varthabharthi

ಗಲ್ಫ್ ಸುದ್ದಿ

ಐಎಸ್ಎಫ್ ಬುರೈದ ಘಟಕ: ರಾಜಕೀಯ ಪರಿಸ್ಥಿತಿಯ ಸಾರ್ವಜನಿಕ ಸಭೆ

ವಾರ್ತಾ ಭಾರತಿ : 14 Apr, 2019

ಬುರೈದ: ಇಂಡಿಯನ್ ಸೋಶಿಯಲ್ ಫೋರಂ ಬುರೈದ ಕರ್ನಾಟಕ ಘಟಕ ವತಿಯಿಂದ ಪರ್ಯಾಯ ರಾಜಕೀಯದ ಅವಶ್ಯಕತೆ ಎಂಬ ವಿಷಯದಲ್ಲಿ ಸಾರ್ವಜನಿಕ ಸಭೆಯು ಗುರುವಾರ ಸೌದಿ ಅರೇಬಿಯಾದ ಬುರೈದದ ಲೈಸ್ ಇಸ್ತಿರಾಹ್ ನಲ್ಲಿ  ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಂಡಿಯನ್ ಸೋಶಿಯಲ್ ಫೋರಂ ಬುರೈದ ಕರ್ನಾಟಕ ಘಟಕಾಧ್ಯಕ್ಷ ಮಹಮ್ಮದ್ ಸಯೀದ್ ವಹಿಸಿ, ಸುಲೈಮಾನ್ ಅಡ್ಡೂರ್ ಕಿರಾಅತ್ ಪಠಿಸೋದರ ಮೂಲಕ ಸಭೆಯು ಪ್ರಾರಂಭವಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಇಂಡಿಯಾ ಫ್ರೆಟರ್ನಿಟಿ ಫೋರಂ ರಿಯಾದ್, ಕರ್ನಾಟಕ ಚಾಪ್ಟರ್ ಅಧ್ಯಕ್ಷ ಇಸ್ಮಾಯಿಲ್ ಯೂಸುಫ್  ಮಾತನಾಡಿ ಭಾರತೀಯ ಮುಸ್ಲಿಮರು ಸಬಲೀಕರಣಗೊಳ್ಳಲು ರಾಜಕೀಯವಾಗಿ ಬಲಿಷ್ಠರಾದರೆ ಮಾತ್ರ ಸಾಧ್ಯ ಎಂದ ಅವರು, ಕರ್ನಾಟಕದಲ್ಲಿ ರಾಜಕೀಯವಾಗಿ ಕಾಂಗ್ರೆಸ್ ಪಕ್ಷ ಮುಸ್ಲಿಮರನ್ನು ಕಡೆಗಣಿಸುತ್ತಾ ಬಂದಿದೆ. ಅತೀ ಹೆಚ್ಚು ಮುಸ್ಲಿಂ ಬಾಹುಳ್ಯವಿರುವ ಕರ್ನಾಟಕದ ದಕ್ಷಿಣ ಕನ್ನಡದಲ್ಲಿ ಮುಸ್ಲಿಂ ನಾಯಕರಿಗೆ ಸತತವಾಗಿ ಲೋಕಸಭೆಗೆ ಟಿಕೆಟ್ ನೀಡದೆ ವಂಚಿಸಿದೆ. ಈ ಕಾರಣದಿಂದ ದೌರ್ಜನ್ಯಗೊಳಗಾದ ಸಮುದಾಯದ ಪರವಾಗಿ ಮಾತನಾಡಲು ಪರ್ಯಾಯ ರಾಜಕೀಯದ ಅವಶ್ಯಕತೆ ಇದೆ ಆದ್ದರಿಂದ ಮಂಗಳೂರು ಲೋಕಸಭಾ ಕ್ಷೇತ್ರದ ಎಸ್ಡಿಪಿಐ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ನಿಷ್ಠಾವಂತ ನಾಯಕ, ಹೋರಾಟಗಾರ, ಸಾಹಿತಿ ಇಲ್ಯಾಸ್ ಮೊಹಮ್ಮದ್  ತುಂಬೆ ಅವರನ್ನು ಪ್ರೋತ್ಸಾಹಿಸಬೇಕಾಗಿ ವಿನಂತಿಸಿದರು.

