varthabharthi

ಬೆಂಗಳೂರು

ಚುನಾವಣಾಧಿಕಾರಿಗಳಿಂದ ಕೇಂದ್ರ ಸಚಿವ ಸದಾನಂದ ಗೌಡರ ವಾಹನ ತಪಾಸಣೆ

ವಾರ್ತಾ ಭಾರತಿ : 15 Apr, 2019

ಬೆಂಗಳೂರು, ಎ.15: ಕೇಂದ್ರ ಸಚಿವ ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದ ಗೌಡ ಅವರ ವಾಹನವನ್ನು ಚುನಾವಣಾ ಅಧಿಕಾರಿಗಳು ಇಂದು ಬೆಳಗ್ಗೆ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ತಪಾಸಣೆ ನಡೆಸಿದರು.

 ಇಂದು ಬೆಳಗ್ಗೆ ಬೆಂಗಳೂರಿನ ಮಾಗಡಿ ರಸ್ತೆಯ ದೊಡ್ಡ ಗೊಲ್ಲರಹಟ್ಟಿಯ ಬಳಿ ಬರುತ್ತಿದ್ದ ಡಿ.ವಿ.ಸದಾನಂದ ಗೌಡ ಅವರ ಕಾರನ್ನು ನಿಲ್ಲಿಸಿದ ಚುನಾವಣಾ ಅಯೋಗದ ಸಿಬ್ಬಂದಿ ತಪಾಸಣೆ ನಡೆಸಿದರು. ಕಾರಿಂದ ಇಳಿದು ಸಹಕರಿಸಿದ ಸಚಿವರು ಪರಿಶೀಲನೆಯ ಬಳಿಕ ಕಾರನ್ನೇರಿ ಪ್ರಯಾಣ ಮುಂದುವರಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)