವೇತನ
(ರಾಷ್ಟ್ರೀಯ ಮಟ್ಟ):
ಎನ್‌ಹ್ಯಾನ್ಸ್ ಡಿಪ್ರೆಷನ್ ಕ್ಯಾರ್(ಎಸ್ಸೆನ್ಸ್) ಫೆಲೊಶಿಪ್ 2019

ವಿವರ: ಭೋಪಾಲದ ಸಂಗತ್ ಸಂಸ್ಥೆಯು ಆರೋಗ್ಯ ಮತ್ತು ಮಾನಸಿಕ ಆರೈಕೆ ಕ್ಷೇತ್ರದ ವಿದ್ಯಾರ್ಥಿಗಳು ಸಂಶೋಧನಾ ಅಧ್ಯಯನ ನಡೆಸಲು ನೀಡುವ ಫೆಲೊಶಿಪ್ ಇದಾಗಿದೆ. ಮಧ್ಯಪ್ರದೇಶದಲ್ಲಿ ವೈಜ್ಞಾನಿಕ ತರಬೇತಿ ಮತ್ತು ಸಂಶೋಧನಾ ಕಾರ್ಯಕ್ರಮ ಅನುಷ್ಠಾನಗೊಳಿಸಲು ಆರ್ಥಿಕ ನೆರವು ಮತ್ತು ಜೀವನಾಧಾರ ಭತ್ತೆ ಒದಗಿಸಲಾಗುವುದು.
ಅರ್ಹತೆ: ಆರೋಗ್ಯ ಮತ್ತು ಮಾನಸಿಕ ಆರೈಕೆ ವಿಭಾಗದ ವಿದ್ಯಾರ್ಥಿಗಳು ಒಂದು ವರ್ಷದ ಅನುಭವ ಹೊಂದಿದ್ದರೆ ಅರ್ಜಿ ಸಲ್ಲಿಸಬಹುದು. ಮಾನಸಿಕ ಆರೈಕೆ ವಿಭಾಗದಲ್ಲಿ ಈ ಮೊದಲು ಅನುಭವ ಹೊಂದಿದ್ದರೆ ಅಂತಹ ವಿದ್ಯಾರ್ಥಿಗಳೂ ಅರ್ಜಿ ಸಲ್ಲಿಸಬಹುದು.
 ನೆರವು: ಆಯ್ಕೆಯಾದ ಅಭ್ಯರ್ಥಿಗಳಿಗೆ 8500 ಅಮೆರಿಕನ್ ಡಾಲರ್ ಮೊತ್ತದ, ಜೊತೆಗೆ ಪ್ರಯಾಣ, ಆಹಾರ ಮತ್ತು ವಾಸ್ತವ್ಯ ಭತ್ತೆ ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಎಪ್ರಿಲ್ 15, 2019
ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಜಾಲತಾಣ: http://www.b4s.in/bharati/EDC6

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)