ಇಂಡಿಯನ್ ಸೋಷಿಯಲ್ ಫೋರಂ, ರಿಯಾದ್ ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ಅಬ್ದುಲ್ ರವೂಫ್ ಸಮಾರೋಪ ಭಾಷಣ ಮಾಡಿದರು.

ಅಧ್ಯಕ್ಷೀಯ ಭಾಷಣಗೈದ ಇಂಡಿಯನ್ ಸೋಶಿಯಲ್ ಫೋರಂ ಬುರೈದ ಕರ್ನಾಟಕ ಘಟಕಾಧ್ಯಕ್ಷ ಮಹಮ್ಮದ್ ಸಯೀದ್ ಸಂಕಷ್ಟದಲ್ಲಿರುವ ಅನಿವಾಸಿ ಭಾರತೀಯರಿಗೆ ಇಂಡಿಯನ್ ಸೋಷಿಯಲ್ ಫೋರಂ ಸೌದಿ ಅರೇಬಿಯಾದ್ಯಂತ ಕಳೆದ ಕೆಲವು ವರ್ಷದಿಂದ ಅವಿರತವಾಗಿ ಶ್ರಮಿಸುತ್ತಿದೆ ಮತ್ತು ಬುರೈದ ಘಟಕದ ಸಾಮಾಜಿಕ ಸೇವೆಯನ್ನು ವಿವರಿಸಿದರು.

ಇಂಡಿಯಾ ಫ್ರೆಟರ್ನಿಟಿ ಫೋರಂ ಬುರೈದ ಕರ್ನಾಟಕ ಚಾಪ್ಟರ್ ಇದರ ಅಧ್ಯಕ್ಷ ಅಬ್ದುಲ್ ರಶೀದ್ ಉಚ್ಚಿಲ, ಅಡ್ಡೂರ್ ಗಲ್ಫ್ ಕಮಿಟಿ ಅಧ್ಯಕ್ಷ ಎ.ಕೆ ಅಬ್ದುಲ್ ರಝಾಕ್, ಅಬ್ಬಾಸ್ ಆಲಿ ಕುಕ್ಕುವಳ್ಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಪಾಲ್ಗೊಂಡ ಸಭಿಕರಿಗೆ ವಿವಿಧ ಕ್ರೀಡೆಯನ್ನು ನಡೆಸಿಕೊಡಲಾಯಿತು. ಕ್ರಿಕೆಟಿನಲ್ಲಿ ನಜಮ್ ಬುರೈದ ಮೊದಲ ಪ್ರಶಸ್ತಿಯನ್ನು ಪಡೆದರೆ, ಉನೈಝ ಗೈಸ್ ದ್ವಿತೀಯ ಪ್ರಶಸ್ತಿಯನ್ನು ಪಡೆಯಿತು. ಹಗ್ಗ ಜಗ್ಗಾಟದಲ್ಲಿ ಫೈನಲ್ ನಲ್ಲಿ ಸೆಣಸಾಡಿದ ಉನೈಝ ಗೈಸ್ ತಂಡವು ಜಯಶಾಲಿಯಾದರೆ, ನಜಮ್ ತಂಡವು ದ್ವಿತೀಯ ಸ್ಥಾನವನ್ನು ಪಡೆಯಿತು.

ಐ.ಎಸ್.ಎಫ್ ಬುರೈದ  ಪ್ರಧಾನ ಕಾರ್ಯದರ್ಶಿ ಅಯ್ಯುಬ್ ಉಪ್ಪಿನಂಗಡಿ  ಸ್ವಾಗತಿಸಿ,  ಮೊನುದ್ದೀನ್ ಕಾಂಜರ್ ಕಟ್ಟೆ  ವಂದಿಸಿದರು. ರಫೀಕ್ ಬೆಳ್ತಂಗಡಿ ಕಾರ್ಯಕ್ರಮವನ್ನು ನಿರೂಪಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)